Sangeetha Sringeri: ಸಖತ್ ಸುದ್ದಿಯಲ್ಲಿ ಸಂಗೀತ ಶೃಂಗೇರಿ, ಫೋಟೋ ನೋಡಿದ ಅಭಿಮಾನಿಗಳು ಫಿದಾ
'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಸತಿ ದಾಕ್ಷಾಯಿಣಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಂಗೀತ ಶೃಂಗೇರಿ ನೋಡುಗರ ಮನಸ್ಸನ್ನು ಕದ್ದಿದ್ದರು. ಹರ ಹರ ಮಹಾದೇವ ಧಾರಾವಾಹಿಯಲ್ಲಿ ಸಖತ್ ಆಗಿ ಮಿಂಚಿದ ಈ ನಟಿ ನೋಡುಗರ ಮನ ಸೆಳೆದಿದ್ದರು. ಕಿರುತೆರೆಯತ್ತ ಹೆಚ್ಚು ತೊಡಗಿಸಿಕೊಂಡಿದ್ದ ಸಂಗೀತ ಶೃಂಗೇರಿಗೆ ಹಿರಿ ತೆರೆಯಿಂದಲು ಹೆಚ್ಚಾಗಿ ಆಫರ್‌ಗಳು ಬರಲು ಶುರುವಾಗಿತ್ತು.
ಇನ್ನು ಇವರು ಹಲವಾರು ಬಾರಿ ಫೋಟೋ ಶೂಟ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದೀಗ ಮತ್ತೊಂದು ಬಾರಿ ಸಾಮಾಜಿಕ ಜಾಲತಾಣದಲ್ಲಿ ಸಂಗೀತ ಶೃಂಗೇರಿ ಫೋಟೋ ವೈರಲ್ ಆಗಿದೆ. ಸಂಗೀತ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. 2018ರಲ್ಲಿ ತೆರೆಕಂಡ A+ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು.

777 ಚಾರ್ಲಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಂಗೀತ ಇತ್ತೀಚಿಗೆ 'ಮಾರಿ ಗೋಲ್ಡ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ, ಚಾರ್ಲಿ ಸಿನಿಮಾದಲ್ಲಿ ಸಂಗೀತ ಶೃಂಗೇರಿ ಬಹಳ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್
ಸಂಗೀತ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇನ್ನೂ ಇವರ ಅಭಿಮಾನಿಗಳು ಸಂಗೀತ ಜೊತೆ ನಿಮ್ಮ ಫಿಟ್ನೆಸ್ ಕಾರಣ ಎನು ಎಂಬುವುದನ್ನು ಕೇಳುತ್ತಾ ಇರುತ್ತಾರೆ. ಇನ್ನೂ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನು ನೀಡುತ್ತಾ ರೆಸ್ಪಾನ್ಸ್ ಮಾಡುತ್ತಿರುತ್ತಾರೆ.

ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಸಂಗೀತ ಅಭಿಮಾನಿಗಳು ಲೈಕ್ ಕಾಮೆಂಟ್ ಮಾಡುತ್ತಿದ್ದಾರೆ. ಪೌರಾಣಿಕ ಪಾತ್ರದ ಮೂಲಕ ಮೊದಲನೆಯದಾಗಿ ಕಿರುತೆರೆಗೆ ಎಂಟ್ರಿ ನೀಡಿದ ಸಂಗೀತ ಶೃಂಗೇರಿ ಬೆಳ್ಳಿ ಪರದೆಯಲ್ಲಿ ಮಿಂಚಿ ಅಭಿಮಾನಿಗಳ ಮನದಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಕಿರುತೆರೆಯಲ್ಲಿ ಕಮಲ್ ಮಾಡಿದ್ದ ಸಂಗೀತ
2016 ರಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ನಟಿ ಸಂಗೀತ ಕಿರುತೆರೆಯಲ್ಲಿ ಬಹಳ ದೊಡ್ಡ ಕಮಾಲ್ ಸೃಷ್ಟಿ ಮಾಡಿದ್ದರು ಎಂದರೆ ತಪ್ಪಾಗದು. ಯಾಕೆಂದರೆ ಅಷ್ಟರ ಮಟ್ಟಿಗೆ ಅವರ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದರು. ಸದ್ಯ ಹಿರಿತೆರೆಗೆ ಪಾದಾರ್ಪಣೆ ಮಾಡಿರುವ ಇವರು ಅಲ್ಲಿಯೂ ಹೆಸರು ಗಳಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.


Click it and Unblock the Notifications











