Shine Shetty: ಜಾಹೀರಾತು ನಿರ್ದೇಶಕನಾಗಿ ಭಡ್ತಿ ಪಡೆದ ನಟ ಶೈನ್ ಶೆಟ್ಟಿ

By ಅನಿತಾ ಬನಾರಿ

'ಜಸ್ಟ್ ಮ್ಯಾರೀಡ್' ಎಂಬ ಸಿನಿಮಾ ಇದೀಗ ಬಹಳಷ್ಟು ಕುತೂಹಲಗಳನ್ನು ಮೂಡಿಸಿದೆ. ವಿಚಾರವೆಂದರೆ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿರುವ ಬಿ ಅಜನೀಶ್ ಲೋಕನಾಥ್ ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಸಿ. ಆರ್ ಬಾಬಿ ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

ನಟ ಶೈನ್ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ನಟಿ ಅಂಕಿತ ಅಮರ್ ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Actor Shine Shetty promoted as Advertising Director in Just Married

ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ವಿಭಿನ್ನ ರೋಲ್‌ಗಳನ್ನು ತೆಗೆದುಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅಂತೆಯೇ ಈ ಸಿನಿಮಾದಲ್ಲಿ ನಟ ಶೈನ್ ಶೆಟ್ಟಿ ಸೂರ್ಯ ಎಂಬ ಜಾಹೀರಾತು ನಿರ್ದೇಶಕರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶೈನ್ ಶೆಟ್ಟಿ ನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಪೋಷಕ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು ಎಂದರೆ ತಪ್ಪಾಗಲಾರದು. ಕಳೆದ ವರ್ಷ ತೆರೆ ಕಂಡ 'ಬ್ಯಾಚುಲರ್ ಪಾರ್ಟಿ'ಯಲ್ಲಿ ಅಶೋಕ ಎನ್ನುವ ಅತಿಥಿ ಪಾತ್ರದಲ್ಲಿ ನಟ ಶೈನ್ ಶೆಟ್ಟಿ ಕಾಣಿಸಿಕೊಂಡಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಮಾಫಿಯಾ', 'ಕಾಂತಾರ' ಸಿನಿಮಾಗಳಲ್ಲಿ ಅತಿಥಿ ಪಾತ್ರದ ಮೂಲಕ ಶೈನ್ ಶೆಟ್ಟಿ ಗಮನ ಸೆಳೆದಿದ್ದರು .

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್'ನಲ್ಲಿ ಐಎಎಸ್ ಅಧಿಕಾರಿಯಾಗಿ ಶೈನ್ ಶೆಟ್ಟಿ ನಟಿಸಿದ್ದು, ಸಿನಿ ವೀಕ್ಷಕರ ಮನ ಸೆಳೆದಿದ್ದಾರೆ. ಸದ್ಯ 'ಜಸ್ಟ್ ಮ್ಯಾರೀಡ್' ಸಿನಿಮಾದಲ್ಲಿ ನಾಯಕನಾಗಿ ಶೈನ್ ಶೆಟ್ಟಿ ಮೋಡಿ ಮಾಡಲಿದ್ದಾರೆ.

Actor Shine Shetty promoted as Advertising Director in Just Married

ಇನ್ನು ತಾರಾಗಣದಲ್ಲಿ ನಟರಾದ ಶ್ರುತಿ ಹರಿಹರನ್, ಗೋವಾದ ಮಾಡೆಲ್‌ಗಳಾದ ಅರ್ಹನಾ ಹಾಗೂ ಲುವಾನಾ, ನಟರಾದ ಅಚ್ಯುತ್ ಕುಮಾರ್ ಹಾಗೂ ನಟ ನಿರ್ದೇಶಕ ಅನೂಪ್ ಭಂಡಾರಿ, ಸಾಕ್ಷಿ ಅಗರ್ ವಾಲ್, ದೇವರಾಜ್ ಮುಂತಾದವರು ಇದ್ದಾರೆ. ವಿಶೇಷವೆಂದರೆ, ವೃತ್ತಿಪರ ನಟರಲ್ಲದ ಗುರುಮಲ್ಲಪ್ಪ ಎಂಬುವ ಸಿನಿಮಾ ತಂಡದ ಜನರೇಟರ್ ಆಪರೇಟರ್ ಕೂಡ ಅತಿಥಿ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಹಳ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅಮರ್ ಕಲಾ ನಿರ್ದೇಶನ ಹಾಗೂ ಪಾರ್ಥಿಬನ್ ಛಾಯಾಗ್ರಹಣ ಮಾಡಿದ್ದಾರೆ. ವಿಭಿನ್ನ ಇಂಟ್ರೆಸ್ಟಿಂಗ್ ಕಥಹಂದರವನ್ನು ಇಟ್ಟುಕೊಂಡಿರುವ ಈ ಸಿನಿಮಾಗೆ ಜನರು ಕಾಯುತ್ತಿದ್ದಾರೆ ಎಂದರೆ ತಪ್ಪಾಗಲ್ಲ.

More from Filmibeat

English summary
Shine Shetty starrer just married movie is a knot of many new experiments:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X