For Quick Alerts
  ALLOW NOTIFICATIONS  
  For Daily Alerts

  ಮಜಾ ಟಾಕೀಸ್‌ಗೆ ಹೊಸ ಎಂಟ್ರಿ: ಯಾರಿರಬಹುದು ಊಹಿಸಬಲ್ಲಿರಾ?

  |

  ಸೃಜನ್ ಲೋಕೇಶ್ ನಡೆಸಿಕೊಡುವ 'ಮಜಾ ಟಾಕೀಸ್‌' ಶೋ ಈಗಾಗಲೇ ರಾಜ್ಯದಲ್ಲಿ ಮನೆಮಾತಾಗಿದೆ. ಮಜಾ ಟಾಕೀಸ್‌ನ ಭಿನ್ನ-ಭಿನ್ನ ಪಾತ್ರಗಳ ಮೂಲಕ ನಗುವಿನ ಅಲೆ ಎಬ್ಬಿಸಿದ್ದಾರೆ ಸೃಜನ್ ಲೋಕೇಶ್.

  ಮಜಾ ಟಾಕೀಸ್‌ನಲ್ಲಿನ ಈಗಾಗಲೇ ಹಿಟ್ ಪಾತ್ರಗಳ ಜೊತೆಗೆ ಈಗ ಹೊಸದೊಂದು ಪಾತ್ರ ಸೇರಿಕೊಂಡಿದೆ. ಹೊಸ ಪಾತ್ರದ ಚಿತ್ರವನ್ನು ಸೃಜನ್ ಲೋಕೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಯಾರಿದು ಊಹಿಸಬಲ್ಲಿರಾ? ಎಂದು ಕೇಳಿದ್ದಾರೆ.

  ಮಜಾ ಟಾಕೀಸ್ ಅನ್ನು ಸೇರಲಿರುವ ಹೊಸ ಪಾತ್ರ ಈಗಾಗಲೇ ರಾಜ್ಯಕ್ಕೆ ಪರಿಚಯವಿರುವ ಪಾತ್ರವೇ. ಅದುವೇ 'ಡಾ.ವಿಠ್ಠಲ್ ರಾವ್'. ಹೌದು, ಸಿಲ್ಲಿ-ಲಲ್ಲಿ ಧಾರಾವಾಹಿಯಲ್ಲಿ ರವಿಶಂಕರ್ ನಿರ್ವಹಿಸುತ್ತಿದ್ದ ಡಾ.ವಿಠ್ಠಲ್ ರಾವ್ ಈಗ ಮಜಾ ಟಾಕೀಸ್‌ಗೂ ಬಂದಿದ್ದಾರೆ.

  ರವಿಶಂಕರ್ ಅವರು ಮಜಾ ಟಾಕೀಸ್‌ನಲ್ಲಿ ಹೊಸ ಪಾತ್ರವಾಗಿ ಎಂಟ್ರಿಕೊಟ್ಟಿದ್ದು, ಸೃಜನ್ ಲೊಕೇಶ್ ಹಂಚಿಕೊಂಡಿರುವ ಚಿತ್ರದಲ್ಲಿ ರವಿಶಂಕರ್, ವೈದ್ಯನ ಪೊಷಾಕಿನಲ್ಲಿದ್ದಾರೆ. ಹಾಗಾಗಿ ಇದು ಸಹ ಡಾ.ವಿಠ್ಠಲ್‌ರಾವ್ ಪಾತ್ರವೇ ಎಂದು ಅಂದಾಜಿಸಲಾಗುತ್ತಿದೆ.

  ಹುಡುಗಿ ಪಾತ್ರ ಮಾಡಿದ ರಾಘವೇಂದ್ರನ ಜೀವನ ಎಷ್ಟು ಕಷ್ಟ ಆಗಿದೆ ಗೊತ್ತಾ | Filmibeat Kannada

  ಹಿಂದಿಯ 'ದಿ ಕಪಿಲ್ ಶರ್ಮಾ ಶೋ' ನಲ್ಲಿದ್ದ 'ಡಾ.ಗುಲಾಟಿ' ಪಾತ್ರವನ್ನು ಹೋಲುವಂತಹಾ ಹೇರ್‌ಸ್ಟೈಲ್ ಹಾಗು ಉಡುಪು ಧರಿಸಿದ್ದಾರೆ ರವಿಶಂಕರ್. ಒಟ್ಟಿನಲ್ಲಿ ಅದ್ಭುತ ಹಾಸ್ಯನಟ ರವಿಶಂಕರ್, ಮಜಾ ಟಾಕೀಸ್‌ನ ಕಳೆಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

  English summary
  Actor Ravishankar joined Maja talkies show. Show's lead Srujan Lokesh shared Ravishankar's picture on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X