'ದೃಷ್ಟಿಬೊಟ್ಟು' ಇಟ್ಟುಕೊಂಡು ಭಜರಂಗಿ ಪಾತ್ರದ ಮೂಲಕ ಕಿರುತೆರೆಗೆ ಮರಳಿದ ಸುಜಯ್ ಹೆಗಡೆ; ಪಾತ್ರವೇನು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಯ ಹೆಸರು 'ದೃಷ್ಟಿಬೊಟ್ಟು'. ಈ ಧಾರಾವಾಹಿಯಲ್ಲಿ ಭಜರಂಗಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಸುಜಯ್ ಹೆಗಡೆ. 'ದೃಷ್ಟಿಬೊಟ್ಟು'ವಿನಲ್ಲಿ ನಾಯಕ ದತ್ತಬಾಯ್‌ಯ ಬೆಸ್ಟ್ ಗೆಳೆಯ, ಬಾಲ್ಯದ ಗೆಳೆಯ ಭಜರಂಗಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಸುಜಯ್ ಹೆಗಡೆ.

"ಭಜರಂಗಿ ಪಾತ್ರ ಹೇಗಿದೆ ಅಂತ ಹೇಳಿದ್ರೆ 'ಸಲಾರ್' ಸಿನಿಮಾದಲ್ಲಿ ಇಬ್ಬರೂ ಹೀರೋಗಳ ಫ್ರೆಂಡ್ ಶಿಪ್ ಇದೆಯಲ್ವಾ ಅದೇ ಥರ. ಬೆಸ್ಟ್ ಫ್ರೆಂಡ್ಸ್, ಆದರೆ, ಅಣ್ಣ ತಮ್ಮನ ಥರ ಇರ್ತಾರೆ. ದತ್ತಬಾಯ್ ಮತ್ತೆ ಭಜರಂಗಿ ಕೂಡಾ ಅಷ್ಟೇ, ತುಂಬಾ ಒಳ್ಳೆಯ ಫ್ರೆಂಡ್ಸ್. ಒಬ್ಬರನ್ನೊಬ್ಬರು ಬಿಟ್ಟುಕೊಡೊಲ್ಲ. ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ತೇವೆ. ಅಂದ ಹಾಗೇ ನಮ್ಮಿಬ್ಬರ ಭೇಟಿಯಾಗೋದು ಮೂರನೇ ಕ್ಲಾಸ್‌ನಲ್ಲಿದ್ದಾಗ. ನಾನು ಅನಾಥ, ದತ್ತನೂ ಅನಾಥ. ಅಲ್ಲಿಂದ ಕಷ್ಟಪಟ್ಟು ಒಂದು ಹಂತಕ್ಕೆ ಬಂದಿರುತ್ತೇವೆ" ಎಂದು 'ದೃಷ್ಟಿಬೊಟ್ಟು' ಧಾರಾವಾಹಿಯ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಸುಜಯ್ ಹೆಗಡೆ ಹಂಚಿಕೊಂಡಿದ್ದಾರೆ.

Actor Sujay Hegde returned to television with the role of Bajrangi in Drishtibottu

"ಅನಿವಾರ್ಯ ಕಾರಣಗಳಿಂದ ನಾವು ಬದುಕಲೇ ಬೇಕಾಗುತ್ತಲ್ಲ. ಆ ಥರ ಕಾರಣಗಳಿಂದ ನಾವು ರೌಡಿಸಂ ಅಂತ ಜನ ಅಂದುಕೊಳ್ಳುತ್ತಾರೆ. ಆದರೆ ಅದು ಎಕ್ಸಾಟ್ ಆಗಿ ರೌಡಿಸಂ ಅಲ್ಲ. ಮಾಡಿದ್ರೆ ಅದರಲ್ಲಿ ಒಂದು ನ್ಯಾಯ ಇರ್ಬೇಕು. ಆ ಥರ ಡೀಲ್‌ಗಳನ್ನು ಒಪ್ಕೊಂಡು ನಾವು ಮೇಲಕ್ಕೆ ಬಂದಿರೋದು‌. ಇವಾಗ ಯಾವ ಲೆವೆಲ್‌ಗೆ ಬಂದಿದ್ದೀವಿ ಅಂತ ಅಂದರೆ ನಾವೀಗ ಬಳ್ಳಾರಿ ಡಾನ್ಸ್. ಬಳ್ಳಾರಿ ಡಾನ್ಸ್ ಅಂದ್ರೆ ದತ್ತಾ ಬಾಯ್, ಜೊತೆಗೆ ಗೆಳೆಯ ಭಜರಂಗಿ ಇದ್ದೇ ಇರ್ತಾನೆ. ದತ್ತಾಬಾಯ್ ಜೊತೆಗೆ ಭಜರಂಗಿ ಇದ್ದಾನೆ ಅಂದ್ರೆ ದತ್ತಾ ಸೇಫ್ ಆಗಿದ್ದಾನೆ. ಭಜರಂಗಿ ಜೊತೆಗೆ ದತ್ತಾ ಇದ್ದರೆ, ಭಜರಂಗಿ ಸೇಫ್ ಆಗಿ ಇರ್ತಾನೆ ಎಂದೇ ಅರ್ಥ. ಭಜರಂಗಿ ತನ್ನ ಪ್ರಾಣ ಕೊಟ್ಟಾದ್ರೂ ದತ್ತನನ್ನು ಕಾಪಾಡ್ತಾನೆ " ಎಂದು ಭಜರಂಗಿ ಪಾತ್ರದ ಬಗ್ಗೆ ಸುಜಯ್ ಹೆಗಡೆ ಜೊತೆಗೆ ಹೇಳಿಕೊಂಡಿದ್ದಾರೆ.

"ದೃಷ್ಟಿಬೊಟ್ಟು ಧಾರಾವಾಹಿಯ ಎಲ್ಲಾ ಪಾತ್ರಗಳು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಸ್ಕ್ರಿಪ್ಟ್ ರೈಟರ್ ಆಗಿರಬಹುದು, ಟೀಂನವರು ಆಗಿರಬಹುದು ಎಲ್ಲರೂ ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಧಾರಾವಾಹಿಯ ಕತೆಯೂ ಕೂಡಾ ಅಷ್ಟೆ, ತುಂಬಾ ಚೆನ್ನಾಗಿದೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ" ಎಂದು ಸುಜಯ್ ಹೆಗಡೆ ಹೇಳುತ್ತಾರೆ.

"ಕಥೆಯೊಂದು ಶುರುವಾಗಿದೆ ಧಾರಾವಾಹಿಯ ನಂತರ ನಾನು ಮೂರು ನಾಲ್ಕು ತಿಂಗಳು ಬ್ರೇಕ್ ತೆಗೆದುಕೊಂಡಿದ್ದೆ. ಸುವರ್ಣ ಚಾನೆಲ್‌ನವರು ಕಥೆಯೊಂದು ಶುರುವಾಗಿದೆ ಧಾರಾವಾಹಿಯ ಮುಗಿಯುತ್ತದೆ ಎನ್ನುವಾಗಲೇ ಬೇರೊಂದು ಧಾರಾವಾಹಿ ನನಗೆ ಕೊಟ್ಟಿದ್ದರು. ಸ್ವಲ್ಪ ದಿನ ಬ್ರೇಕ್ ಬೇಕು ಎನ್ನುವ ಕಾರಣಕ್ಕೆ ನಾನು ಅದನ್ನು ಒಪ್ಪಿರಲಿಲ್ಲ. ಆ ಗ್ಯಾಪ್‌ನಲ್ಲಿ ತುಂಬಾ ಸೀರಿಯಲ್‌ನಿಂದ ಅವಕಾಶ ಬರ್ತಾ ಇತ್ತು" ಎಂದು ಸುಜಯ್ ಹೆಗಡೆ ಹೇಳಿದ್ದಾರೆ.

"ಬಂದಿರುವಂತಹ ಅವಕಾಶಗಳಲ್ಲಿ ಯಾವುದು ಬೆಸ್ಟ್ ಅಂತ ನಾನು ಚ್ಯೂಸ್ ಮಾಡುವಷ್ಟರಲ್ಲಿ ನಂಗೆ ಶ್ರೀಸಾಯಿ ಆಂಜನೇಯ ಕಂಪೆನಿ ಕಡೆಯಿಂದ ಕಾಲ್ ಬರುತ್ತೆ. ಚಾನೆಲ್ ಕಡೆಯಿಂದ ನಿಮ್ಮನ್ನ ಚೂಸ್ ಮಾಡ್ಬೇಕು ಅಂಥ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಒಂದು ಸಲ ಆಡಿಶನ್ ಗೆ ಬನ್ನಿ. ಲುಕ್ ಟೆಸ್ಟ್ ಗೆ ಬನ್ನಿ, ಈ ಪರ್ಟಿಕ್ಯುಲರ್ ಪಾತ್ರದಲ್ಲಿ ಹೇಗೆ ಕಾಣ್ತೀರಿ ನೋಡೋಣ ಎಂದು ಹೇಳ್ತಾರೆ" ಎಂದು ಸುಜಯ್ ಹೆಗಡೆ ಹೇಳುತ್ತಾರೆ.

"ಆಡಿಶನ್‌ಗೆ ಹೋದಾಗ ಧಾರಾವಾಹಿಯ ಕಥೆಯ ಬಗ್ಗೆ ಹೇಳಿದ್ರು. ಅಷ್ಟೇ ಅಲ್ಲ ನನ್ನ ಪಾತ್ರದ ಬಗ್ಗೆಯೂ ಹೇಳಿದರು. ಪಾತ್ರದ ಬಗ್ಗೆ ಕೇಳಿದಾಗ ನಾನು ಇಷ್ಟು ದಿನಗಳ ಕಾಲ ನೀವೆಲ್ಲಾ ನನ್ನನ್ನು ತೆರೆಯ ಮೇಲೆ ತಮಾಷೆಯ ಹುಡುಗನ್ನಾಗಿ ನೋಡಿದ್ದಿರಿ. ಈಗ ಈ ಸೀರಿಯಸ್ ಪಾತ್ರಕ್ಕೆ ಹೇಗೆ ಆಯ್ಕೆ ಮಾಡಿದ್ರಿ ಎಂದು ನಾನು ಕೇಳಿದ್ದೆ‌. ಯಾಕೆಂದರೆ ನಿಜ ಜೀವನದಲ್ಲಿ ನಾನು ತುಂಬಾ ತಮಾಷೆಯಿಂದ ಇರುವ ಹುಡುಗ. ಇನ್ನೊಬ್ಬರನ್ನು ತಮಾಷೆ ಮಾಡಿಕೊಂಡು, ಕಾಲು ಎಳೆದುಕೊಂಡಿರುವ ಹುಡುಗ. ಈಗ ಈ ಪಾತ್ರಕ್ಕೆ ಸೆಟ್ ಆದೆ. ಒಟ್ಟಾರೆಯಾಗಿ ತುಂಬಾ ಕಷ್ಟಪಟ್ಟು, ಇಷ್ಟಪಟ್ಟು ಮಾಡಿರುವಂತಹ ಪಾತ್ರ ಇದು. ತುಂಬಾ ಚಾಲೆಂಜಿಂಗ್ ಆಗಿರುವಂತಹ ಪಾತ್ರ ಇದು" ಎಂದು ದೃಷ್ಟಿಬೊಟ್ಟು ಧಾರಾವಾಹಿಯ ಬಗ್ಗೆ ಸುಜಯ್ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

"ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದು ನನ್ನ ಮೂರನೇ ಧಾರಾವಾಹಿ. ಈ ಮೊದಲು 'ಗೋಕುಲದಲ್ಲಿ ಸೀತೆ' ಧಾರಾವಾಹಿಯಲ್ಲಿ ನಟಿಸಿದ್ದೆ. ತದ ನಂತರ ಪೌರಾಣಿಕ ಧಾರಾವಾಹಿ 'ಶನಿ' ಆಗಿಯೂ ಬಣ್ಣ ಹಚ್ಚಿದ್ದೆ. ಇದೀಗ ವರ್ಷಗಳ ನಂತರ ಮತ್ತೆ ಕಂ ಬ್ಯಾಕ್ ಆಗುತ್ತಿರುವುದು ಖುಷಿ ತಂದಿದೆ. ಅದರಲ್ಲೂ ಚಾನೆಲ್ ಕಡೆಯಿಂದ ಆಫರ್ ಬಂದಿರುವುದು ಕೂಡಾ ನನಗೆ ಖುಷಿ ತಂದಿದೆ. ಮೊದಲ ಬಾರಿಗೆ ಡಿಫರೆಂಟ್ ಆಗಿರುವ, ಸೀರಿಯಸ್ ಆಗಿರುವಂತಹ ಕ್ಯಾರೆಕ್ಟರ್‌ನ ಮಾಡುತ್ತಿದ್ದೇನೆ" ಎಂದು ಕಂ ಬ್ಯಾಕ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ ಸುಜಯ್ ಹೆಗಡೆ.

More from Filmibeat

English summary
Actor Sujay Hegde returned to television with the role of Bajrangi in Drishtibottu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X