For Quick Alerts
  ALLOW NOTIFICATIONS  
  For Daily Alerts

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆದ ರಮೇಶ್

  By Naveen
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಈಗ ನಟ ರಮೇಶ್ ಅರವಿಂದ್ ಆಗಮಿಸಿದ್ದಾರೆ. ರಮೇಶ್ ಕಾರ್ಯಕ್ರಮಕ್ಕೆ ಬಂದಿರುವ ಫೋಟೋ ಇದೀಗ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ರಮೇಶ್ ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ.

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮುಖ್ಯವಾಗಿ ಸ್ನೇಹಿತರಿಗಾಗಿ ಇರುವ ಕಾರ್ಯಕ್ರಮ. ಆದರೆ, ರಮೇಶ್ ಜೊತೆಗೆ ಬಂದಿರುವ ಅವರ ಆಪ್ತ ಸ್ನೇಹಿತ ಯಾರು ಎಂಬುದು ಇನ್ನು ನಿಗೂಢವಾಗಿದೆ. ಹಾಗೆ ಹೇಳಬೇಕು ಅಂದರೆ ಶಿವಣ್ಣ ಅವರೇ ರಮೇಶ್ ಗೆ ಹತ್ತಿರದ ಸ್ನೇಹಿತರು. ಈ ಹಿಂದೆಯೇ ಕೆಲ ಸಿನಿಮಾಗಳನ್ನು ಒಟ್ಟಿಗೆ ಮಾಡಿರುವ ಇವರು ಸಾಕಷ್ಟು ವರ್ಷದಿಂದ ಗೆಳೆಯರಾಗಿದ್ದಾರೆ. ವಿಶೇಷ ಅಂದರೆ, ರಮೇಶ್ ನಿರೂಪಣೆ ಮಾಡುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಅತಿಥಿ ಆಗಿ ಬಂದಿದ್ದರು. ಈಗ ಇದು ಉಲ್ಟಾ ಆಗಿದೆ. ಶಿವಣ್ಣ ನಿರೂಪಣೆ ಮಾಡುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ರಮೇಶ್ ಗೆಸ್ಟ್ ಆಗಿದ್ದಾರೆ.

  ಮಾನ್ವಿತಾ ರಾತ್ರಿ ಮಲಗುವ ಮುನ್ನ ಲಾಸ್ಟ್ ಮೆಸೇಜ್ ಮಾಡುವುದು ಇವರಿಗೇನೆ ಮಾನ್ವಿತಾ ರಾತ್ರಿ ಮಲಗುವ ಮುನ್ನ ಲಾಸ್ಟ್ ಮೆಸೇಜ್ ಮಾಡುವುದು ಇವರಿಗೇನೆ

  ಸದ್ಯ ರಮೇಶ್ ಕಾರ್ಯಕ್ರಮಕ್ಕೆ ಬಂದಿರುವ ಪೋಟೋ ಮಾತ್ರ ಲಭ್ಯವಾಗಿದ್ದು, ಅವರ ಸಂಚಿಕೆ ಯಾವಗ ಪ್ರಸಾರ ಆಗುತ್ತೆ ಎನ್ನುವುದು ತಿಳಿದಿಲ್ಲ. ಅಂದಹಾಗೆ, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಉಪೇಂದ್ರ - ಗುರುಕಿರಣ್, ಎರಡನೇ ಸಂಚಿಕೆಯಲ್ಲಿ ಶರಣ್, ಚಿಕ್ಕಣ್ಣ ಮತ್ತು ತರುಣ್ ಸುಧೀರ್, ಮೂರನೇ ಸಂಚಿಕೆಯಲ್ಲಿ ಧನಂಜಯ್, ವಸಿಷ್ಟ, ಮಾನ್ವಿತಾ ಹರೀಶ್ ಆಗಮಿಸಿದ್ದರು. ಈಗ ರಮೇಶ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವೀಕ್ಷಕರ ಸಂತಸಕ್ಕೆ ಕಾರಣ ಆಗಿದೆ.

  ಲೂಸ್ ಮಾದ ಯೋಗಿ ಅದಷ್ಟು ಬೇಗ ಅಪ್ಪ ಆಗಬೇಕಂತೆ ಲೂಸ್ ಮಾದ ಯೋಗಿ ಅದಷ್ಟು ಬೇಗ ಅಪ್ಪ ಆಗಬೇಕಂತೆ

  English summary
  Kannada actor Ramesh Aravind in Star Suvarna's new show 'No1 yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X