ಗೋಲ್ಡನ್ ಗ್ಯಾಂಗ್‌ನಲ್ಲಿ ನಿನಾಸಂ ಸತೀಶ್ ಸ್ನೇಹಿತರಿಂದ ಮಸ್ತ್ ಫನ್!

ಕನ್ನಡ ಕಿರುತೆರೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಕಾರ್ಯಕ್ರಮ ಗೋಲ್ಡನ್ ಗ್ಯಾಂಗ್. ಈ ಕಾರ್ಯಕ್ರಮದಲ್ಲಿ, ಪ್ರತಿ ವಾರಾಂತ್ಯದಲ್ಲಿ ಒಂದು ಗೋಲ್ಡನ್ ಗ್ಯಾಂಗ್ ಎಂಟ್ರಿ ಕೊಡುತ್ತದೆ. ಅದು ಕನ್ನಡ ಚಿತ್ರತಾರೆಯರ ಸ್ನೇಹಿತರ ಗ್ಯಾಂಗ್ ಆಗಿರುತ್ತದೆ. ಹಾಗಾಗಿ ಪ್ರತಿ ವಾರ ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. ಈ ವಾರ ಜನರನ್ನು ರಂಜಿಸಲು ಗೋಲ್ಡನ್ ಗ್ಯಾಂಗ್‌ಗೆ ನೀನಾಸಂ ಸತೀಶ್ ಮತ್ತು ಸ್ನೇಹಿತರ ಬಳಗ ಬಂದಿದೆ.

ಪ್ರತಿ ವೀಕೆಂಡ್‌ನಲ್ಲಿ ಜನರನ್ನು ರಂಜಿಸುತ್ತಿರೋ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಈಗಾಗಲೇ ಪ್ರೇಕ್ಷಕರ ಮನಗೆದಿದ್ದೆ. ಗೋಲ್ಡನ್ ಗ್ಯಾಂಗ್​ಗೆ ಬಂದ ನೀನಾಸಂ ಸತೀಶ್ ಅಂಡ್ ಟೀಮ್ ಸಖತ್ ಎಂಜಾಯ್ ಮಾಡಿದ್ದಾರೆ. ಈ ಬಾರಿ ನಟ ಸತೀಶ್ ನೀನಾಸಂ ಅವರು ಗೋಲ್ಡನ್ ಗ್ಯಾಂಗ್ ಸೆಟ್​ಗೆ ತಮ್ಮ ಸಿನಿಮಾ ಸ್ನೇಹಿತರೊಂದಿಗೆ ಬಂದಿದ್ದಾರೆ. ಲೂಸಿಯಾ ಹಾಗೂ ಅಯೋಗ್ಯ ಚಿತ್ರ ತಂಡದ ಜೊತೆ ನೀನಾಸಂ ಸತೀಶ್ ಹೇಗೆ ತಮ್ಮ ಸ್ನೇಹ ಬೆಳೆಸಿದಿದ್ದು, ಅದನ್ನು ಉಳಿಸಿಕೊಂಡು ಬಂದಿದ್ದಾರೆ ಎನ್ನುವುದು ಈ ವಾರದಲ್ಲಿ ರಿವೀಲ್ ಆಗಲಿದೆ.

ಸತೀಶ್​ಗೆ ಆತ್ಮೀಯರಾಗಿರೋ ಗಾಯಕ ನವೀನ್ ಸಜ್ಜು ತಮ್ಮ ಹಾಗೂ ಸತೀಶ್ ನಡುವಿನ ಕುಚುಕು ಗೆಳೆತನದ ಬಗ್ಗೆ ಗೋಲ್ಡನ್ ಗ್ಯಾಂಗ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಇಬ್ಬರು ಮೊದಲಿನಿಂದಲೂ ಸ್ನೇಹಿತರು, ಅದರಲ್ಲಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಬಳಿಕ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಹಾಗಾಗಿ ನವೀನ್ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

More Fun In Kannda Reality Show Golden Gang This Weekend

ಇನ್ನು ಈ ಟೀಮ್‌ನಲ್ಲಿ ನಟಿ ಸಿಂಧು ಲೋಕನಾಥ್ ಅವರು ಕೂಡ ಇದ್ದಾರೆ. ನೀನಾಸಂ ಜೊತೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆ ಯಶ್ ಅವರ ಡ್ರಾಮಾ ಚಿತ್ರದಲ್ಲೂ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಇಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪರಿಚಯ ಸಿನಿಮಾಗೆ ಮಾತ್ರ ಸೀಮಿತ ಆಗದೆ. ಸ್ನೇಹವಾಗಿ ಮುಂದುವರೆದಿದೆ.

ಗೋಲ್ಡನ್ ಗ್ಯಾಂಗ್‌ನಲ್ಲಿ ಬರೋ ಸ್ನೇಹಿತರಿಗೆ ನಿರೂಪಕ ಗಣೇಶ್ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿ ಸಾಕಷ್ಟು ವಿಚಾರಗಳನ್ನು ಆ ತಂಡ ರಿವೀಲ್ ಮಾಡುತ್ತದೆ. ಸಿನಿಮಾ ಜರ್ನಿ, ಸ್ನೇಹದ ಜರ್ನಿ, ಬದುಕಿನ ಪಯಣವನ್ನೂ ಕೂಡ ಈ ಗ್ಯಾಂಗ್‌ನಲ್ಲಿ ಬಿಚ್ಚಿಡಲಾಗುತ್ತದೆ. ಕಳೆದ ನೋವು ನಲಿವಿನ ದಿನಗಳನ್ನೂ ಕೂಡ ಹಂಚಿಕೊಳ್ಳುತ್ತಾರೆ.

ಇನ್ನು ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್, ನಟ ಶಿವರಾಜ್ ಕೆ.ಆರ್ ಪೇಟೆ ಹಾಗೂ ಹಾಸ್ಯನಟ ಗಿರಿ ಸಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ಗಾಯಕ ನವೀನ್ ಸಜ್ಜು ಸಹ ನೀನಾಸಂ ಸತೀಶ್ ಜೊತೆಯ ಒಳ್ಳೆಯ ಫ್ರೆಂಡ್ ಶಿಪ್ ಹೊಂದಿದ್ದಾರೆ. ಗೊಲ್ಡನ್ ಗ್ಯಾಂಗ್ಗೆ ಬಂದ ನವೀನ್ ಸಾಂಗ್ ಹಾಡಿ ಎಲ್ಲರನ್ನ ರಂಜಿಸಿದ್ರು.

ಈ ಗ್ಯಾಂಗ್‌ಗೆ ಕನೆಕ್ಟ್ ಆಗಿರುವ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಹಾಗೂ ನಟ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಲೂಸಿಯಾ ಚಿತ್ರ ನೀನಾಸಂ ಸತೀಶ್ ಅಭಿನಯದ ಮೊದಲ ಚಿತ್ರವಾಗಿದೆ. ಇಲ್ಲಿಂದ ಅವರು ಹಲವು ಸಿನಿಮಾ ಸ್ನೇಹಿತರನ್ನು ಹೊಂದಿದ್ದಾರೆ.

More from Filmibeat

English summary
More Fun In Kannda Reality Show Golden Gang This Weekend,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X