ಈ ವಾರ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ಉಗ್ರಂ ವೀರ
Recommended Video
Weekend With Ramesh Season 4: ಈ ವಾರ ವೀಕೆಂಡ್‍ಗೆ ಬರ್ತಾರೆ ಸೂಪರ್ ಸ್ಟಾರ್
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಆರಂಭವಾದ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ನಾಲ್ಕು ವಾರಗಳನ್ನ ಯಶಸ್ವಿಯಾಗಿ ಮುಗಿಸಿದೆ. ರಾಘವೇಂದ್ರ ರಾಜ್ ಕುಮಾರ್, ನಟಿ ಪ್ರೇಮಾ, ಪ್ರಕಾಶ್ ಬೆಳವಾಡಿ, ಶಶಿ ಕುಮಾರ್ ಮತ್ತು ವಿನಯ ಪ್ರಸಾದ್ ಈ ಆವೃತ್ತಿಯಲ್ಲಿ ಭಾಗವಹಿಸಿದ್ದರು.
ಇದೀಗ ಮತ್ತೊಬ್ಬ ಅತಿಥಿ ಈ ಸಾಧಕ ಕುರ್ಚಿಯಲ್ಲಿ ಕೂರವ ಸಮಯ. ಈ ವಾರ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಯೂತ್ ಐಕಾನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಧಕರಾಗಿ ಬರ್ತಿದ್ದಾರೆ.
ಈಗಾಗಲೇ ಶ್ರೀಮುರಳಿ ಅವರ ಎಪಿಸೋಡ್ ಚಿತ್ರೀಕರಣ ಮುಗಿದಿದ್ದು, ಈ ಕುರಿತು ಸಣ್ಣದೊಂದು ಮೇಕಿಂಗ್ ವಿಡಿಯೋ ಹಂಚಿಕೊಂಡಿದೆ ಜೀ ಕನ್ನಡ ವಾಹಿನಿ.

ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಮುರಳಿ ಸಮಸ್ತ ವೀಕ್ಷಕರ ನಮಸ್ಕರಿಸಿ ಸಾಧಕರ ಸೀಟಿನಲ್ಲಿ ಕೂತಿದ್ದಾರೆ. ಅಂದ್ಹಾಗೆ, ಶ್ರೀಮುರಳಿ ಅವರ ಎಪಿಸೋಡ್ ಶನಿವಾರ ಪ್ರಸಾರವಾಗಲಿದೆ. ಎರಡೂ ದಿನವೂ ಇರುತ್ತಾ ಅಥವಾ ಭಾನುವಾರ ಇನ್ನೊಬ್ಬ ಅತಿಥಿ ಬರ್ತಾರಾ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ.
More from Filmibeat
English summary
Kannada Actor, roaring star sri murali participate in weekend with ramesh season 4. the episode will telecast in this saturday.


Click it and Unblock the Notifications











