Praveen Rabakavi: 'ಜೋಕಾಲಿ' ಮ್ಯಾಡಿ ಕಮ್ ಬ್ಯಾಕ್.. ಆದರೆ ಈ ಪಾತ್ರ ಬೇಡ ಅಂತಿದ್ದಾರೆ ಫ್ಯಾನ್ಸ್ !

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಹೊಸದಾಗಿ ಒಂದು ಧಾರಾವಾಹಿ ಶುರುವಾಗಿದೆ. ಅದುವೇ 'ನೀನಾದೆ ನಾ' ಧಾರಾವಾಹಿ. ಖುಷಿ ಶಿವು ಹಾಗೂ ದಿಲೀಪ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಧಾರಾವಾಹಿ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ಅದರಲ್ಲಿ ಬಹಳ ಗಮನ ಸೆಳೆದ ಪಾತ್ರ ಪ್ರವೀಣ್ ಅವರದ್ದು.

ಪ್ರವೀಣ್ ಎಂದಾಕ್ಷಣಾ ಒಂದಷ್ಟು ಜನಕ್ಕೆ ಬೇಗ ನೆನಪಾಗುವುದು ಕಷ್ಟ ಸಾಧ್ಯವೆ ಬಿಡಿ. ಯಾಕಂದರೆ, ಪ್ರವೀಣ್ ಎಂಬ ಹೆಸರು ನೆನಪಲ್ಲಿ ಉಳಿದಿದ್ದಕ್ಕಿಂತ ಹೆಚ್ಚಾಗಿ ಮ್ಯಾಡಿ ಎಂಬ ಹೆಸರು ನೆನಪಲ್ಲಿ ಉಳಿದಿದ್ದೆ ಹೆಚ್ಚಾಗಿದೆ. 'ನೀನಾದೆ ನಾ' ಧಾರಾವಾಹಿ ಮೂಲಕ ಪ್ರವೀಣ್ ರಬಕವಿ ಕಮ್ ಬ್ಯಾಕ್ ಆಗಿದ್ದಾರೆ.

neenadhe-naa-kannada-serial

'ಜೋಕಾಲಿ'ಯಲ್ಲಿ ಮಿಂಚಿದ್ದ ಪ್ರವೀಣ್

ಈಗ ಧಾರಾವಾಹಿಗಳ ಯುಗ. ಕಿರುತೆರೆಯಲ್ಲಿ ಒಂದು ಅವಕಾಶ ಸಿಕ್ಕಿದರೂ ಸಾಕು, ಸಿನಿಮಾದಷ್ಟೇ ಫೇಮಸ್ ಆಗಿ ಬಿಡಬಹುದು ಎಂಬ ವಿಶ್ವಾಸವಿರುವ ಕಾಲ. ಸಿನಿಮಾದಲ್ಲಿದ್ದವರು ಕೂಡ ಧಾರಾವಾಹಿಯ ಕಡೆಗೆ ಬರುತ್ತಿದ್ದಾರೆ. ಈಗಿನ ಧಾರಾವಾಹಿಗಳಲ್ಲಿ ವೈಭವೀಕರಣ, ಶ್ರೀಮಂತಿಕೆ, ವಿಜೃಂಭಣೆ ಎದ್ದು ಕಾಣುತ್ತದೆ. ಆದರೆ 80-90 ದಶಕದಲ್ಲಿ ಬರುತ್ತಿದ್ದಂತ ಧಾರಾವಾಹಿಗಳೇ ಬೇರೆ ರೀತಿಯಲ್ಲಿ ಇರುತ್ತಿದ್ದವು. ಜನರನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ರೀತಿಯೇ ಬೇರೆ ಆಗಿತ್ತು. ಆ ಸಮಯದಲ್ಲಿ ಬಂದಂತಹ ಧಾರಾವಾಹಿ 'ಜೋಕಾಲಿ'. ಇದರಲ್ಲಿನ ಮ್ಯಾಡಿ ಕ್ಯಾರೆಕ್ಟರ್ ಅನ್ನು ಇಂದಿಗೂ ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ.

ಮೇಷ್ಟ್ರು ಮನೆಯ ಕಥೆಯಲ್ಲಿ ಪ್ರವೀಣ್

ಉದಯ ಟಿವಿಯಲ್ಲಿ ಅಂದು ಅಂದರೆ 2012ರಲ್ಲಿ 'ಜೋಕಾಲಿ' ಧಾರಾವಾಹಿ ಆರಂಭವಾಗಿತ್ತು. ಇಂದಿಗೆ 11 ವರ್ಷಗಳು ಆ ಧಾರಾವಾಹಿ ಆರಂಭವಾಗಿ. ಅದಾದ ಮೇಲೆ ಎರಡು-ಮೂರು ವರ್ಷಗಳು ಎಪಿಸೋಡ್ ಪ್ರಸಾರವಾಗಿದೆ. ಹನ್ನೊಂದು ವರ್ಷವಾದರೂ ಆ ಧಾರಾವಾಹಿಗಳ ಪಾತ್ರಗಳು ಮಾತ್ರ ಕಣ್ಣಲ್ಲಿ, ಮನಸ್ಸಲ್ಲಿ ಅಚ್ಚೊತ್ತಿದ್ದಂತೆ‌ ಕುಳಿತಿವೆ. ಈಗ ಹನ್ನೊಂದು ವರ್ಷಗಳ ಬಳಿಕ ಪ್ರವೀಣ್ ಅಲಿಯಾಸ್ ಮ್ಯಾಡಿ ಹಿಂತಿರುಗಿ ಬಂದಿದ್ದಾರೆ. ಸ್ಟಾರ್ ಸುವರ್ಣ ಧಾರಾವಾಹಿ 'ನೀನಾದೆ ನಾ' ಮೂಲಕ ಕಮ್ ಬ್ಯಾಕ್ ಆಗಿದ್ದಾರೆ.

neenadhe-naa-kannada-serial

ಮ್ಯಾಡಿ ಬಗ್ಗೆ ಇರುವ ನಿರೀಕ್ಷೆಗಳೇನು..?

ಇಷ್ಟು ವರ್ಷಗಳ ಕಾಲ ಅವರದ್ದೇ ಆದ ಕೆಲಸದಲ್ಲಿ ಮ್ಯಾಡಿ ಬ್ಯುಸಿಯಾಗಿದ್ದರಂತೆ. ಈಗ ಮತ್ತೆ ಕಿರುತೆರೆ ಲೋಕಕ್ಕೆ ಮರಳಿದ್ದಾರೆ. ಅವರಿಗೂ ಒಂದಷ್ಟು ಅಭಿಮಾನಿ ಬಳಗವಿದೆ. ಸದಾ ಪುಸ್ತಕದ ಬ್ಯಾಗನ್ನು ನೇತಾಕಿಕೊಂಡು ಓಡಾಡುವ ಪ್ರವೀಣ್ ರಬಕವಿ, ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟೀವ್ ಆಗಿಲ್ಲ. ತಮ್ಮದು ಅಂತ ಒಂದು Instagram ಅಕೌಂಟ್ ಸೃಷ್ಟಿ ಮಾಡಿದ್ದು, ಅದರಲ್ಲಿ ತಮ್ಮ ಮೂರು ಫೋಟೋಗಳನ್ನು ಹಾಕಿದ್ದಾರೆ. ಆದರೆ, ಅವರ ಅಭಿಮಾನಿಗಳ ಪೇಜ್ ಇದೆ. ಅದರಲ್ಲಿ ಅವರ ಹಳೆಯ ಧಾರಾವಾಹಿಗಳ ಕ್ಲಿಪ್ ಹಾಕಿ, ಸಂಭ್ರಮಿಸುತ್ತಿದ್ದಾರೆ. ಆದರೆ 'ನೀನಾದೆ ನಾ' ಧಾರಾವಾಹಿಯ ಈ ಪಾತ್ರ ಬೇಡ ಎಂದೇ ಹೇಳುತ್ತಿದ್ದಾರೆ ಫ್ಯಾನ್ಸ್.

ಪ್ರವೀಣ್ ಪಾತ್ರಕ್ಕೆ ಮಹತ್ವವಿದೆಯಾ..?

'ನೀನಾದೆ ನಾ' ಧಾರಾವಾಹಿ ಮೂಲಕ ಪ್ರವೀಣ್ ರಬಕವಿ ಕಮ್ ಬ್ಯಾಕ್ ಆಗಿದ್ದು ಎಲ್ಲರಿಗೂ ಖುಷಿಯ ವಿಚಾರವೇ. ಆದರೆ, ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ರೀತಿಗೂ, ಮ್ಯಾಡಿ ಪಾತ್ರದಲ್ಲಿ ನಟಿಸಿದ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ, ಈ ಪಾತ್ರ ಬೇಡ ಎನ್ನುತ್ತಿದ್ದಾರೆ. 'ಜೋಕಾಲಿ'ಯ ಮ್ಯಾಡಿಯಲ್ಲಿ ಗತ್ತು ಇತ್ತು. ಆರ್ಡರ್ ಮಾಡುತ್ತಿದ್ದರು. ತಾನು ಹೇಳಿದಂತೆ ನಡೆಯಬೇಕಿತ್ತು. ಸೊಕ್ಕು, ದುರಹಂಕಾರದ ವ್ಯಕ್ತಿಯಾಗಿದ್ದರು. ಆದರೆ ಈಗ 'ನೀನಾದೆ ನಾ' ಧಾರಾವಾಹಿಯಲ್ಲಿ ಅಸಹಾಯಕ ಮನುಷ್ಯ. ಮೇಷ್ಟ್ರ ಎರಡನೇ ಮಗ. ಆದರೆ, ಕೈಯಲ್ಲಿ ಕೆಲಸ ಇಲ್ಲ, ಮನೆಯಲ್ಲಿ ಮರ್ಯಾದೆ ಇಲ್ಲ, ಹೆಚ್ಚು ಡೈಲಾಗ್‌ಗಳು ಇಲ್ಲ. ಹೀಗಾಗಿ ನಮ್ಮ ಮ್ಯಾಡಿಯೇ ಬೇಕು, ಈ ರೀತಿಯ ಪಾತ್ರ ಬೇಡ ಎಂದೇ ಫ್ಯಾನ್ಸ್ ಸಲಹೆ ನೀಡುತ್ತಿದ್ದಾರೆ.

More from Filmibeat

English summary
:Actor Praveen Rabakavi making comeback with Neenadhe Naa serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X