ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ನಟ ಸುದೀಪ್ ಮಿಂಚು!
ಸುದೀಪ್ ಹೆಸರು ಬಿಟ್ಟು ಕನ್ನಡ ಬಿಗ್‌ಬಾಸ್ ಬಗ್ಗೆ ಮಾತನಾಡುವಂತಿಲ್ಲ, ಸುದೀಪ್ ಹಾಗೂ ಕನ್ನಡ ಬಿಗ್‌ಬಾಸ್ ಪರಸ್ಪರ ಬೆಸೆದುಕೊಂಡು ಬಿಟ್ಟಿವೆ. ಸುದೀಪ್ ಬಿಟ್ಟು ಇನ್ನಾವುದೇ ನಟನನ್ನು ಬಿಗ್‌ಬಾಸ್ ಶೋ ನಿರೂಪಕನಾಗಿ ಊಹಿಸಿಕೊಳ್ಳುವುದು ಅಸಾಧ್ಯ.
ಆದರೆ ಈ ವರ್ಷ ಕನ್ನಡ ಬಿಗ್‌ಬಾಸ್ ನಡೆಯುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ಕನ್ನಡ ಬಿಗ್‌ಬಾಸ್ ಕೆಲಸಗಳು ಪ್ರಾರಂಭವಾಗಿವೆ. ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಮತ್ತೆ ಪ್ರಾರಂಭವಾಗಲಿದೆ.
ಈ ನಡುವೆ ನಟ ಸುದೀಪ್ ಬಿಗ್‌ಬಾಸ್ ವೇದಿಕೆ ಏರಿದ್ದಾರೆ. ಆದರೆ ಅದು ಕನ್ನಡದ ಬಿಗ್‌ಬಾಸ್ ಅಲ್ಲ ಬದಲಿಗೆ ತೆಲುಗು ಬಿಗ್‌ಬಾಸ್.
ಹೌದು, ತೆಲುಗಿನಲ್ಲಿ ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್‌ಬಾಸ್ ಶೋ ಅಂತಿಮ ಹಂತಕ್ಕೆ ಬಂದಿದ್ದು, ಆ ಶೋ ಗೆ ಅತಿಥಿಯಾಗಿ ನಟ ಸುದೀಪ್ ಭಾಗವಹಿಸಿದ್ದರು.

ತೆಲುಗು ಬಿಗ್‌ಬಾಸ್ ಶೋ ನಿರೂಪಿಸುತ್ತಿರುವ ಸುದೀಪ್
ಬಿಗ್‌ಬಾಸ್ ನಿರೂಪಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುದೀಪ್, ತೆಲುಗು ಬಿಗ್‌ಬಾಸ್ ಶೋ ಅನ್ನು ಸಹ ನಿರೂಪಿಸಿದ್ದಾರೆ. ಅಲ್ಲಿಯೂ ಅವರು ಗಮನ ಸೆಳೆದಿರುವುದರಲ್ಲಿ ಅನುಮಾನವೇ ಇಲ್ಲ.

ಅಕ್ಕಿನೇನಿ ನಾಗಾರ್ಜು ಜೊತೆಗೆ ಸುದೀಪ್ ಚಿತ್ರ
ಈ ಬಗ್ಗೆ ಪೋಸ್ಟ್ ಹಾಕಿರುವ ಸುದೀಪ್, ತೆಲುಗು ಬಿಗ್‌ಬಾಸ್ ಶೋ ಗೆ ಅತಿಥಿಯಾಗಿ ಹೋಗಿದ್ದೆ. ಅಕ್ಕಿನೇನಿ ನಾಗಾರ್ಜುನ ಅವರೊಟ್ಟಿಗೆ ಶೋ ನಿರೂಪಿಸಿದ್ದು ಒಳ್ಳೆಯ ಅನುಭವ. ಮನೆ ಒಳಗಿದ್ದ ಸ್ಪರ್ಧಿಗಳೊಂದಿಗೆ ಮಾತನಾಡಿದೆ. ಎಂದು ಅಕ್ಕಿನೇನಿ ನಾಗಾರ್ಜುನ ಹಾಗೂ ಸುದೀಪ್ ಒಟ್ಟಿಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭ
ಕನ್ನಡದ ಬಿಗ್‌ಬಾಸ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಬಿಗ್‌ಬಾಸ್ ಹಿಂದಿನ ಶಕ್ತಿ ಪರಮೇಶ್ವರ ಗುಂಡ್ಕಲ್ ಈಗಾಗಲೇ ಸುದೀಪ್ ಅವರನ್ನು ಭೇಟಿಯಾಗಿ ಶೋ ಬಗ್ಗೆ ಮಾತನಾಡಿದ್ದು, ಬಿಗ್‌ಬಾಸ್ ಕಾರ್ಯಗಳು ಪ್ರಾರಂಭವಾಗಿವೆ.

ಸಂಕ್ರಾಂತಿ ವೇಳೆಗೆ ಆರಂಭ?
ಮುಂದಿನ ಸಂಕ್ರಾಂತಿ ವೇಳೆಗೆ ಕನ್ನಡ ಬಿಗ್‌ಬಾಸ್ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಹಿಂದಿ, ತೆಲುಗು, ತಮಿಳುಗಳಲ್ಲಿ ಬಿಗ್‌ಬಾಸ್ ನಡೆಯುತ್ತಿದೆ. ಮಲಯಾಳಂ ನಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್ ಶೋ ಅನ್ನು ಕೊರೊನಾ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು.


Click it and Unblock the Notifications











