ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಹ್ಯಾಂಡ್‌ಸಮ್ ಹುಡುಗ ಇವರೇ

By ಅನಿತಾ ಬನಾರಿ

ಕನ್ನಡ ಕಿರುತೆರೆಯ ನಟ ಸ್ವಾಮಿನಾಥನ್ ಅನಂತರಾಮನ್ ಬಹುತೇಕ ಎಲ್ಲರಿಗೂ ಪರಿಚಿತ ಹೆಸರು. ಇಂಜಿನಿಯರ್ ವೃತ್ತಿಯೊಂದಿಗೆ ನಟನಾಗಿದ್ದ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮಿಥುನ ರಾಶಿಯಲ್ಲಿ ನಾಯಕ . ಈ ಧಾರಾವಾಹಿ ಮೂಲಕ 'ಮಿಥುನ್' ಆಗಿ ಖ್ಯಾತಿ ಗಳಿಸಿದ್ದರು. ಇದೀಗ ತಮ್ಮ ಮೊದಲ ತೆಲುಗು ಧಾರಾವಾಹಿಯ ಮೂಲಕ ಅಲ್ಲಿನ ವೀಕ್ಷಕರ ಹೃದಯವನ್ನು ಗೆಲ್ಲುತ್ತಿದ್ದಾರೆ.

'ಮಿಥುನ ರಾಶಿ' ಆರಂಭವಾದಗಿನಿಂದಲೇ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಸ್ವಾಮಿನಾಥನ್ ಅವರನ್ನು ಭೇಟಿಯಾದ ಮೊದಲ ಅಭಿಮಾನಿ ಅವರಿಗೆ ನೀಡಿದ ಪ್ರತಿಕ್ರಿಯೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು.

Actor Swaminathan Anantharaman of Mithuna Raashi fame is busy on Telugu television

ಒಂದು ಮಧ್ಯಾಹ್ನ ಸ್ವಾಮಿನಾಥನ್ ಅವರ ಸ್ನೇಹಿತನ ತಾಯಿಯೊಂದಿಗೆ ಮಾರ್ಗದ ಬದಿಯಲ್ಲಿ ತೆರಳುತ್ತಿದ್ದಾಗ ಮಧ್ಯ ವಯಸ್ಕ ದಂಪತಿಗಳು ಬಂದು 'ಮಿಥುನ ರಾಶಿ' ಧಾರಾವಾಹಿಯ ಮಿಥುನ್ ಅಲ್ವಾ ಎಂದು ಕೇಳಿದರು. ಹೌದು, ಎಂದ ತಕ್ಷಣವೇ ಶೋನಲ್ಲಿ ರಾಶಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದೇನೆಂದು ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ್ದರು. ಅಲ್ಲದೆ ರಾಶಿಯನ್ನು ನೋಯಿಸದಂತೆ, ಬದಲಾಗಿ ಆಕೆಯನ್ನು ಬೆಂಬಲಿಸುವಂತೆ ಅವರಿಗೆ ಸಲಹೆ ನೀಡಿದ್ದರು. ಆ ಮಟ್ಟಿಗೆ ಈ ಧಾರಾವಾಹಿ ಫೇಮಸ್ ಆಗಿತ್ತು.

ದಂಪತಿಯ ಪ್ರತಿಕ್ರಿಯೆಗೆ ಬೆರಗಾಗಿದ್ದೆ

ಮೊದಲ ಬಾರಿಗೆ ಅಭಿಮಾನಿಗಳನ್ನು ಭೇಟಿಯಾಗಿದ್ದ ನಟ ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡಿದ್ದರಂತೆ. ದಂಪತಿಗಳನ್ನು ಶಾಂತಗೊಳಿಸಿ, ಇದು ಕೇವಲ ಪ್ರದರ್ಶನ ಎಂದು ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿದ್ದರು. ಮತ್ತೊಂದು ಕಡೆ ಇವರೊಂದಿಗೆ ಇದ್ದ ಸ್ನೇಹಿತನ ತಾಯಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಅವರಿಗೆ ಧಾರಾವಾಹಿಯ ಬಗ್ಗೆ ಇನ್ನೂ ಹೇಳಿರಲಿಲ್ಲ. ಏನೂ ಸುಳಿವಿಲ್ಲದೇ ಪಕ್ಕದಲ್ಲಿ ನಿಂತಿದ್ದ ಅಮ್ಮನಿಗೆ ಎಲ್ಲವನ್ನೂ ತಿಳಿಸುವಷ್ಟರಲ್ಲಿ ಪರಿಸ್ಥಿತಿಯೂ ಸರಿ ಹೋಯಿತು ಎಂದಿದ್ದರು.

ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ

ಆರಂಭವಾದಾಗಿನಿಂದ ಮುಗಿಯುವ ತನಕ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದ 'ಮಿಥುನ ರಾಶಿ' ಧಾರಾವಾಹಿಯ ಮೂಲಕ ಸ್ವಾಮಿನಾಥನ್ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದರು. ಸದ್ಯ ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಸ್ವಾಮಿನಾಥನ್‌ಗೆ ಚಿಕ್ಕ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಗೀಳು ಇತ್ತು. ಅದೇ ಈಗ ಸಕ್ಸಸ್ ಕೊಟ್ಟಿದೆ. ಪರಭಾಷೆಯವರೆಗೂ ಕರೆದುಕೊಂಡು ಹೋಗಿದೆ.

Actor Swaminathan Anantharaman of Mithuna Raashi fame is busy on Telugu television

ಟೆಲಿಫಿಲಂಗಳಲ್ಲಿಯೂ ಮೋಡಿ

'ದಿ ಪ್ಲಾನ್' ಮತ್ತು 'ವೆನ್ ದಿ ಡಾನ್ ಮೀಟ್ ದಿ ಡಸ್ಕ್' ಟೆಲಿಫಿಲಂಗಳಲ್ಲಿ ಅಭಿನಯಿಸಿರುವ ಸ್ವಾಮಿನಾಥನ್ 'ಮಿಥುನ ರಾಶಿ' ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಮನೋಜ್ಞ ನಟನೆಯ ಮೂಲಕ ಕಿರುತೆರೆ ಅಂಗಳದಲ್ಲಿ ಗುರುತಿಸಿಕೊಂಡಿರುವ ಸ್ವಾಮಿನಾಥನ್ ಮುಂದೆ ಹಿರಿತೆರೆಗೂ ಕಾಲಿಟ್ಟರು. ಇದೀಗ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಕನ್ನಡ ಕಿರುತೆರೆಯ ಹ್ಯಾಂಡ್‌ಸಮ್ ಹುಡುಗ ಮತ್ತೆ ಕನ್ನಡ ಕಿರುತೆರೆಗೆ ಕಾಲಿಡುತ್ತಾರಾ ಎಂದು ನೋಡಬೇಕಿದೆ.

More from Filmibeat

English summary
Actor Swaminathan Anantharaman of Mithuna Raashi fame is busy on Telugu television, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X