ಕುಟುಂಬಕ್ಕಾಗಿ ಮಿಡಿಯುವ ಗೌತಮ್ ದಿವಾನ್ ಅಲಿಯಾಸ್ ರಾಜೇಶ್ ಬಣ್ಣದ ಬದುಕು
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ದಿವಾನ್ ಪತ್ನಿ ಹಾಗೂ ಮನೆಯವರಿಗೊಸ್ಕೋರ ಕಷ್ಟಪಡುವ ಶ್ರಮ ಜೀವಿ. ಮನೆಯವರೆಲ್ಲರೂ ಸುಖವಾಗಿರಬೇಕು ಎಂದು ಬಯಸುವ ಮುಗ್ಧ ಮನಸ್ಸು. ಭೂಮಿಕಾ ಜೊತೆಗೆ ರೊಮ್ಯಾಂಟಿಕ್ ಆಗಿಯೂ ಎಲ್ಲರೊಂದಿಗೆ ತಮಾಷೆಯಾಗಿ ಇರುವ ಗೌತಮ್ ದಿವಾನ್ ಸಂದರ್ಭ ಬಂದಾಗ ಬುದ್ಧಿವಂತಿಕೆಯಿಂದಲೂ ನಿಭಾಯಿಸುವ ವ್ಯಕ್ತಿ.
ಇನ್ನು ಭೂಮಿಕಾ ಕೂಡ ಕುಟುಂಬಕ್ಕಾಗಿ ಮಿಡಿಯುವ ವ್ಯಕ್ತಿತ್ವ. ಒಂದು ಧಾರಾವಾಹಿಯ ಮೂಲಕ ಗಂಡ-ಹೆಂಡತಿ ಹೇಗಿರಬೇಕು, ಮನೆಯಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿಕೊಡಲಾಗಿದೆ. ತಕ್ಕನಾಗಿ ಗೌತಮ್ ದಿವಾನ್ ಪಾತ್ರಧಾರಿ ನಟ ರಾಜೇಶ್ ನಟರಂಗ ಹಾಗೂ ಭೂಮಿಕಾ ಪಾತ್ರಧಾರಿ ನಟಿ ಛಾಯಾ ಸಿಂಗ್ ಕೂಡ ಉತ್ತಮವಾಗಿ ನಟಿಸಿದ್ದಾರೆ.

ನಟ ರಾಜೇಶ್ ನಟರಂಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರಿಗೆ ಮುದ್ದು ಮಗಳಿದ್ದು, ಮಗಳು ಕೂಡ ಬಹುಭಾಷಾ ನಟಿ. ಮಗಳ ಹೆಸರು ಧ್ವನಿ. ಬಾಲಿವುಡ್ ಹಾಗೂ ಮಳಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜೇಶ್ ಅವರ ಹುಟ್ಟಹಬ್ಬವನ್ನು ಮಗಳು ಮತ್ತು ಹೆಂತಿ ಜೊತೆಗೆ ಸೆಲಬ್ರೇಟ್ ಮಾಡಿದ್ದಾರೆ.
ಬೆಂಗಳೂರಿನ ನಟ ರಾಜೇಶ್
ರಾಜೇಶ್ ನಟರಂಗ ಅವರು ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟ. ನಟನೆ ಮಾತ್ರವಲ್ಲದೇ, ಒಳ್ಳೆ ಬರಹಗಾರರು ಹೌದು. ಹಲವು ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆ ಎರಡೂ ಕಡೆಗಳಲ್ಲೂ ಸಕ್ರಿಯರಾಗಿರುವ ರಾಜೇಶ್ ಅವರು ಸದ್ಯ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಮೂಲತಃ ಬೆಂಗಳೂರಿನವರೇ ಆಗಿರುವ ನಟ ರಾಜೇಶ್ ಅವರು ಬಸವನ ಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮಾಡುವಾಗಲೇ ನಟನೆಯತ್ತ ರಾಜೇಶ್ ಅವರಿಗೆ ಆಸಕ್ತಿ ಇತ್ತು. ಈ ಕಾರಣಕ್ಕಾಗಿಯೇ ರಂಗಭೂಮಿ ಸೇರಿದ್ದರು.
ಕಿರುತೆರೆಯಲ್ಲಿ ರಾಜೇಶ್ ನಟರಂಗ
ಬಳಿಕ ದೆಹಲಿಗೆ ತೆರಳಿದ ನಟ ರಾಜೇಶ್ ನಟರಂಗ ಅವರು ಮರಳಿ ಬಂದು ಧಾರಾವಾಹಿಯೊಂದರ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದರು. 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಎಂಬ ಎರಡು ಧಾರಾವಾಹಿಗಳಿಗೆ ರಾಜೇಶ್ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಬಳಿಕ ಉದಯ ಟಿವಿಯ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಮೊದಲ ಬಾರಿಗೆ 'ಮಾಯಾಮೃಗ' ಧಾರಾವಾಹಿಗೆ ಬಣ್ಣ ಹಚ್ಚಿ ಕ್ಯಾಮರಾ ಎದುರಿಸಿದರು. ಹೀಗೆ ಒಂದಾದ ಮೇಲೆ ಒಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಧಾರಾವಾಹಿಗಳಲ್ಲಿ ನಟಿಸಲು ಕೂಡ ಪ್ರಾರಂಭಿಸಿದರು. 'ಮಾಯಾಮೃಗ', 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತ ಗಾಮಿನಿ', 'ನಾನು ನನ್ನ ಕನಸು', 'ತ್ರಿವೇಣಿ ಸಂಗಮ' ಮುಂತಾದ ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರದಲ್ಲಿ ಮಿಂಚಿದರು. ಹಲವು ಕಿರುತೆರೆ ಸೀರಿಯಲ್‌ಗಳಿಗೆ ಸ್ಕ್ರಿಪ್ಟ್ ಬರೆದಿರುವ ಇವರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.

60 ಸಿನಿಮಾಗಳಲ್ಲಿ ನಟನೆ
ಹಲವು ವರ್ಷಗಳ ಹಿಂದೆ ಉದಯ ವಾಹಿನಿಯಲ್ಲಿ ಮೂಡಿ ಬಂದ 'ನಿನ್ನಿಂದಲೇ' ಧಾರಾವಾಹಿಯನ್ನು ರಾಜೇಶ್ ಅವರೇ ನಿರ್ಮಾಣ ಮಾಡಿದ್ದರು. ಇಷ್ಟೇ ಅಲ್ಲದೇ, ಸಿನಿಮಾ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಉಪೇಂದ್ರ ನಟನೆಯ 'ನಾಗರಹಾವು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಮೊಗ್ಗಿನ ಮನಸ್ಸು', 'ನಮ್ ನಾಣಿ ಮದುವೆ ಪ್ರಸಂಗ', 'ಬಳ್ಳಾರಿ ನಾಗ', 'ಜಸ್ಟ್ ಮಾತ್ ಮಾತಲ್ಲಿ', 'ಒಂದು ಸರಳ ಪ್ರೇಮ ಕಥೆ', 'ಆಪ್ತ ರಕ್ಷಕ', 'ನಾನು ನನ್ನ ಕನಸು', 'ಕಡ್ಡಿಪುಡಿ', 'ಗಜಕೇಸರಿ', 'ಕೆಂಡಸಂಪಿಗೆ', 'ತಾರಕ್', 'ಸಿರಿ ಲಂಬೋದರ ವಿವಾಹ', 'ಆಯುಷ್ಮಾನ್ ಭವ', 'ಯುವರತ್ನ', 'ಕೋಟಿಗೊಬ್ಬ- 3', 'ರತ್ನನ್ ಪ್ರಪಂಚ', 'ಗುರುದೇವ್ ಹೊಯ್ಸಳ', 'ಕಾಲಾಪತ್ಥರ್' ಸೇರಿದಂತೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











