ನಿನಾದ್ ಹರಿತ್ಸ ಮತ್ತು ಪ್ರಿಯಾಂಕಾರ 'ಆಸೆ' ಮೆಚ್ಚಿದ ನಟ ರಮೇಶ್ ಅರವಿಂದ್: ಹೇಳಿದ್ದೇನು?

ಇತ್ತೀಚೆಗೆ ಸ್ಟಾರ್ ಸುವರ್ಣದಲ್ಲಿ 'ಆಸೆ' ಧಾರಾವಾಹಿ ಪ್ರಸಾರ ಆರಂಭಿಸಿದೆ. ಕೆಲವೇ ದಿನಗಳಲ್ಲಿ ತನ್ನ ವಿನೂತನ ಕಥಾ ಹಂದರದಿಂದ ವೀಕ್ಷಕರ ಗಮನ ಸೆಳೆದಿದೆ 'ಆಸೆ' ಧಾರಾವಾಹಿ. 'ನಾಗಿಣಿ 2' ಧಾರಾವಾಹಿಯಿಂದ ಖ್ಯಾತಿ ಗಳಿಸಿದ್ದ ನಿನಾದ್ ಹರಿತ್ಸ ಮತ್ತು ಪುಣ್ಯವತಿ ಧಾರಾವಾಹಿಯ ಪದ್ಮಿನಿ ಆಗಿದ್ದ ಪ್ರಿಯಾಂಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

'ಆಸೆ' ಧಾರಾವಾಹಿಯಲ್ಲಿ ಹೂ ಮಾರುವ ಹುಡುಗಿ ಮೀನಾ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಸೂರ್ಯ ಪಾತ್ರದಲ್ಲಿ ನಿನಾದ್ ಹರಿತ್ಸ ನಟಿಸಿದ್ದಾರೆ. ಕೆಲವೇ ದಿನಗಳಲ್ಲಿ ವೀಕ್ಷಕರು ಧಾರಾವಾಹಿಯನ್ನು ಇಷ್ಟ ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಖ್ಯಾತ ನಟ ರಮೇಶ್ ಅರವಿಂದ್ ಕೂಡ 'ಆಸೆ'ಯನ್ನು ಮೆಚ್ಚಿಕೊಂಡಿದ್ದಾರೆ.

Actor Ramesh Aravind Appreciate New kannada serial Aase

ಆಸೆ ಧಾರಾವಾಹಿ ಕಥೆಯೇನು?

'ಆಸೆ' ಧಾರಾವಾಹಿ ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆ. ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಡಿಸೆಂಬರ್‌ 11 ರಿಂದ ಸಂಜೆ 7.30ಕ್ಕೆ ಆಸೆ ಪ್ರಸಾರವಾಗುತ್ತಿದೆ. ಸೋಮವಾರದಿಂದ ಶನಿವಾರದವರೆಗೂ ಪ್ರಸಾರ ಕಾಣಲಿದೆ.

'ಆಸೆ'ಯಲ್ಲಿ ನಟ ಮಂಡ್ಯ ರಮೇಶ್, ನಿನಾದ್‌ ಹರಿತ್ಸ, ಪ್ರಿಯಾಂಕಾ, ಸ್ನೇಹಾ ಈಶ್ವರ್, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರವು ಅದರದ್ದೇ ಆದ ತೂಕ ಹೊಂದಿದೆ. ಸೂರ್ಯ ತಂದೆ ಪಾತ್ರದಲ್ಲಿ ರಂಗಭೂಮಿ ಕಲಾವಿದ, ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.

'ಆಸೆ' ಯಲ್ಲಿ ಇಲ್ಲಿಯವರೆಗೂ ಆಗಿರುವುದೇನು...?

ಆಸೆ ಧಾರಾವಾಹಿಯಲ್ಲಿ ಸೂರ್ಯ ಮತ್ತು ಮೀನಾರ ಕೋಳಿ ಜಗಳ ನೋಡೋದೇ ಸಿಕ್ಕಾಪಟ್ಟೆ ಮಜಾವಾಗಿತ್ತು. ಇದಕ್ಕೆ ಈಗ ಎಮೋಷನಲ್ ಟಚ್ ನೀಡಲಾಗಿದ್ದು, ಮೀನಾ ತಂದೆ ಸಾವನ್ನಪ್ಪಿದ್ದಾರೆ. ಸೂರ್ಯ ತಂದೆ ಆಕೆಯನ್ನು ಮನೆಯ ಸೊಸೆ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಮನೆಯವರ ಸಂತೋಷಕ್ಕಾಗಿ ರಂಗನಾಥನ ಮನೆಗೆ ಸೊಸೆಯಾಗಲು ಒಪ್ಪಿದ್ದಾಳೆ ಹೂ ಮಾರುವ ಹುಡುಗಿ ಮೀನಾ. ಇನ್ನು, ಮೇಕಿಂಗ್ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಜೊತೆಗೆ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

Actor Ramesh Aravind Appreciate New kannada serial Aase

ನಟ ರಮೇಶ್ ಅರವಿಂದ್ ಹೇಳಿದ್ದೇನು?

ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಳ್ಳುವ ಜೊತೆಗೆ ನಟ ರಮೇಶ್ ಅರವಿಂದ್ ಕೂಡ ಹೆಚ್ಚು ಮೆಚ್ಚಿಕೊಂಡಿದ್ದಾರೆ. ಈ ಬಗ್ಎಗ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. " 'ಆಸೆ' ನನ್ನ ಮನಸಿಗೆ ತುಂಬಾ ಇಷ್ಟವಾಗಿರೋ ಧಾರಾವಾಹಿ, ಏಕೆಂದರೆ ಸಾಮಾನ್ಯ ಜನರ ಅಸಮಾನ್ಯ ಕಥೆಯಂತಿರೋ ಈ ಸೀರಿಯಲ್ ನಂಗೆ ನ್ಯಾಚುರಲ್ ಫೀಲ್ ಕೊಡುತ್ತಿದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರವನ್ನು ಈ ಕಥೆಯಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೀಗಾಗಿ 'ಆಸೆ' ಸೀರಿಯಲ್ ನಂಗೆ ತುಂಬಾ ಅಚ್ಚು ಮೆಚ್ಚು..." ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Ramesh Aravind appreciate star suvarna serial 'Aase'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X