'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ರಮಣ ಪಾತ್ರದ ಮಾಡ್ತಿರೋ ಈ ನಟ ಯಾರು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ನಾಯಕ ಕರಣ್ ಪಾತ್ರದಲ್ಲಿ ಸಮೀಪ್ ಆಚಾರ್ಯ ನಟಿಸಿದ್ದರು. 'ಸುಂದರಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸಮೀಪ್ ಆಚಾರ್ಯ ಇದೀಗ ಮರಳಿ ಬಂದಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಜಾನಕಿ ಸಂಸಾರ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.

Actor Sameeip Acharyaa is charming in the role of Ramana in the Janaki Samsara serial

'ಜಾನಕಿ ಸಂಸಾರ' ಎಂಬ ಧಾರಾವಾಹಿಯಲ್ಲಿ ರಮಣ ಪಾತ್ರದ ಮೂಲಕ ಮಿಂಚಲ್ಲಿರುವ ಸಮೀಪ್ ಆಚಾರ್ಯ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡಿದ್ದಾರೆ. "ಪ್ರತಿ ಪಾತ್ರಕ್ಕೂ ಅಂದರೆ ವೈವಿಧ್ಯಮಯ ವಿಚಾರಗಳಿರುತ್ತವೆ. ಅಂತೆಯೇ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ರಮಣನ ಪಾತ್ರವೂ ಕೂಡ ಒಂದು.

ರಮಣ ತುಂಬಾ ಮೃದು ಸ್ವಭಾವದ ಹುಡುಗ. ಸದಾ ಒಳ್ಳೆಯದನ್ನೇ ಬಯಸುವ ಇವನ ಜೀವನದಲ್ಲಿ ಯಾವ ರೀತಿಯ ತಿರುವುಗಳು ಬರುತ್ತದೆ ಎಂಬುದನ್ನು ನೋಡುವುದಕ್ಕೆ 'ಜಾನಕಿ ಸಂಸಾರ' ಧಾರಾವಾಹಿಯನ್ನು ನೋಡಬೇಕು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ.

"ಈ ಪಾತ್ರ ನಾನು ಈ ಮೊದಲು ಮಾಡಿದ 'ಸುಂದರಿ' ಧಾರಾವಾಹಿ ಪಾತ್ರಕ್ಕಿಂತ ಬಹಳ ವಿಭಿನ್ನವಾಗಿದೆ. ಈವರೆಗೂ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಆದರೆ, ಯಾವುದರಲ್ಲೂ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 'ಜಾನಕಿ ಸಂಸಾರ' ಧಾರಾವಾಹಿ ಮೂಲಕ ಅದಕ್ಕೆ ಅವಕಾಶ ಸಿಕ್ಕಿದೆ.

Actor Sameeip Acharyaa is charming in the role of Ramana in the Janaki Samsara serial

ಈ ಧಾರಾವಾಹಿ ಫುಲ್ ಫ್ಯಾಮಿಲಿ ಪ್ಯಾಕೆಜ್ ಇರುವಂತದ್ದು. ಹಾಗಾಗಿ ಈ ಧಾರಾವಾಹಿ ಜನರನ್ನು ಬೇಗ ತಲುಪಲಿದೆ ಎಂದು ನಂಬಿದ್ದೇನೆ. ಅದರಲ್ಲೂ ರಮಣ ಪಾತ್ರದೊಂದಿಗೆ ಬಹಳಷ್ಟು ಜನ ರಿಲೇಟ್ ಮಾಡಿಕೊಳ್ಳಲು ಸಾಧ್ಯ ಎಂದು ನನಗನಿಸಿದೆ. ಇವರಿಗೂ ನಾನು ಒಂದೊಳ್ಳೆ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆ. ಈಗ ಅದು ನನ್ನ ಕೈ ಸೇರಿರುವುದರ ಬಗ್ಗೆ ಬಹಳ ಸಂತೋಷವಿದೆ." ನಟ ಸಮೀಪ್ ಆಚಾರ್ಯ ಎಂದು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು 'ಸುಂದರಿ', 'ರಕ್ಷಾ ಬಂಧನ' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಟ ಸಮೀಪ್ ಆಚಾರ್ಯ ಇದೀಗ 'ಜಾನಕಿ ಸಂಸಾರ'ದ ಮೂಲಕ ಮತ್ತು ಕಿರುತೆರ ಪ್ರೇಕ್ಷಕರ ಬಳಿ ಹೊಸ ಪಾತ್ರದೊಂದಿಗೆ ಬರುತ್ತಿರುವುದು ಪ್ರೇಕ್ಷಕರಿಗೂ ಬಹಳ ಖುಷಿ ತಂದಿದೆ.

"ನನ್ನ ಹಿಂದಿನ ಧಾರಾವಾಹಿ ಸುಂದರಿಯನ್ನು ರಮೇಶ ಅರವಿಂದ್ ಸರ್ ಹಾಗೂ ರವಿ ಜೋಶಿ ಸರ್ ಅವರು ನಿರ್ಮಾಣ, ನಿರ್ದೇಶನ ಮಾಡಿದ್ದರು. ಇದೀಗ ಮತ್ತೆ ಜಾನಕಿ ಸಂಸಾರ ಧಾರಾವಾಹಿ ಮೂಲಕ ರಮೇಶ್ ಅರವಿಂದ್ ಸರ್ ಹಾಗೂ ರವಿ ಜೋಶಿ ಅವರೊಂದಿಗೆ ಈ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಲು ಬಹಳ ಸಂತೋಷವಿದೆ" ಎಂದು ನಟ ಸಮೀಪ್ ಆಚಾರ್ಯ ಹೇಳಿದ್ದಾರೆ.

More from Filmibeat

English summary
After a short gap, television actor Sameeip Acharya is back with Janaki Samsara serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X