'ಲಕ್ಷ್ಮಿಬಾರಮ್ಮ' ಧಾರಾವಾಹಿ ಮೂಲಕ ಸದ್ದು ಮಾಡುತ್ತಿರೋ ಶಮಂತ್ ಗೌಡ ಹಿನ್ನೆಲೆ ಏನು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಎಲ್ಲರಿಗೂ ತಿಳಿದೇ ಇದೆ. ಪ್ರತಿದಿನ ಸಂಜೆ 7:30 ರಿಂದ 8 ಗಂಟೆಯ ಅವಧಿಯಲ್ಲಿ ಮೂಡಿಬರುವ ಈ ಧಾರಾವಾಹಿಗೆ ಅನೇಕ ಪ್ರೇಕ್ಷಕರಿದ್ದಾರೆ. ಟಿಆರ್‌ಪಿಯಲ್ಲಿಯೂ ಮುಂದಿರುವ ಧಾರಾವಾಹಿಯಲ್ಲಿ ಒಬ್ಬ ನಾಯಕನಿಗೆ ಇಬ್ಬರು ನಾಯಕಿಯರು ಕಾಣಿಸಿಕೊಂಡಿದ್ದಾರೆ.
ಈ ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಪಾತ್ರವನ್ನು ನಿಭಾಯಿಸುತ್ತಿರುವ ಶಮಂತ್ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಶಮಂತ್ ಎಂಬುದಕ್ಕಿಂತ ಹೆಚ್ಚಾಗಿ ಬ್ರೋ ಗೌಡ ಎಂದೇ ಫೇಮಸ್ ಆಗಿರುವ ಇವರು ಈ ಹಿಂದೆ ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಂತೆ ಈಗ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಹತ್ತಿರವಾಗಿದ್ದ ಶಮಂತ್ ನಂತರ ಬಿಗ್ ಬಾಸ್ ಮುಖಾಂತರ ಗಮನ ಸೆಳೆದಿದ್ದರು. ಕನ್ನಡ ರಾಪ್ ಸಾಂಗ್ಸ್ ಎಂದ ತಕ್ಷಣ ಅಲೋಕ್, ಚಂದನ್ ಹೇಗೆ ನೆನಪಾಗುತ್ತಾರೋ ಹಾಗೆಯೇ ಚಂದನ್ ಕೂಡ ನೆನಪಾಗುತ್ತಾರೆ. ಇವರ ಕುರಿತು ಒಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಶಮಂತ್ ಮೂಲತಃ ಬೆಂಗಳೂರಿನವರು. ಡಿಸೆಂಬರ್ 25, 1995 ಕ್ಕೆ ಹುಟ್ಟಿದ ನಟನಿಗೆ ಇದೀಗ 29 ವರ್ಷ. ಜಯಕುಮಾರ್ ಹಿರೇಮರ್ ಹಾಗೂ ಮಂಗಳಾ ದಂಪತಿಯ ಮುದ್ದಿನ ಪುತ್ರ ಶಮಂತ್‌ಗೆ ಶುಭ, ಶ್ರುತಿ ಎಂಬ ಇಬ್ಬರು ಸಹೋದರಿಯರೂ ಇದ್ದಾರೆ. ಇವರು ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಕಾಲೇಜು ಹಾಗೂ PESIT ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.

ಭಗವಾನ್ ಮಹಾವೀರ ಜೈನ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರುವುದರೊಂದಿಗೆ ಇಂಟೀರಿಯರ್ ಡಿಸೈನಿಂಗ್ ಕೂಡ ಇವರಿಗೆ ತಿಳಿದಿದೆ.
ಅಂದಹಾಗೆ ಈ ನಿಜ ಜೀವನದ ಗಾಯಕ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲೂ ಗಾಯಕನ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಪಾತ್ರದ ಶಮಂತ್ ಗೌಡ ಅವರಿಗೆ ನಾಯಕಿಯಾಗಿ ಲಕ್ಷ್ಮಿ ಪಾತ್ರದಲ್ಲಿ ಭೂಮಿಕಾ ನಟಿಸಿದ್ದಾರೆ. ಜೊತೆಗೆ ಎರಡನೇ ನಾಯಕಿಯಾಗಿ ಕೀರ್ತಿ ಪಾತ್ರದಲ್ಲಿ ತನ್ವಿರಾವ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











