ನಟನೆ ಅಂದ್ರೆ ಪಂಚ ಪ್ರಾಣ: ಕೆಲಸ ಬಿಟ್ಟು ಬಣ್ಣ ಹಚ್ಚಿದ ರಿತ್ವಿಕ್ ಮಠದ್ ಕಥೆ ಸಖತ್ ಇಂಟ್ರೆಸ್ಟಿಂಗ್

By ಅನಿತಾ ಬನಾರಿ

ಆಸೆ ಕನಸುಗಳನ್ನು ಈಡೇರಿಸಲು ಪರಿಶ್ರಮದ ಜೊತೆಗೆ ಅದೆಷ್ಟೋ ತ್ಯಾಗಗಳನ್ನೂ ಮಾಡಬೇಕಾಗುತ್ತದೆ. ನಟನೆಯನ್ನು ಕೆರಿಯರ್ ಆಗಿ ಪಡೆಯಲು ಎಂಎನ್‌ಸಿ ಕಂಪೆನಿಯಲ್ಲಿದ್ದ ಕೆಲಸ ಬಿಟ್ಟಿದ್ದಾರೆ. ಟೀಮ್ ಲೀಡರ್ ಆಗಿ ಒಳ್ಳೆಯ ಸಂಬಳ ಪಡೆಯುತ್ತಿದ್ದ ರಿತ್ವಿಕ್ ಕೆಲಸಕ್ಕೆ ರಾಜೀನಾಮೆ ನೀಡಿ ಕಿರುತೆರೆಗೆ ಕಾಲಿಟ್ಟರು.

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿಯಲ್ಲಿ ಶಿವರಾಮ ಅನ್ನೋ ನಾಯಕನ ಪಾತ್ರದ ಮೂಲಕ ನಟನಾ ಜಗತ್ತಿನಲ್ಲಿ ಮಿಂಚುತ್ತಿರುವ ರಿತ್ವಿಕ್, ಇಂದು ನಟನೆಯನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡಿದ್ದು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ.

Actor Ritvvikk Mathad Completed B.Sc Animation is now busy in the acting

ಬಾಲ್ಯದಿಂದಲೂ ನಾಟಕಗಳಲ್ಲಿ ಆಸಕ್ತಿ ಇದ್ದ ಇವರು 'ನಿಸರ್ಗ ದೇವತೆ ' ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲಿಂದ ಮೊಳಕೆಯೊಡೆದ ಆಸೆ, ನಟನೆಯ ಬಗೆಗಿದ್ದ ಆಸಕ್ತಿ ಇಂದು ಅವರನ್ನು ಜನಮನ ಮೆಚ್ಚಿದ ನಟನಾಗಿ ಮಾಡಿದೆ ಅಂದರೆ ಖಂಡಿತಾ ಸುಳ್ಳಲ್ಲ. ಅದ್ಭುತವಾಗಿ ಉತ್ತರ ಕನ್ನಡ ಭಾಷೆಯಲ್ಲಿ ಡೈಲಾಗ್ ಡೆಲಿವರಿ ಮಾಡಿ ತಮ್ಮ ಮುಗ್ಧ ಹಾಗೂ ರಗಡ್ ಅಭಿನಯದಿಂದ ಇಡೀ ಧಾರಾವಾಹಿಗೆ ಹೊಸ ಮೆರುಗು ಕೊಟ್ಟ ರಿತ್ವಿಕ್ ಸೀರಿಯಲ್ ಪ್ರಿಯರ ಪಾಲಿಗೆ ಪ್ರೀತಿಯ ಶಿವರಾಮ.

ಕಿರುತೆರೆಯ ಅನುರೂಪದ ಹುಡುಗ

ತೆರೆಯ ಮೇಲೆ ಮಾಸ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆ ರಿತ್ವಿಕ್ ಅವರಿಗಿತ್ತು. 'ಗಿಣಿರಾಮ' ಧಾರಾವಾಹಿಯ ಶಿವರಾಮ ಪಾತ್ರದಿಂದ ರಿತ್ವಿಕ್ ಅವರ ಆಸೆ ಈಡೇರಿದೆ. ತಮ್ಮ ಕೈಲಾದಷ್ಟು ಪಾತ್ರಕ್ಕೆ ಜೀವ ತುಂಬಿರುವ ರಿತ್ವಿಕ್ ಶಿವರಾಮ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿದ್ದಾರೆ. ಇಂದು ರಿತ್ವಿಕ್ ಅವರನ್ನು ಮೂಲ ಹೆಸರಿಗಿಂತಲೂ ಶಿವರಾಮ್ ಎಂದೇ ಗುರುತಿಸುವುದು ಜಾಸ್ತಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಾಯಕ ಶ್ಯಾಮ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ರಿತ್ವಿಕ್ ಮನೋಜ್ಞ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ಮೋಡಿ ಮಾಡಿದರು. ಸದ್ಯ 'ಗಿಣಿರಾಮ' ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ರಿತ್ವಿಕ್ 'ಜಸ್ಟ್ ಲವ್', 'ಗಿಫ್ಟ್ ಬಾಕ್ಸ್', 'ಆ ಎರಡು ವರ್ಷಗಳು' ಸಿನಿಮಾಗಳಲ್ಲಿ ಅಭಿನಯಿಸಿದ ಪ್ರತಿಭೆ.

Actor Ritvvikk Mathad Completed B.Sc Animation is now busy in the acting

ಕೆಲಸ ಬಿಟ್ಟು ನಟನೆಗೆ ಜೈ ಎಂದ ರಿತ್ವಿಕ್

ಬಿಎಸ್ ಸಿ ಅನಿಮೇಶನ್ ಕೋರ್ಸ್ ಮಾಡಿರುವ ರಿತ್ವಿಕ್ ಮುಂದೆ ಕೆಲಸದ ಸಲುವಾಗಿ ಕಾಲಿಟ್ಟಿದ್ದು ಮಹಾನಗರಿಗೆ. ಎಂ ಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ರಿತ್ವಿಕ್ ಟೀಂ ಲೀಡರ್ ಆಗಿಯೂ ಪ್ರೋಮೋಶನ್ ಪಡೆದಿದ್ದರು. ಅದ್ಯಾವಾಗ ನಟನಾಗಬೇಕು, ನಟನೆಯಲ್ಲಿ ಮುಂದುವರಿಯಬೇಕು ಎಂಬ ನಿರ್ಧಾರ ಮಾಡಿದರೋ ಆಗ ಕೆಲಸಕ್ಕೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದರು.

ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಿತ್ವಿಕ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ರಿತ್ವಿಕ್ ನಟನೆಗೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇದೇ ಖುಷಿಯಲ್ಲಿಯೇ ಸಿನಿಮಾದಲ್ಲೂ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಕಲ ಪ್ರಯತ್ನಗಳನ್ನು ನಡೆಸಿದ್ದಾರೆ.

More from Filmibeat

English summary
Ritvvikk Mathad, who has completed B.Sc Animation course, is now busy in the acting world, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X