ಲೈಫ್‌ ಪಾಟ್ನರ್ ವೈಫ್ ಬಗ್ಗೆ ರ್ಯಾಪ್‌ ಸಾಂಗ್‌ ಬರೆದ ಸಿಹಿಕಹಿ ಚಂದ್ರು

By ಪ್ರಿಯಾ ದೊರೆ

ಅಭಿಮಾನಿಗಳಿಂದ ನಳ ಮಹಾರಾಜ ಎಂದೇ ಗುರುತಿಸಿಕೊಳ್ಳುವ ಸಿಹಿಕಹಿ ಚಂದ್ರು ಅನೇಕ ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿಯಿದೆ. ಇವರು ನಟನೆಯಲ್ಲಿ ಹೇಗೆ ನಿಪುಣರೋ ಹಾಗೇ ಅಡುಗೆ ಮಾಡುವುದರಲ್ಲಿ ನಿಪುಣರು. ಊಟವನ್ನು ಎಷ್ಟು ಇಷ್ಟಪಟ್ಟು ಸವಿಯುತ್ತಾರೆ. ಅಷ್ಟೇ ಪ್ರೀತಿಯಿಂದ ಅಡುಗೆಯನ್ನೂ ಮಾಡಿ ಇಡೀ ಕರುನಾಡಿಗೆ ಉಣ ಬಡಿಸಿದ್ದಾರೆ.

ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೊಂಬಾಟ್ ಭೋಜನ' ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಿಹಿಕಹಿ ಚಂದ್ರು ಅವರು ಈಗಾಗಲೇ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಬಸ್ಸಾರು, ಮುಂದೆ ಇಂದ ಹಿಡಿದು, ಗೀ ರೈಸ್‌, ಧಮ್‌ ಬಿರಿಯಾನಿ ವರೆಗೂ ಪ್ರತಿಯೊಂದು ಬಗೆಯ ಅಡುಗೆಯನ್ನು ತಮ್ಮ ಕಾರ್ಯಕ್ರಮದಲ್ಲಿ ತೋರಿಸಿಕೊಟ್ಟಿದ್ದಾರೆ.

Actor Sihikahi chandru sung interesting rap song for about wife Geetha

ಸಿಹಿಕಹಿ ಚಂದ್ರು ಜರ್ನಿ

ಇನ್ನು ಸಿಹಿಕಹಿ ಚಂದ್ರು ಅವರು ಹೆಸರು ಚಂದ್ರಶೇಖರ್. 1986ರಲ್ಲಿ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ನಟಿಸಿ ಪ್ರಸಿದ್ಧಿ ಗಳಿಸಿದರು. ಅಂದಿನಿಂದ ಇವರನ್ನು ಸಿಹಿಕಹಿ ಚಂದ್ರು ಎಂದೇ ಕರೆಯಲಾಗುತ್ತದೆ. 1990ರಲ್ಲಿ 'ಗಣೇಶನ ಮದುವೆ' ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಅವರು, ಇದುವರೆಗೆ 50ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ ನಲ್ಲೂ ಕೂಡ ಭಾಗವಹಿಸಿದ್ದ ಇವರು, ಎಲ್ಲೇ ಹೋದರು ರುಚಿ ರುಚಿಯಾದ ಊಟ, ಸಾಧ್ಯವಾದರೆ ಅಡುಗೆ ಮಾಡುತ್ತಾರೆ. ಸಿಹಿಕಹಿ ಚಂದ್ರು ಹಲವು ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ನಿರೂಪಣೆಯಲ್ಲೂ ಗುರುತಿಸಿಕೊಂಡಿದ್ದಾರೆ.

ಪತ್ನಿ ಬಗ್ಗೆ ಹಾಡು ಬರೆದ ನಟ

ಸಿಹಿಕಹಿ ಚಂದ್ರ ಅವರು ಗೀತಾ ಅವರನ್ನು ವಿವಾಹವಾಗಿದ್ದು, ಹಿತಾ ಎಂಬ ಮಗಳಿದ್ದಾಳೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದಾಶಿವ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಇದೀಗ ಕೀರ್ತಿ ಇಎನ್‌ ಟಿ ಕ್ಲಿನಿಕ್‌ ಎಂಬ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಯಾವಾಗಲೂ ತಮಾಷೆಯಾಗಿ ಮಾತನಾಡುವ ಸಿಹಿಕಹಿ ಚಂದ್ರು ಅವರು ಸಂದರ್ಶನ ನೀಡುವಾಗಲೇ ರ್ಯಾಪ್‌ ಸಾಂಗ್‌ ಒಂದನ್ನು ಬರೆದು ಹಾಡಿದ್ದಾರೆ. ಅದೂ ಕೂಡ ಹೆಂಡತಿಯರಿಗಾಗಿ ಈ ಹಾಡನ್ನು ಮೀಸಲಿಟ್ಟಿದ್ದಾರೆ.

Actor Sihikahi chandru sung interesting rap song for about wife Geetha

ರ್ಯಾಪ್ ಸಾಂಗ್

ವರೀಸ್ ಇನ್ವೈಟೆಡ್ ಫಾರ್ ಎವರ್ ಅವಳೇ ಅಂದ್ರೆ ವೈಫು,
ವೈಫ್ ಅಂದ್ರೆ ಮುದ್ದು ಮಾಡಿ ಮೂಗು ಕುಯ್ಯೋ ನೈಫು,
ವೈಫ್ನಿಂದ ದೂರ ಇದ್ರೆ ನಮ್ಮ ಲೈಫು ಸೇಫು,
ವರ್ಲ್ಡ್ವೈಡ್ ಆಲ್ ವೈಫ್ ಎಲ್ಲಾ ಒಂದೇ ಟೈಪು,
ಹೆಂಡತಿಗೆ ಜಂಭ, ಬಡಾಯಿ ಬಾಯಿ ತುಂಬಾ,
ಗಂಡ ಪಾಪ ತುಂಬಾ,
ಬಾಡಿದ ಬಾಳೆ ಕಂಬ,
ಹೆಂಡತಿ ಹೇಳಿದ್ದೇ ಸರಿ ಸರಿ,
ಅವಳು ಮಾಡ್ತಾಳೆ ಯಾವಾಗ್ಲೂ ಕಿರಿ ಕಿರಿ,
ವರಿ ವರಿ ವರಿ, ಹೆಂಡ್ತಿ ಅಂದ್ರೆ ವರಿ,
ಸರಿ ಸರಿ ಸರಿ ಹೆಂಡ್ತಿ ಹೇಳಿದ್ದೇ ಸರಿ,
ಕುರಿ ಕುರಿ ಕುರಿ, ಪತಿ ಹರಕೆ ಕುರಿ..

ಎಂದು ಬರೆದು ಜಗತ್ತಿನ ಪ್ರತಿಯೊಬ್ಬ ಮಹಿಳೆಯೂ ಮದುವೆಯಾದರೆ ಆಕೆಯ ಪತಿಯ ಪರಿಸ್ಥಿತಿ ಏನು ಎಂಬುದನ್ನು ಸಿಂಪಲ್‌ ಆಗಿ ವಿವರಿಸಿದ್ದಾರೆ. ಈ ಹಾಡು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಗಂಡಸರೆಲ್ಲಾ ನಿಜ ಎಂದು ಕಮೆಂಟ್‌ ಮಾಡಿ ಹಾಡನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಹಾಸ್ಯದ ಮೂಲಕ ವೀಕ್ಷಕರನ್ನು ಸಿಹಿಕಹಿ ಚಂದ್ರು ಅವರು ನಗಿಸಿದ್ದಾರೆ.

More from Filmibeat

English summary
Amruthdhaare serial Actor sihikahi chandru wrote rap song for wife.
Read more about: serial sihi kahi chandru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X