For Quick Alerts
  ALLOW NOTIFICATIONS  
  For Daily Alerts

  ಮಹಿಳೆ ಮೇಲೆ ಹಲ್ಲೆ ಮಾಡಿ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಧಾರಾವಾಹಿ ನಟನ ಬಂಧನ

  |

  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ಬ್ಯಾಗ್ ಕದ್ದು ಪರಾರಿಯಾಗಿತ್ತಿದ್ದ ಖ್ಯಾತ ಧಾರಾವಾಹಿ ನಟನನ್ನು ಮುಂಬೈನ ಮಾಣಿಕ್ಪುರ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಈತ ಖ್ಯಾತ ಧಾರಾವಾಹಿ ನಟ ಮತ್ತು ನಿರ್ದೇಶಕ ಪುನೀತ್ ಸಿಂಗ್ ಎನ್ನುವುದು ಗೊತ್ತಾಗಿದೆ.

  ಶೈನ್ ಜೊತೆ ಹೋಳಿ ಹಬ್ಬದಲ್ಲಿ ಮಿಂದೆದ್ದ ಮೇಘಾ ಶೆಟ್ಟಿ | Shine Shetty | Megha Shetty | Filmibeat Kannada

  ಮುಂಬೈನ ವಾಸೈ ನಗರದಲ್ಲಿ ಈ ಘಟನೆ ನಡೆದಿದೆ. ನಿನ್ನೆ(ಮಾರ್ಚ್ 20) ಸಂಜೆ ಅರುಣಾ ನಾಯರ್ ಎನ್ನುವ ಮಹಿಳೆ ಇಬ್ಬರು ಮಕ್ಕಳು ಮತ್ತು ಸ್ನೇಹಿತೆಯರ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬೈಕ್ ನಲ್ಲಿ ಬಂದ ಪುನೀತ್ ಸಿಂಗ್ ಅರಣಾ ನಾಯರ್ ಬ್ಯಾಗ್ ಅನ್ನು ಎಳೆದಿದ್ದಾನೆ.

  ಟಿ.ಎನ್. ಸೀತಾರಾಮ್ ಹಂಚಿಕೊಂಡ ತಾಯಿಯೊಬ್ಬಳ ಹೃದಯಕಲಕುವ ಪತ್ರಟಿ.ಎನ್. ಸೀತಾರಾಮ್ ಹಂಚಿಕೊಂಡ ತಾಯಿಯೊಬ್ಬಳ ಹೃದಯಕಲಕುವ ಪತ್ರ

  ಅರುಣಾ ಬ್ಯಾಗ್ ಅನ್ನು ಕೈಗೆ ಹಾಕಿಕೊಂಡಿದ್ದರಿಂದ ಬ್ಯಾಗ್ ಎಳೆದ ತಕ್ಷಣ ಬಂದಿಲ್ಲ. ಬ್ಯಾಗ್ ಜೊತೆಯೆ ಮಹಿಳೆಯನ್ನು ರಸ್ತೆಯಲ್ಲಿಯೆ ಒಂದಿಷ್ಟು ದೂರ ಎಳೆದುಕೊಂಡು ಹೋಗಿದ್ದಾನೆ. ರಸ್ತೆಯಲ್ಲಿ ಎಳೆದಾಡಿದ ಹಿನ್ನಲೆ ಮಹಿಳೆಗೆ ತ್ರೀವ ಗಾಯಾವಾಗಿದ್ದು ಹಲ್ಲು ಮುರಿದುಹೋಗಿವೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಯನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗಿತ್ತಿದೆ.

  ಪುನೀತ್ ಸಿಂಗ್ ಬ್ಯಾಗ್ ಅನ್ನು ಕದ್ದು ಪರಾರಿಯಾಗುತ್ತಿದ್ದಂತೆ ಸ್ಥಳಿಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಆತ ಧಾರಾವಾಹಿ ಕಲಾವಿದ ಮತ್ತು ನಿರ್ದೇಶಕ ಎನ್ನುವುದು ಗೊತ್ತಾಗಿದೆ. ಆತ ನಿರ್ದೇಶನ ಮಾಡಿರುವ ಸಿನಿಮಾ ಇನ್ನು ರಿಲೀಸ್ ಆಗಿಲ್ಲವಂತೆ. ಈತ ಸಾಕಷ್ಟು ಕ್ರೈಂ ಆಧಾರಿತ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾನಂತೆ.

  Read more about: tv arrest ಟಿವಿ ಬಂಧನ
  English summary
  TV Actor Puneeth Singh arrested by Mumbai police allegedly trying to steal a 42-year-old woman’s purse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X