Lakshmi Nivasa: 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಮೋಡಿ ಮಾಡುತ್ತಿರುವ ಈ ನಟ ಯಾರು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿ ಸದ್ಯಕ್ಕಂತೂ ಪಾಪ್ಯುಲರ್ ಧಾರಾವಾಹಿಗಳಲ್ಲೊಂದು. 'ಲಕ್ಷ್ಮಿ ನಿವಾಸ' ಧಾರಾವಾಹಿ ಅಂತೂ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಬಹಳ ದೊಡ್ಡ ತಾರಾಂಗಣವನ್ನು ಹೊಂದಿರುವ ಈ ಧಾರಾವಾಹಿ ಕೂಡು ಕುಟುಂಬದ ಕಥೆಯನ್ನು ಹೇಳುತ್ತಿದೆ.
ಒಂದೊಮ್ಮೆ ಜಯಂತ್ ನ ಕಾರಣಕ್ಕಾಗಿ ಅಥವಾ ಜಾಹ್ನವಿ ಪಾತ್ರದಿಂದ, ಅಥವಾ ಸಿದ್ದೇಗೌಡರ ನಟನೆ ಭಾವನಾಳ ಮುಗ್ಧತೆ ಹೀಗೆ ಒಂದಲ್ಲ ಒಂದು ಪಾತ್ರ ಜನರನ್ನು ಈ ಧಾರಾವಾಹಿ ಬಗ್ಗೆ ಮಾತನಾಡುವಂತೆ ಮಾಡಿದೆ. ಅಂತೆಯೇ ಇದೀಗ ವೆಂಕಿ ಪಾತ್ರವೂ ಈ ಧಾರಾವಾಹಿಗೆ ಮತ್ತಷ್ಟು ಮೆರುಗು ನೀಡಿದೆ. 'ಲಕ್ಷ್ಮಿ ನಿವಾಸ' ಧಾರಾವಾಹಿಯ ಪ್ರೇಕ್ಷಕರಂತೂ ವೆಂಕಿ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

ವೆಂಕಿ ಎಂಬ ಮಾತು ಬಾರದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈತನ ಹೆಸರು ಶಾಸ್ತ್ರಿ. ಮೂಲತಃ ರಂಗ ಕಲಾವಿದರಾದ ಇವರು ಇದೀಗ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ತಮ್ಮ ನಟನೆಯ ಮೂಲಕ ಬಹಳ ಪಾಪ್ಯುಲರ್ ಇದ್ದಾರೆ. ಶ್ರೀನಿವಾಸ್ ಹಾಗೂ ಲಕ್ಷ್ಮಿ ಅವರ ಸಾಕು ಮಗನಾಗಿರುವ ವೆಂಕಿಗೆ ಮಾತು ಬಾರುವುದಿಲ್ಲ. ಇತ್ತೀಚಿನವರೆಗೂ ಇತರೆ ಪಾತ್ರಗಳಲ್ಲಿ ಒಂದಾದ ಈ ಪಾತ್ರ ಇದೀಗ ಹೆಚ್ಚೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೌದು, ವೆಂಕಿ ಪಾತ್ರಕ್ಕೂ ಜಯಂತ್ ಪಾತ್ರಕ್ಕೂ ಬಾಲ್ಯದ ಸಂಬಂಧವಿದೆಯೆಂಬುದು ಪ್ರೇಕ್ಷಕರಿಗೆ ಇದೀಗಷ್ಟೆ ಗೊತ್ತಾಗುತ್ತಿದೆ.
ಜಯಂತ್‌ಗೆ ಯಾಕೋ ವೆಂಕಿಯನ್ನು ಕಂಡರೆ ಭಯ. ಆದರೆ, ವೆಂಕಿಗೆ ಮಾತ್ರ ತನ್ನ ಬಾಲ್ಯ ಸ್ನೇಹಿತ ಇವನೇ ಎಂದು ತಿಳಿಯುತ್ತಿಲ್ಲ. ಹಾಗಾದರೆ ಇವರಿಬ್ಬರ ಹಿಂದಿನ ಕಥೆಯಾದರೂ ಏನು!? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುತ್ತಿದೆ.
ನಿನ್ನೆಯ ಎಪಿಸೋಡ್‌ನಲ್ಲಿ ವೆಂಕಿ ತನ್ನ ಪ್ರೀತಿಯ ವಿಚಾರವನ್ನು ಜಾಹ್ನವಿಗೆ ಹೇಳಿದ. ಸದ್ಯಕ್ಕಂತೂ ಯಾರ ಹಂಗಿನಲ್ಲೂ ಇರಬಾರದೆಂದು ನಿರ್ಧರಿಸಿರುವ ವೆಂಕಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನಿನ್ನೆಯ ಈ ಎಪಿಸೋಡ್‌ನಲ್ಲಿ ಈ ಸೀನ್ ಬಂದಾಗ ಪ್ರೇಕ್ಷಕರದ್ದು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ವೆಂಕಿ ಪಾತ್ರಧಾರಿಯ ನಟನೆ!

ಹೌದು, ಶಾಸ್ತ್ರಿಯವರು ಈ ಸೀನ್‌ನಲ್ಲಿ ಬಹಳ ಅದ್ಭುತವಾಗಿ ನಟಿಸಿದ್ದು, ನಿಜವಾಗಿಯೂ ಮಾತು ಬಾರದೇನೆ ನಟಿಸುತ್ತಿದ್ದಾರೇನೋ ಎನ್ನುವಷ್ಟು ನೈಜವಾಗಿ ಈ ಎಪಿಸೋಡ್ ಬಂದಿದೆ. ಎಷ್ಟೋ ಜನ ಪ್ರೇಕ್ಷಕರು ಈ ಸೀನ್ ನೋಡಿ ಕಣ್ತುಂಬಿಕೊಂಡಿದ್ದಾರೆ ಅಂತೆ. ಒಟ್ಟಿನಲ್ಲಿ ಹೇಳುವುದಾದರೆ ವೆಂಕಿ ಪಾತ್ರದಲ್ಲಿ ನಟಿಸುತ್ತಿರುವ ಶಾಸ್ತ್ರಿಯವರು ಅದ್ಭುತವಾಗಿನ ಅಭಿನಯಿಸುತ್ತಿದ್ದು ಧಾರಾವಾಹಿಗೆ ಹೆಚ್ಚಿನ ಕಳೆಯನ್ನು ತಂದಿದ್ದಾರೆ.
ಹಾಗಂತ 'ಲಕ್ಷ್ಮಿ ನಿವಾಸ' ಧಾರಾವಾಹಿ ಇವರಿಗೆ ಮೊದಲ ಧಾರಾವಾಹಿ ಏನಲ್ಲ. ಈ ಮೊದಲು 'ದಾಸ ಪುರಂದರ', 'ಉಘೇ ಉಘೇ ಮಾದೇಶ್ವರ', 'ನಮ್ಮ ಲಚ್ಚಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಆದರೆ 'ಲಕ್ಷ್ಮಿ ನಿವಾಸ' ಧಾರಾವಾಹಿ ಇವರ ಈ ನಟನೆಗೆ ಹೆಚ್ಚಿನ ಪಾಪ್ಯುಲಾರಿಟಿ ಸಿಗುತ್ತಿದೆ. ಅಣ್ಣ ಅಣ್ಣ ನನ್ನ ಮುದ್ದಿನ ಅಣ್ಣ ಎಂದು ಹಲವಾರು ಅಭಿಮಾನಿಗಳು ಇವರ ನಟನೆಗೆ ಸೋತು ಕಮೆಂಟೆನ್ ಮೂಲಕ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ತಿಳಿಸುತ್ತಿದ್ದಾರೆ. ವೆಂಕಿ ಪಾತ್ರದ ಪ್ರೀತಿ, ಮುಗ್ಧತೆ, ಸ್ವಾವಲಂಬಿ ಮನಸ್ಥಿತಿ, ಇತ್ಯಾದಿ ಎಲ್ಲವೂ ಪ್ರೇಕ್ಷಕರ ಮನ ಸೆಳೆಯುತ್ತಿರುವುದಂತೂ ಹೌದು. ಇದನ್ನು ಮೀರಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿರುವ ಈ ಪಾತ್ರ ಕಥೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಸದ್ಯಕ್ಕೆ ಕುತೂಹಲ.


Click it and Unblock the Notifications











