'ಒಗ್ಗರಣೆ ಡಬ್ಬಿ ಮುರಳಿ' ಬೆಳೆದು ಬಂದ ಕಥೆಯೇ ರೋಚಕ!

By ಪ್ರಿಯಾ ದೊರೆ

ಇಂದಿಗೂ 'ಒಗ್ಗರಣೆ ಡಬ್ಬಿ' ಮುರಳಿ ಎಂದೇ ಖ್ಯಾತಿ ಗಳಿಸಿರುವ ಮುರಳಿ ಅವರು ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮದ ಮೂಲಕ ಮನೆ ಮಾತಾದರು. ಸುಮಾರು 5-6 ವರ್ಷಗಳ ಕಾಲ ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ.

ಅಡುಗೆಯ ರುಚಿ ಹೇಗಿದೆ ಎಂಬುದನ್ನ ಸ್ಪಷ್ಟವಾಗಿ ಹೇಳುವ ಅತ್ಯುತ್ತಮ ಸಾಮರ್ಥ್ಯವನ್ನು ಮುರಳಿ ಅವರು ಹೊಂದಿದ್ದಾರೆ. ಅಡುಗೆ ಮಾಡುವುದು ಒಂದು ಕಲೆ. ಆದ್ರೆ, ಮಾಡಿದ ಅಡುಗೆಯ ರುಚಿ ಸವಿಯುವುದು ಕೂಡ ಕಲೆ. ಇಂತಹ ಕಲೆ ಮುರಳಿ ಅವರಿಗಿದೆ.

ಮುರಳಿ ಅವರಿಗೆ ಇಂತಹದ್ದೇ ಊಟ ಬೇಕು ಎಂಬುದಿಲ್ಲ. ರುಚಿಯಾಗಿದ್ದರೆ ಸಾಕು ಯಾವ ಊಟ ಬೇಕಿದ್ದರೂ ಮಾಡುತ್ತಾರಂತೆ. ಸಿಟಿ ಕೇಬಲ್ ಆಂಕರಿಂಗ್ ಶುರು ಮಾಡಿದ ಮುರಳಿ ಅವರು ಇಂದು ಸ್ಟಾರ್ ನಿರೂಪಕರಾಗಿ ಜನರ ಮನ ಗೆದಿದ್ದಾರೆ.

ಡ್ರೈವರ್ ಮಗನಾದ ಮುರಳಿ ಸಾಧನೆ!

ಡ್ರೈವರ್ ರಾಜಣ್ಣನ ಮಗನಾಗಿರುವ ಮುರಳಿ ಅವರು ಇಂದು ಸ್ಟಾರ್ ನಿರೂಪಕರಾಗಿರುವುದು ಸಾಧನೆಯೇ ಸರಿ. ಕನ್ನಡ ಮೀಡಿಯಂನಲ್ಲಿ ಓದಿದ ಮುರಳಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಡಿಪ್ಲೋಮಾ ಮಾಡಿದ್ದಾರೆ. ವೈಯಾಲಿಕಾವಲ್‌ನಲ್ಲಿ ಹುಟ್ಟಿದ ಇವರು, ಸದ್ಯ ಸದಾಶಿವನಗರದಲ್ಲಿ ನೆಲೆಸಿದ್ದಾರೆ. ಸ್ಟಾರ್ ಮೂವೀಸ್‌ನಲ್ಲಿ ಕೆಲಸ ಶುರು ಮಾಡಿದ ಮುರಳಿ ಅವರು, ಬಳಿಕ ನಿರೂಪಕರಾಗಿ ಮಿಂಚಿದರು. ಯಾವಾಗಲೂ ಖುಷಿಯಾಗಿರುವ ಮುರಳಿ ಅವರು, ಇರೋದ್ರಲ್ಲಿ ನೆಮ್ಮದಿಯಾಗಿರಬೇಕು ಎಂದು ಹೇಳುತ್ತಾರೆ.

ನಿರೂಪಕರಾಗಿ ಮಿಂಚಿದ ಮುರಳಿ!

ಮುರಳಿ ಅವರು ಮಾತು ಮುತ್ತು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದರಲ್ಲಿ ಒಂದು ನಿಮಿಷಗಳ ಕಾಲ ಮುರಳಿ ಅವರ ಜೊತೆಗೆ ಕಂಟೆಸ್ಟೆಂಟ್‌ಗಳು ಮಾತನಾಡಬೇಕಿತ್ತು. ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಈ ಕಾರ್ಯಕ್ರಮಕ್ಕೂ ಬರುವ ಮೊದಲೇ ಮುರಳಿ ಅವರು ಡೈರೆಕ್ಷನ್, ಆಕ್ಟಿಂಗ್ ಅನ್ನು ಕಲಿತಿದ್ದರು. ನಂತರ ಸಿಟಿ ಕೇಬಲ್ ಚಾನೆಲ್ ನಲ್ಲಿ ಹೆಲೋ ಸಿಟಿ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು. ಸ್ಟಾರ್ ಮೂವೀಸ್ ನಲ್ಲಿ ಕೆಲಸ ಮಾಡಿಕೊಂಡೇ ನಿರೂಪಣೆಯನ್ನು ಕೂಡ ಮುರಳಿ ಅವರು ಮಾಡುತ್ತಿದ್ದರು. ಸ್ಟಾರ್ ಮೂವೀಸ್‌ನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ್ದರು. ನಂತರ ಕೇಬಲ್ ಹಾಕುವ ಕೆಲಸಗಳನ್ನು ಮಾಡಿದರು.

ಒಗ್ಗರಣೆ ಡಬ್ಬಿ ಇಂದ ಕ್ಲಿಕ್!

ಮತ್ತೆ ಕೆಲ ವರ್ಷಗಳ ಕಾಲ ಬ್ರೇಕ್ ಪಡೆದ ಮುರಳಿ ಮತ್ತೆ ಒಗ್ಗರಣೆ ಡಬ್ಬಿ ಕಾರ್ಯಕ್ರಮಕ್ಕೆ ಬಂದರು. ಸುಮಾರು 5 ವರ್ಷಗಳ ಕಾಲ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದು ಮುರಳಿ ಅವರಿಗೆ ಹೆಸರು ತಂದುಕೊಟ್ಟಿತು ಕೂಡ. ಇದರಲ್ಲಿ ಮಾಡುವಾಗ ಸಾವಿರಾರು ಬಗೆ ಬಗೆಯ ತಿಂಡಿ ತಿನಿಸುಗಳನ್ನ ತಿಂದಿರಬಹುದಂತೆ. ಈ ಕಾರ್ಯಕ್ರಮದಿಂದ ಸಾಕಷ್ಟು ಜನ ತಮ್ಮ ಹೋಟೆಲ್‌ಗಳಿಗೆ ಮುರಳಿ ಅವರ ಫೋಟೋಗಳನ್ನು ಹಾಕಿಕೊಂಡಿದ್ದಾರೆ.

Recommended Video

Vikrant Rona Day 2 Collection | 2ನೇ ದಿನದ ಗಳಿಕೆ ಹೇಗಿದೆ . | Kiccha Sudeep Filmibeat Kannada

ರಿಯಾಲಿಟಿ ಶೋನಲ್ಲಿ ಮುರಳಿ!

ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ನಟ, ನಿರೂಪಕ ಮುರಳಿ ಬಿಗ್ ಬಾಸ್‌ನಲ್ಲು ಭಾಗವಹಿಸಿದ್ದರು. ಆದರ್ಶ ದಂಪತಿಗಳು ರಿಯಾಲಿಟಿ ಶೋ ಕೂಡ ನಡೆಸಿಕೊಟ್ಟಿದ್ದರು. ಅಲ್ಲದೇ, ಸೂಪರ್ ದಂಪತಿ ಎಂಬ ಕಾರ್ಯಕ್ರಮವನ್ನೂ ನಿರೂಪಣೆ ಮಾಡಿದ್ದರು. ಕಳೆದ ವರ್ಷ ಲೈಫ್ ಓಕೆ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೀಗ ಸವಿರುಚಿ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

More from Filmibeat

English summary
Actor Oggarane Dubbi Murali Biography And Life Story Is Here, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X