83ಕೆಜಿ ಇದ್ದ ಶೈನ್ ಶೆಟ್ಟಿ ತೂಕವೀಗ 67 ಕೆಜಿ; ಸಿಕ್ಸ್ ಪ್ಯಾಕ್.. ಸ್ಲಿಮ್ ದೇಹ.. ಹೇಗಿದೆ ಹೊಸ ಲುಕ್?
ನಟ ನಿರೂಪಕ ಶೈನ್ ಶೆಟ್ಟಿ ಅವರು ಎಲ್ಲರಿಗೂ ಚಿರಪರಿಚಿತ. ನಿರೂಪಕನಾಗಿ ಕಿರುತೆರೆಗೆ ಕಾಲಿಟ್ಟು ನಟನಾಗಿ ಮೋಡಿ ಮಾಡಿದ ಹ್ಯಾಂಡ್ ಸಮ್ ಹುಡುಗ ಶೈನ್ ಶೆಟ್ಟಿ. ಮುಂದೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂಲಕ ತಮ್ಮ ಫೇಮನ್ನು ಮತ್ತಷ್ಟು ಹೆಚ್ಚಿಸಿಕೊಂಡ ಈ ನಟ ಇದೀಗ ತಮ್ಮ ದೇಹ ತೂಕದಲ್ಲಿ ಭಾರಿ ಬದಲಾವಣೆ ಕಂಡುಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.
ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ನಟರ ಪೈಕಿ ಶೈನ್ ಶೆಟ್ಟಿ ಕೂಡಾ ಒಬ್ಬರು. ಇದೀಗ ನಟ ಶೈನ್ ಶೆಟ್ಟಿ ಅವರು ದೈಹಿಕವಾಗಿ ಫಿಟ್ ಆಗಿದ್ದು, ಮೊದಲಿನ ಹಾಗೂ ಈಗಿನ ಫೋಟೋ ಎರಡನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶೈನ್ ಶೆಟ್ಟಿ ವರ್ಕ್‌ಔಟ್ ಮಾಡುವುದಕ್ಕೂ ಮುನ್ನ ಬರೋಬ್ಬರಿ 83 ಕೆಜಿ ಇದ್ದರು. ವರ್ಕ್‌ಔಟ್ ಬಳಿಕ ಇದೀಗ 67 ಕೆಜಿಗೆ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ. ಜೊತೆಗೆ ದೇಹ ಒಂದೊಳ್ಳೆ ಶೇಪ್‌ಗೆ ಬಂದಿದೆ. ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ.
ಶೈನ್ ಶೆಟ್ಟಿ ಅವರನ್ನು ಫಾಲೋ ಮಾಡುವ ಸಾವಿರಾರು ಫಾಲೋವರ್ಸ್, ಅಭಿಮಾನಿಗಳಿಗೆ ಇವರೊಂದು ಪ್ರೇರಣೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾ ಕಾಮೆಂಟ್ ಸೆಕ್ಷನ್‌ನಲ್ಲಿ ಶುಭಾಶಯ ಹಾಗೂ ಆಶ್ಚರ್ಯದ ಸುರಿಮಳೆ ಸುರಿದಿದೆ. ಜೊತೆಗೆ ಇದು ನಟ ಶೈನ್ ಶೆಟ್ಟಿ ಅವರ ಡೆಡಿಕೇಶನ್ ಹಾಗೂ ಸೆಲ್ಫ್ ಇಂಪ್ರೂವ್ಮೆಂಟ್ ಕಡೆಗಿನ ಗಮನವನ್ನು ಎತ್ತಿ ತೋರಿಸುತ್ತದೆ. ಈಗಾಗಲೇ ಸಾವಿರಾರು ಯುವಕರು ನಟ ಶೈನ್ ಶೆಟ್ಟಿಯನ್ನು ತಮ್ಮ ರೋಲ್ ಮಾಡೆಲ್ ಆಗಿ ನೋಡುತ್ತಿದ್ದು, ಈ ಬಾಡಿ ಟ್ರಾನ್ಸ್‌ಫರ್ಮೆಷನ್ ಒಳ್ಳೆಯ ಉದಾಹರಣೆಯಾಗಿದೆ.

ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶೈನ್ ಶೆಟ್ಟಿ ಅವರು "ಯಶಸ್ಸು ನಮ್ಮ ಸೋಲು ಗೆಲುವಿನ ಮೂಲಕ ತಿಳಿಯುವುದಲ್ಲ. ಬದಲಾಗಿ ಶ್ರಮದ ಮೂಲಕ ತಿಳಿಯುತ್ತೆ"ಎಂಬ ಕ್ಯಾಪ್ಷನ್ ಅನ್ನು ಕೊಟ್ಟಿದ್ದಾರೆ. ನಟನ ಈ ರೀತಿಯ ದೈಹಿಕ ಬದಲಾವಣೆಗೆ ಖುಷ್ ಆಗಿರುವ ಅಭಿಮಾನಿಗಳು ಮುಂದೆ ಬರುವ ಅವರ ಪಾತ್ರ ಹಾಗೂ ಸಿನಿಮಾಗಳಿಗೆ ಕಾಯುತ್ತಿದ್ದಾರೆ. ಈ ರೀತಿಯ ಫಿಸಿಕಲ್ ಬದಲಾವಣೆ, ಯಾವ ಪಾತ್ರಕ್ಕೆ ಎಂಬ ಕುತೂಹಲವು ಪ್ರೇಕ್ಷಕರಲ್ಲಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಹಲವಾರು ಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸುವ ನಟ ಶೈನ್ ಶೆಟ್ಟಿ ಅವರು ಮುಂದೆ ಇನ್ಯಾವ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಗ್‌ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆಗೆ ಬಂದಿದರೋ ಶೈನ್ ಶೆಟ್ಟಿ ಸಿನಿಮಾಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿದ 'ಕಾಂತಾರ' ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರೂ, ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಇಲ್ಲಿಂದ ಸ್ಯಾಂಡಲ್‌ವುಡ್‌ನಲ್ಲಿ ಇವರಿಗೆ ಬೇಡಿಕೆಗಳು ಹೆಚ್ಚಾಗುತ್ತಿವೆ. ಹಾಗೇ ಉದ್ಯಮಿಯೂ ಆಗಿರುವುದರಿಂದ ಆ ಕಡೆಗೂ ಗಮನ ಹರಿಸಿದ್ದಾರೆ. ಸದ್ಯ ತನ್ನ ದೇಹದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದು 16 ಕೆಜಿ ತೂಕ ಇಳಿಸಿಕೊಂಡು ಫಿಟ್ನೆಸ್ ಫ್ರೀಕ್ ಇರೋ ಮಂದಿಗೆ ಮಾದರಿಯಾಗಿದ್ದಾರೆ.


Click it and Unblock the Notifications











