ನಾರದ ಮುನಿಯಾದ 'ಗಿಚ್ಚಿ ಗಿಲಿ ಗಿಲಿ' ರಾಘವೇಂದ್ರ ಅಲಿಯಾಸ್ ರಾಗಿಣಿ: ಧಾರಾವಾಹಿ ಯಾವುದು?

By ಅನಿತಾ ಬನಾರಿ

ಹಾಸ್ಯ ನಟ ರಾಘವೇಂದ್ರ ಯಾರಿಗೆ ಗೊತ್ತಪ್ಪ ಅಂತ ಕೇಳುವ ಬದಲು 'ಗಿಚ್ಚಿ ಗಿಲಿ ಗಿಲಿ' ರಾಗಿಣಿ ಯಾರಿಗೆ ಗೊತ್ತು ಎಂದು ಕೇಳಿದರೆ ಪ್ರೇಕ್ಷಕರು ಬೇಗ ಗುರುತಿಸಬಹುದು. 'ಮಜಾ ಭಾರತ' ಎಂಬ ರಿಯಾಲಿಟಿ ಶೋ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿಕೊಂಡು ಬಂದಿರುವ ನಟ ರಾಘವೇಂದ್ರ ಅವರು ನಂತರ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಹಾಗೂ ನಟನೆಯ ಮೂಲಕ ಬಹಳ ಸುದ್ದಿ ಮಾಡಿದರು. ಹಾಸ್ಯ ನಟನಾಗಿ ಪ್ರತಿ ವೇದಿಕೆಯಲ್ಲಿ ಜನರನ್ನು ನಗಿಸುವ ಇವರು ತಮ್ಮ ಸ್ತ್ರೀ ಪಾತ್ರಕ್ಕೆ ಸಖತ್ ಫೇಮಸ್.

ಅದರಲ್ಲೂ 'ಗಿಚ್ಚಿ ಗಿಲಿಗಿಲಿ' ಸೀಸನ್ ಒಂದು ಹಾಗೂ ಎರಡರಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದ ಇವರು ನಾನಾ ರೀತಿಯ ಸ್ತ್ರೀ ಪಾತ್ರಗಳನ್ನು ತೊಟ್ಟು ಜನ ಮನಗೆದ್ದರು. ಅಷ್ಟೇ ಅಲ್ಲದೆ ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಹಲವಾರು ರೀತಿಯ ಹಾಸ್ಯಾಸ್ಪದ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ ನಟ ರಾಘವೇಂದ್ರ.

Actor Raghavendra alias Ragini as Narada Muni in Sridevi Mahatme kannada serial

ಇದೇ ನಟ ರಾಘವೇಂದ್ರ ಅವರು ಇದೀಗ ಹೊಸ ಅವತಾರದಲ್ಲಿ ತೆರೆ ಮುಂದೆ ಬರಲಿದ್ದಾರೆ. ಹೌದು, 'ಶ್ರೀದೇವಿ ಮಹಾತ್ಮೆ' ಧಾರಾವಾಹಿಯಲ್ಲಿ ನಾರದ ಮುನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟ ರಾಘವೇಂದ್ರ. ಈ ಧಾರಾವಾಹಿಯಲ್ಲಿ ಈ ಹಿಂದೆ ನಾರದಮುನಿ ಪಾತ್ರವನ್ನು ವಹಿಸಿಕೊಂಡಿದ್ದ ನಟ ಕಾರಣಾಂತರಗಳಿಂದ ಈ ಧಾರಾವಾಹಿ ಇಂದ ಹೊರ ಬಂದಿದ್ದು ನಟ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಅಂದ ಹಾಗೆ ನಟ ರಾಘವೇಂದ್ರ ಅವರ ಒಂದಷ್ಟು ಫೋಟೋಗಳು ಕೂಡ ವೈರಲ್ ಆಗಿದೆ. ನಾರದ ಮುನಿಗಳ ವೇಷದಲ್ಲಿ ನಟ ರಾಘವೇಂದ್ರ ಅವರು ಬಹಳ ಚೆನ್ನಾಗಿ ಮಿಂಚುತ್ತಿದ್ದಾರೆ. ಈ ಹೊಸ ಲುಕ್‌ಗೆ ನೆಟ್ಟಿಗರು ಹಾಗೂ ಕಿರುತೆರೆ ಪ್ರೇಕ್ಷಕರಂತೂ ಬಹಳ ಖುಷಿ ಪಟ್ಟಿದ್ದಾರೆ. ಮೊದಲಿನಿಂದಲೂ ನಟನೆಯಲ್ಲಿ ಎತ್ತಿದ ಕೈಯಾಗಿರುವ ನಟ ರಾಘವೇಂದ್ರ ಅವರು ನಾರದ ಮುನಿಗಳ ಪಾತ್ರವನ್ನು ಬಹಳ ಚೆನ್ನಾಗಿ ನಟಲ್ ನಟಿಸಲಿದ್ದಾರೆ ಎಂಬಿತ್ಯಾದಿ ಅಭಿಪ್ರಾಯಗಳು ಬಂದಿವೆ.

Actor Raghavendra alias Ragini as Narada Muni in Sridevi Mahatme kannada serial

ಜಗತ್ತಿನ ಮೊಟ್ಟ ಮೊದಲ ಪತ್ರಕರ್ತ ಎಂದು ಹೆಸರುವಾಸಿ ಆಗಿರುವ ನಾರದ ಮುನಿಗಳನ್ನು 'ಕಲಹ ಪ್ರಿಯ' ಎಂದೂ ಕರೆಯುತ್ತಾರೆ. ವ್ಯಂಗ್ಯ ಹಾಸ್ಯದ ಮೂಲಕವೇ ನಾರದ ಮುನಿಗಳು ದೇವದೇವತೆಗಳ ನಡುವೆ ಸೇತುವೆಯಾಗಿ ನಿಂತವರು. ಇದೀಗ ಇಂತಹ ಪಾತ್ರವೊಂದನ್ನು ನಟ ರಾಘವೇಂದ್ರ ಅವರು ಯಾವ ರೀತಿ ನಟಿಸಿ ಜನಮನ ಗೆಲ್ಲುತ್ತಾರೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಿಗೆ ಹಾಗೂ ರಾಘವೇಂದ್ರ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಇಷ್ಟಲ್ಲದೇ ನಟ ರಾಘವೇಂದ್ರ ಅವರು ಈ ಮೊದಲು 'ಗಿಚ್ಚಿ ಗಿಲಿಗಿಲಿ'ಯಲ್ಲಿ ರಾಗಿಣಿ ಪಾತ್ರದ ಮೂಲಕ ಬಹಳಷ್ಟು ಫೇಮಸ್ ಆದರು. ಇವರಿಗೆ ರಾಗಿಣಿ ಎಂದೇ ಹೆಚ್ಚಿನ ಜನ ಗುರುತಿಸುವಂತಾಗಿತ್ತು. ಇತ್ತೀಚೆಗಷ್ಟೇ ಒಂದು ಕುಕಿಂಗ್ ಶೋನಲ್ಲಿ ಕಾಣಿಸಿಕೊಂಡ ಇವರು ಇನ್‌ಸ್ಟಾಗ್ರಾಂ ಕ್ವೀನ್ ರೇಷ್ಮಾ ಆಂಟಿ ಅವರೊಂದಿಗೆ ಫುಲ್ ಕಾಮಿಡಿ ಮಾಡಿ ವೈರಲ್ ಆಗಿದ್ದರು.

More from Filmibeat

English summary
Actor Raghavendra is charming on television through the role of Narada:
Read more about: tv actor ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X