Ritvik: 'ರಾಮಾಚಾರಿ' ಪಬ್ಲಿಕ್‌ನಲ್ಲಿ ನಾನ್ ವೆಜ್ ತಿನ್ನಲ್ಲ, ಪಬ್‌ನಲ್ಲಿ ಕೂತು ಎಣ್ಣೆ ಹೊಡೆಯೊಲ್ಲ, ಯಾಕೆ ಗೊತ್ತಾ?
ಕಲರ್ಸ್ ಕನ್ನಡದಲ್ಲಿ ಬರುತ್ತಿರೋ 'ರಾಮಾಚಾರಿ' ಶುರುವಾಗಿ ಕೆಲ ವರ್ಷಗಳೇ ಕಳೆದಿದೆ. ಆದರೂ ಅದರೊಳಗಿನ ಪಾತ್ರಗಳೆಂದರೇ ವೀಕ್ಷಕರಿಗೆ ಬಲು ಪ್ರೀತಿ. ಅದರಲ್ಲೂ ರಾಮಾಚಾರಿ ಹಾಗೂ ಚಾರು ಅಂದ್ರೆ ಇನ್ನು ಇಷ್ಟ. ಆದರೆ ಒಮ್ಮೆ ಜೋಡಿಗಳು ಅಥವಾ ಆ ಪಾತ್ರದಲ್ಲಿ ಫೇಮಸ್ ಆಗೋದ್ರೆ ಲೈಫ್‌ನಲ್ಲಿ ಬೇಕು ಅಂದದ್ದನ್ನು ಈಸಿಯಾಗಿ ಪಡೆಯೋದಕ್ಕೂ ಕಷ್ಟವಾಗುತ್ತೆ. ಅದೇ ಅಲ್ವೇ ಸ್ಟಾರ್ ಡಂ ಕೋಡೋ ಗಿಫ್ಟ್.
ಇದೆಲ್ಲ ಹೇಳೋದಕ್ಕೆ ಕಾರಣ ರಿತ್ವಿಕ್ ಕೃಪಾಕರ್. 'ರಾಮಾಚಾರಿ' ಸೀರಿಯಲ್‌ನಲ್ಲಿ ರಿತ್ವಿಕ್ ತ್ರಿಪಾತ್ರವನ್ನ ಮಾಡಿದ್ದರು. ರಾಮಚಾರಿಯಾಗಿ, ಕಿಟ್ಟಿಯಾಗಿ, ಮಹಿಳೆಯಾಗಿ. ಅವರೊಬ್ಬ ಒಳ್ಳೆ ಕಲಾವಿದ ಎಂಬುದು ಇದರಿಂದಾನೇ ಅರ್ಥವಾಗಿತ್ತು. ಇದೀಗ ಆ ಸೀರಿಯಲ್ ಬಗ್ಗೆ ಇನ್ನಷ್ಟು ವಿಚಾರಗಳನ್ನ ರಾಮಾಚಾರಿ ಹಂಚಿಕೊಂಡಿದ್ದಾರೆ. ಅದು 'ಪಂಚಮಿ ಟಾಕ್ಸ್' ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ. ಆ ವಿಷಯ ಇಲ್ಲಿದೆ ನೋಡಿ.

ರಾಮಾಚಾರಿ ಬಗ್ಗೆ ರಿತ್ವಿಕ್ ಮಾತು
ಇತ್ತೀಚೆಗೆ ಜನ ನನ್ನ ರಾಮಾಚಾರಿ ಆಕ್ಟರ್ ಅಂತ ಗುರುತು ಹಿಡಿತಾರೆ. ಅದು ಖುಷಿ ಇದೆ. ಅದನ್ನ ಬಿಟ್ರೆ ಲೈಫ್ ನಾರ್ಮಲ್ ಆಗಿನೆ ಇದೆ. ಇನ್ನು ಸಾಧನೆ ಮಾಡಿಲ್ಲ ಅನ್ನೋ ಫೀಲ್ ಕೂಡ ಇದೆ. ನಾನು 10th ಇದ್ದಾಗಲೇ ಆಕ್ಟಿಂಗ್ ಮಾಡಬೇಕು ಅಂತಾನೇ ಇದ್ದದ್ದು. ಅಲ್ಲಿಂದ ಎಲ್ಲವೂ ನಟನೆಗೆ ಬೇಕಾದದ್ದನ್ನೇ ಕಲಿತಿದ್ದೀನಿ. ರಂಗಭೂಮಿಯಲ್ಲೂ ಕಲಿತು ಬಂದಿದ್ದೀನಿ. 'ರಾಮಾಚಾರಿ' ಸೀರಿಯಲ್ ಆ ಶ್ರಮವನ್ನೆಲ್ಲ ಹಾಕುವುದಕ್ಕೆ ಅವಕಾಶ ಸಿಕ್ತು.
ಸಕ್ಸಸ್ ಬಗ್ಗೆ ಏನಂತಾರೆ?
ಯಾವತ್ತು ಸಕ್ಸಸ್‌ಗೋಸ್ಕರ ಕೆಲಸ ಮಾಡಬಾರದು. ನಮ್ಮ ಅಪ್ಪ ಯಾವಾಗಲೂ ಹೇಳ್ತಾರೆ, ಕಸ ಗುಡಿಸೋದ್ರಲ್ಲಿ ನಿನಗೆ ಖುಷಿ ಸಿಗುತ್ತಾ ಅದನ್ನ ಮಾಡು. ಕೆಲಸ ಮಾಡೋದ್ರಲ್ಲಿ ಖುಷಿ ಸಿಗ್ಬೇಕು. ಈಗ ಸೀರಿಯಲ್ ಮಾಡ್ತಾ ಇರೋದ್ರಲ್ಲೂ ಅಷ್ಟೇ ನಂಗೆ ಖುಷಿ ಸಿಕ್ತಾ ಇದೆ. ಅದಕ್ಕಾಗಿ ಸೀರಿಯಲ್ ಮಾಡ್ತಿದ್ದೀನಿ. ಸಕ್ಸಸ್‌ಗೋಸ್ಕರ ನಾನು ಕೆಲಸ ಮಾಡಲ್ಲ. ರಾಮಾಚಾರಿ ಸೀರಿಯಲ್ ಕಥೆ ಕೇಳಿದಾಗಲೇ ನನಗೆ ಆ ಕ್ಯಾರೆಕ್ಟರ್ ಇಷ್ಟವಾಗಿತ್ತು. ಅಷ್ಟು ಸಿಂಲ್ ಹುಡುಗ ದುರಹಂಕಾರಿ ಹುಡುಗಿ ಆ ಕಥೆ ಅಂಡ್ ಕ್ಯಾರೆಕ್ಟರ್ ಇಷ್ಟವಾಗಿನೇ ಆ ಸೀರಿಯಲ್ ಒಪ್ಪಿಕೊಂಡಿದ್ದು.
ಚಾಲೆಂಜಿಂಗ್ ಅನ್ನಿಸಿದ್ದೇನು..?
ತುಂಬಾ ಸ್ಪೆಷಲ್ ಏನು ಅಂದ್ರೆ ಒಂದು ಬ್ರಾಹ್ಮಣ ಕ್ಯಾರೆಕ್ಟರ್. ಮಂತ್ರಗಳು, ಶಾಸ್ತ್ರಗಳು ನಂಗೇನು ಗೊತ್ತಿಲ್ಲದೆ ಇರೋದ್ರಿಂದ ನನಗದು ಹೊಸತನ. ಎಲ್ಲವೂ ಅಭ್ಯಾಸ ಮಾಡಿದ್ದೀನಿ. ಅದನ್ನೆಲ್ಲ ಪ್ರಾಕ್ಟೀಸ್ ಮಾಡಿ ಮಾಡೋದು ಒಂದು ಸವಾಲಿನ ರೀತಿಯೇ ಸರಿ. ನಮ್ಮ ಕ್ರಿಯೇಟಿವ್ ಟೀಂ ಆರಂಭದಲ್ಲಿ ಸಹಾಯ ಮಾಡಿದರು. ಶಂಕರ್ ಸರ್, ಹರೀಶ್ ಭಟ್ ಇಬ್ಬರು ಸಹಾಯ ಮಾಡ್ತಾ ಇದ್ರು. ಮಂತ್ರ ಕಲಿಯೋದು ಅಷ್ಟು ಸುಲಭ ಅಲ್ಲ. ಆದ್ರೆ ಬೆಳಗ್ಗೆ ಎದ್ದಾಗಿನಿಂದಲೂ ಮಂತ್ರ ಓದುತ್ತಾ ಇರ್ತಾ ಇದ್ದೆ.
ಪಬ್ಲಿಕ್‌ನಲ್ಲಿ ನಾನ್ ವೆಜ್ ತಿನ್ನಲು ಭಯ
ನೀವೂ ನಿಜವಾಗಲೂ ಪೌರೋಹಿತ್ಯ ಮಾಡ್ತೀರ..? ನೀವೂ ಚಾರು ಮೇಡಂನ ಮದುವೆಯಾಗಿ ಮಕ್ಕಳನ್ನ ಯಾಕೆ ಮಾಡಿಕೊಳ್ತಿಲ್ಲ..? ನೀವೂ ಬ್ರಾಹ್ಮಿಣರ..? ಅಂತೆಲ್ಲ ಪ್ರಶ್ನೆಗಳನ್ನು ಜನ ಕೇಳ್ತಾರೆ. ದಿನವೂ ಜನ ಆ ಸೀರಿಯಲ್ ನೋಡೋದ್ರಿಂದ ಆ ವ್ಯಕ್ತಿ ಹೀಗೆ ಇರೋದು ಅಂದ್ಕೊಂಡು ಬಿಡ್ತಾರೆ. ನಾನು ಮೂರೊತ್ತು ನಾನ್ ವೆಜ್ ತಿಂತೀನಿ. ಆದರೆ ಪಬ್ಲಿಕ್‌ನಲ್ಲಿ ನಾನ್ ವೆಜ್ ತಿನ್ನಲ್ಲ. ಎಲ್ಲೋ ಕದ್ದು ಮುಚ್ಚಿ ತಿಂತೀನಿ. ನಾನೆಲ್ಲೋ ಪಬ್‌ರೋದಕ್ಕೆ ಆಗಲ್ಲ. ರಾಮಾಚಾರಿ ಕೂತು ಎಲ್ಲೋ ಕುಡಿತಿದ್ದ ಗುರು ಅಂತ ಅನ್ನಿಸ್ಕೊಳೋಕೆ ಕಷ್ಟ ಆಗುತ್ತೆ' ಎಂದಿದ್ದಾರೆ.


Click it and Unblock the Notifications











