ಅವಕಾಶಗಳಿಲ್ಲದೆ ರಸ್ತೆ ಬದಿ ದೋಸೆ ಮಾರುತ್ತಿದ್ದ ಶೈನ್ ಶೆಟ್ಟಿ ಲೈಫ್ ಬದಲಿಸುತ್ತಾ 'ಬಿಗ್ ಬಾಸ್'?

Recommended Video

Bigg Boss Kannada 7 : Shine Shetty prepare Dosa in Food truck on street side | FILMIBEAT KANNADA

ಒಂದೆರಡು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ನಂತರ ಅವಕಾಶಗಳಿಲ್ಲದೆ ಅಲೆದಾಡುತ್ತಿರುವ ಎಷ್ಟೊ ಕಲಾವಿದರು ಕಣ್ಣೆದುರಿದ್ದಾರೆ. ಒಂದೆರೆಡು ಸಿನಿಮಾ ಮಾಡುತ್ತಿದ್ದಂತೆ ಸೆಲೆಬ್ರಿಟಿ ಎನ್ನುವ ಅಮಲು ನೆತ್ತಿಗೆ ಏರಿರುತ್ತೆ. ಹಾಗಾಗಿ ಸಿನಿಮಾ ಬಿಟ್ಟು ಬೇರೆ ಕೆಲಸ ಮಾಡಲು ಈ ಸ್ಟಾರ್ ಗಿರಿ ಅಡ್ಡಿಯಾಗುತ್ತಿರುತ್ತೆ.

ಆದ್ರೆ ಈ ಸ್ಟಾರ್ ಗಿರಿ, ಸೆಲೆಬ್ರಿಟಿ ಎನ್ನುವ ಪಟ್ಟವನ್ನು ಪಕ್ಕಕ್ಕೆ ಇಟ್ಟು ರಸ್ತೆಯಲ್ಲಿ ದೋಸೆ ಮಾರಿ ಜೀವನ ನಡೆಸಿದ ನಟ ಇಂತಹ ಅನೇಕರಿಗೆ ಮಾದರಿಯಾಗುತ್ತಾರೆ. ಹೌದು, ಶೈನ್ ಶೆಟ್ಟಿ ಎನ್ನುವ ಕುಂದಾಪುರ ಮೂಲದ ನಟ ದೋಸೆ ಮಾರಿ ಜೀವನ ನಡೆಸುತ್ತಿದ್ದರು. ಶೈನ್ ಶೆಟ್ಟಿ ಎನ್ನುವುದಕ್ಕಿಂತ ಲಕ್ಷ್ಮಿ ಬಾರಮ್ಮ ಚಂದು ಎಂದರೆ ಬಹುತೇಕರಿಗೆ ಗೊತ್ತಾಗುತ್ತೆ.

ಬಿಗ್ ಮನೆಯಲ್ಲಿ ಶೈನ್ ಶೆಟ್ಟಿ

ಬಿಗ್ ಮನೆಯಲ್ಲಿ ಶೈನ್ ಶೆಟ್ಟಿ

ಸದ್ಯ ಬಿಗ್ ಬಾಸ್ ಸೀಸನ್-7 ನ ಸ್ಪರ್ಧಿಯಾಗಿರುವ ಶೈನ್ ಶೆಟ್ಟಿ ಅವಕಾಶವಿಲ್ಲದಾಗ ದೊಸೆ ಮಾರಿ ಜೀವನ ನಡೆಸಿದ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಸಿನಿಮಾ ಆಸೆಯಿಂದ ಧಾರಾವಾಹಿಯಿಂದ ಹೊರಬಂದ ನಂತರ ಶೈನ್ ಶೆಟ್ಟಿ ಅವಕಾಶಗಳಿಲ್ಲದಾಗ ಸುಮ್ಮನೆ ಕೈ ಕಟ್ಟಿ ಕೂರದೆ, ಜೀವನಕ್ಕಾಗಿ ರಸ್ತೆ ಬದಿಯಲ್ಲಿ ಗಾಡಿ ಇಟ್ಟುಕೊಂಡು ದೋಸೆ ಮಾಡಿ ಮಾರಿದ್ದಾರೆ.

ಲಕ್ಷ್ಮಿ ಬಾರಮ್ಮ ಚಂದು ಪಾತ್ರದಲ್ಲಿ ಅಭಿನಯ

ಲಕ್ಷ್ಮಿ ಬಾರಮ್ಮ ಚಂದು ಪಾತ್ರದಲ್ಲಿ ಅಭಿನಯ

ಶೈನ್ ಶೆಟ್ಟಿ ಓದು ಮುಗಿಯುತ್ತಿದ್ದಂತೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರಕ್ಕೆ ಆಯ್ಕೆಯಾದರು. ಸುಮಾರು ಎರಡು ವರ್ಷಗಳ ಕಾಲ ಶೈನ್ ಧಾರಾವಾಹಿಯಲ್ಲಿ ಚಂದನ್ ಆಗಿ ಬಣ್ಣಹಚ್ಚಿದರು. ಚಂದನ್ ಪಾತ್ರ ಖ್ಯಾತಿಗಳಿಸುತ್ತಿದ್ದಂತೆ ಮತ್ತೊಂದೆಡೆ ಸಿನಿಮಾದಲ್ಲಿ ಮಿಂಚುವ ಆಸೆ ದೊಡ್ಡದಾಗುತ್ತ ಹೋಯಿತು. ಸಿನಿಮಾಗಾಗಿ ಧಾರಾವಾಹಿಯಿಂದ ಹೊರಬಂದರು. ಆದ್ರೆ ಶೈನ್ ಅಂದು ಕೊಂಡ ಸಿನಿಮಾ ಸೆಟ್ಟೇರಲೇ ಇಲ್ಲ, ಅಲ್ಲಿಗೆ ಸಿನಿಮಾ ಕನಸು ನುಚ್ಚುನೂರಾಯಿತು.

ಗಾಡಿಯಲ್ಲಿ ದೋಸೆ ಮಾರಾಟ

ಗಾಡಿಯಲ್ಲಿ ದೋಸೆ ಮಾರಾಟ

ಒಂದೆಡೆ ಸೆಲೆಬ್ರಿಟಿ ಎನ್ನುವ ಟ್ಯಾಗ್ ಲೈನ್, ಕೈ ಕೊಟ್ಟ ಸಿನಿಮಾ, ಮತ್ತೊಂದೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾಲದ ಹೊರೆ. ಏನು ಮಾಡಬೇಕೆಂದು ಗೊಂದಲದಲ್ಲಿದ್ದ ಶೈನ್ ಶೆಟ್ಟಿಗೆ ಕೊನೆಯದಾಗಿ ಫುಡ್ ಟ್ರಕ್ ಯೋಚನೆ ಬಂದಿದೆ. ನಂತರ ಧೈರ್ಯಮಾಡಿ ಬೆಂಗಳೂರಿನ ಬನಶಂಕರಿ ಬಳಿ ಫುಡ್ ಟ್ರಕ್ ಮಾಡಿ ದೋಸೆ ಮಾರಲು ಪ್ರಾರಂಭಮಾಡಿದ್ದಾರೆ.

ಅನೇಕರು ಗುರುತು ಹಿಡಿಯುತ್ತಿದ್ದರು

ಅನೇಕರು ಗುರುತು ಹಿಡಿಯುತ್ತಿದ್ದರು

"ಧಾರಾವಾಹಿ ಮಾಡಿದ್ದರಿಂದ ಅನೇಕರಿಗೆ ನನ್ನ ಪರಿಚಯವಿದೆ. ದೋಸೆ ಮಾಡುವ ಸಮಯದಲ್ಲಿ ಅನೇಕರು ಗುರುತು ಹಿಡಿಯುತ್ತಿದ್ದರು. ಆದ್ರೂ ಒಮ್ಮೆ ಅವನಲ್ಲ ಎಂದು ಅವರೆ ಹೇಳುತ್ತಿದ್ದರು. ಆದ್ರೆ ಕೆಲವರು ಸೇಮ್ ಗುರು.. ನಿನ್ನ ತರದವನೆ ಗುರು.. ಸೀರಿಯಲ್ ಮಾಡುತಿದ್ದಾನೆ ಎಂದು ಹೇಳ್ತಿದ್ರು. ಆಗ ನಾನು ಸುಮ್ಮನಿರುತ್ತಿದ್ದೆ. ಆದ್ರೆ ಖುಷಿಯಾಗುತ್ತಿತ್ತು ಎಂದು ಶೈನ್ ಶೆಟ್ಟಿ ಹೇಳಿದ್ದಾರೆ. ಸದ್ಯ ಬಿಗ್ ಮನೆಗೆ ಎಂಟ್ರಿಕೊಟ್ಟಿರುವ ಶೈನ್ ಶೆಟ್ಟಿ ಬಿಗ್ ಮನೆಯಲ್ಲಿ ಶೈನ್ ಆಗ್ತಾರ ನೋಡಬೇಕು.

ಶೈನ್ ಶೆಟ್ಟಿ ಚಲಕ್ಕೆ ಕಿಚ್ಚನ ಮೆಚ್ಚುಗೆ

ಶೈನ್ ಶೆಟ್ಟಿ ಚಲಕ್ಕೆ ಕಿಚ್ಚನ ಮೆಚ್ಚುಗೆ

ಶೈನ್ ಶೆಟ್ಟಿ ಜೀವನದ ಕಥೆ ಕೇಳಿ ಕಿಚ್ಚ ಸುದೀಪ್ ಕೂಡ ಮೆಚ್ಚಿಕೊಂಡಿದ್ದಾರೆ. "ನನಗು ಅಡುಗೆ ಮಾಡುವುದೆಂದರೆ ತುಂಬ ಇಷ್ಟ. ನನಗೆ ಯಾವುದೆ ಮುಜುಗರ ಇಲ್ಲದೆ ನಾನು ಅಡುಗೆ ಮಾಡುತ್ತೀನಿ" ಎಂದು ಹೇಳಿದ್ದಾರೆ. "ನಿಮ್ಮ ಚಲ ಮತ್ತು ಕ್ಲಾರಿಟಿ ಇಷ್ಟ ಆಯ್ತು" ಎಂದು ಶೈನ್ ಶೆಟ್ಟಿಯ ಸ್ಫೂರ್ತಿದಾಯಕ ಜೀವನವನ್ನು ಶ್ಲಾಘನೆ ಮಾಡಿದರು.

More from Filmibeat

English summary
Lakshmi Baramma Fame Actor Shine Shetty prepare Dosa in Food truck on street side.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X