For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಸಿದ್ದು ಮೂಲಿಮನಿ

  By ಪ್ರಿಯಾ ದೊರೆ
  |

  ಪಾರು ಧಾರಾವಾಹಿಯಲ್ಲಿ ಪ್ರೀತು ಎಂದೇ ಚಿರಪರಿಚಿತರಾಗಿರುವ ನಟ ಸಿದ್ದು ಮೂಲಿಮನಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸಿದ್ದು ಮೂಲಿಮನಿ ಕನ್ನಡ ಚಿತ್ರರಂಗದ ಯುವನಟ. ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಅವರ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ.

  ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಸಿದ್ದು ಮೂಲಿಮನಿ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಕಿರುತೆರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ 'ಪಾರು' ಧಾರಾವಾಹಿ ಮೂಲಕ ಸಿದ್ದು ಮೂಲಿಮನಿ ಅವರು ಮನೆ ಮಾತಾಗಿದ್ದಾರೆ. ಕಿರುತೆರೆ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಸಿದ್ದು ಅವರು ಪ್ರೀತು ಎಂದೇ ಫೇಮಸ್.

  ಅರ್ಧಾಂಗಿ: ಮನೆಯವರ ವಿರೋಧದ ನಡುವೆ ದಿಗಂತ್ ಕರೆದುಕೊಂಡ ಹೋದ ಅದಿತಿ ವಾಪಾಸ್ ಬರುತ್ತಾಳಾ?ಅರ್ಧಾಂಗಿ: ಮನೆಯವರ ವಿರೋಧದ ನಡುವೆ ದಿಗಂತ್ ಕರೆದುಕೊಂಡ ಹೋದ ಅದಿತಿ ವಾಪಾಸ್ ಬರುತ್ತಾಳಾ?

  'ರಂಗಿತರಂಗ' ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟರು. ಚಿಕ್ಕವರಿದ್ದಾಗಿನಿಂದಲೂ ನಟಿಸಬೇಕು ಎಂದು ಕನಸು ಕಾಣುತ್ತಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರಂತೆ ತಾವು ಒಬ್ಬ ಉತ್ತಮ ನಟನಾಗಬೇಕು ಎಂದು ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

   ಕನಸಿನ ಬೆನ್ನೇರಿ ಬಂದ ನಟ

  ಕನಸಿನ ಬೆನ್ನೇರಿ ಬಂದ ನಟ

  ಸಿದ್ದು ಮೂಲಿಮನಿ ಅವರಿಗೆ ನಟಿಸುವ ಆಸೆ ನಿನ್ನೆ ಮೊನ್ನೆಯದಲ್ಲ. ಚಿಕ್ಕವಯಸ್ಸಿನಿಂದಲೂ ತಾನೊಬ್ಬ ನಟನಾಗಬೇಕು ಎಂದು ಕನಸು ಕಂಡವರು. ಕನಸಿನ ಬೆನ್ನತ್ತಿ ಬಂದವರು ಇಂದು ಉತ್ತಮ ನಟನಾಗಿ ಹೊರಹೊಮ್ಮಿದ್ದಾರೆ. 2015ರಲ್ಲಿ 'ರಂಗಿತರಂಗ' ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತಮ್ಮ ಕನಸಿನ ಮೊದಲ ಮೆಟ್ಟಿಲನ್ನೇ ನಿರ್ದೇಶಕ ಅನೂಪ್ ಭಂಡಾರಿ ಅವರ ಗರಡಿಯಲ್ಲಿ ಪಳಗಿದವರು. ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರದಲ್ಲಿ ಸಿದ್ದು ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. 'ರಂಗಿತರಂಗ' ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿದರು. ಮುಂದೆ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಸಿದ್ದು ಮೂಲಿಮನಿ ಅವರು ನಟಿಸಿದರು.

  ಎಜೆ - ಶರಣ್ ಬಾಲ್ಯದ ಗೆಳೆಯರಂತೆ: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಹಳ್ಳಿಮೇಷ್ಟ್ರು- ಸೂಜಿ ಬಂದಿದ್ಯಾಕೆ?ಎಜೆ - ಶರಣ್ ಬಾಲ್ಯದ ಗೆಳೆಯರಂತೆ: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಹಳ್ಳಿಮೇಷ್ಟ್ರು- ಸೂಜಿ ಬಂದಿದ್ಯಾಕೆ?

   ಸಹಾಯಕ ನಿರ್ದೇಶಕನಾಗಿಯೂ ಕೆಲಸ

  ಸಹಾಯಕ ನಿರ್ದೇಶಕನಾಗಿಯೂ ಕೆಲಸ

  'ರಂಗಿತರಂಗ' ಚಿತ್ರದ ಬಳಿಕ ಸಿದ್ದು ಮೂಲಿಮನಿ ಅವರು 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ತೆರೆಕಂಡ 'ಟೋರ ಟೋರ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ನಂತರ 2018 ರಲ್ಲಿ ತೆರೆಕಂಡ 'ಲಂಬೋದರ' ಚಿತ್ರದಲ್ಲೂ ಮಿಂಚಿದ್ದರು. ಮತ್ತೆ ಸಿದ್ದು ಮೂಲಿಮನಿ ಅವರು ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದಾದ ಬಳಿಕ 'ಪಾರು' ಧಾರಾವಾಹಿ ತಂಡವನ್ನು ಸೇರಿಕೊಂಡರು.

   'ಪಾರು' ತಂಡ ಸೇರಿದ ಸಿದ್ದು

  'ಪಾರು' ತಂಡ ಸೇರಿದ ಸಿದ್ದು

  'ಪಾರು' ಧಾರಾವಾಹಿಯಲ್ಲಿ ಸಿದ್ದು ಮೂಲಿಮನಿ ಅವರು ನಟಿಸುತ್ತಿದ್ದಾರೆ. ಇವರಿಗೆ ಹೆಚ್ಚು ಹೆಸರು ತಂದುಕೊಟ್ಟದ್ದು ಪಾರು ಧಾರಾವಾಹಿಯೇ. ಇದರಲ್ಲಿ ಸಿದ್ದು ಅವರು ನಾಯಕ ನಟ ಆದಿತ್ಯನ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮಗ ಪ್ರೀತಂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಸಿದ್ದು ಅವರ ಮೊದಲ ಧಾರಾವಾಹಿ 'ಬಣ್ಣದ ಬುಗುರಿ'. ಬಳಿಕ 'ಅನುರಾಗ ಸಂಗಮ', ಒಂದೂರಲ್ಲಿ 'ರಾಜರಾಣಿ', 'ಕೃಷ್ಣ ತುಳಸಿ' ಸೀರಿಯಲ್‌ಗಳಲ್ಲಿ ಸಿದ್ದು ಅವರು ನಟಿಸಿದ್ದಾರೆ.

  ಪ್ರೀತು ವರ್ತನೆಯಿಂದ ಕಂಗೆಟ್ಟ ಅಖಿಲ: ಆದಿಗೆ ಶಾಕ್ಪ್ರೀತು ವರ್ತನೆಯಿಂದ ಕಂಗೆಟ್ಟ ಅಖಿಲ: ಆದಿಗೆ ಶಾಕ್

   ಒಂದೇ ತಿಂಗಳಲ್ಲಿ ಎರಡು ಚಿತ್ರಗಳು ಬಿಡುಗಡೆ

  ಒಂದೇ ತಿಂಗಳಲ್ಲಿ ಎರಡು ಚಿತ್ರಗಳು ಬಿಡುಗಡೆ

  ಸಿದ್ದು ಮೂಲಿಮನಿ ಅವರು ಅನೂಪ್ ಭಂಡಾರಿ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದು, 'ವಿಕ್ರಾಂತ್ ರೋಣ' ಚಿತ್ರದಲ್ಲಿ ಮುನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಟ್ಟು ಮೂರು ಬಾರಿ ಸಿದ್ದು ಅವರು ಅನುಪ್ ಭಂಡಾರಿ ಅವರ ಜೊತೆಗೆ ಕೆಲಸ ಮಾಡಿದ್ದಾರೆ. ಅಲ್ಲದೇ, ಕಿಚ್ಚ ಸುದೀಪ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಹ ಹೇಳಿದ್ದಾರೆ. ಇನ್ನು ಇವರ ನಟನೆಯ 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಸಿದ್ದು ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. 'ಧರಣಿ ಮಂಡಲ ಮಧ್ಯದೊಳಗೆ', 'ಅಭಿರಾಮ ಚಂದ್ರ', 'ಓಮಿನಿ', 'ಹ್ಯಾಪಿ ಬರ್ತ್ಡೇ ಟು ಮಿ' ಚಿತ್ರಗಳ ಶೂಟಿಂಗ್ ಮುಗಿದಿದ್ದು ರಿಲೀಸ್‌ಗೆ ಸಜ್ಜಾಗಿವೆ.

  English summary
  Actor siddu moolimani cini journey and his many movies are yet to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X