"ಪ್ರತಿದಿನ ಧಾರಾವಾಹಿ ನೋಡುವ ಪ್ರೇಕ್ಷಕರು ಸಿನಿಮಾ ಹಾಲ್‌ಗಳಿಗೆ ಬರುವುದಿಲ್ಲ"; ನಟ ತಾಂಡವ್

By ಅನಿತಾ ಬನಾರಿ

ಧಾರಾವಾಹಿ ಕಲಾವಿದರೆಲ್ಲರಿಗೂ ಸಿನಿಮಾದಲ್ಲಿ ಬಹುದೊಡ್ಡ ಹೆಸರು ಮಾಡಬೇಕೆಂಬ ಆಸೆ ಇರುವುದು ಸಹಜ. ಎಷ್ಟು ಕಲಾವಿದರು ಮೊದಲು ಧಾರಾವಾಹಿಯಲ್ಲಿ ನಟಿಸಿ ತಮ್ಮ ನಟನ ಕಲೆಯ ಮೂಲಕ ಜನರ ಮನದಲ್ಲಿ ಒಂದು ಸ್ಥಾನ ಪಡೆದು ನಂತರ ಸಿನಿಮಾಗಳ ಕಡೆಗೆ ನೋಡುತ್ತಾರೆ. ಹೀಗಿರುವಾಗ ನಟ ತಾಂಡವ್ ತಮ್ಮ ನಟನಾ ಜರ್ನಿ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ತಾಂಡವ್ ರಾಮ್ "ನಾನು ಸತತ ಎಂಟು ವರ್ಷಗಳ ಕಾಲ ಕಿರುತೆರೆ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದೆ. ಆದರೂ ನಾನು ನನ್ನನ್ನು ಸಿನಿಮಾ ಇಂಡಸ್ಟ್ರಿಗೆ ಹೊಸಬನೆಂದು ಪರಿಗಣಿಸುತ್ತೇನೆ. ಏಕೆಂದರೆ, ಧಾರಾವಾಹಿ ನೋಡುವ ಪ್ರೇಕ್ಷಕರೇ ಬೇರೆ ಸಿನಿಮಾ ನೋಡುವ ಪ್ರೇಕ್ಷಕರೇ ಬೇರೆ" ಎಂದು ಹೇಳಿದ್ದಾರೆ.

Actor Tandav Ram talked about the difference between a movie and a serial

ಇದರ ಜೊತೆಗೆ "ಧಾರಾವಾಹಿಯನ್ನು ಪ್ರತಿದಿನ ಮನೆಯಲ್ಲಿ ಕೂತು ನೋಡುವ ಹೆಚ್ಚಿನ ಪ್ರೇಕ್ಷಕರು ಸಿನಿಮಾ ಹಾಲ್ ಗಳಿಗೆ ಬರುವುದೇ ಇಲ್ಲ. ಹಾಗಾಗಿ ಧಾರಾವಾಹಿಯಲ್ಲಿ ಮಾಡಿದಷ್ಟು ಹೆಸರು ಸಿನಿಮಾ ಕ್ಷೇತ್ರಗಳಲ್ಲಿ ಸುಲಭವಾಗಿ ಮಾಡಲು ಸಾಧ್ಯವಿಲ್ಲ" ಎಂದು ಧಾರಾವಾಹಿ ಹಾಗೂ ಸಿನಿಮಾ ಪ್ರೇಕ್ಷಕರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

"ನನ್ನ ಅಬ್ಬಬ್ಬ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಾನು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಹೀರೋ ಆಗಿ ನಾನು ನಟಿಸಿರುವ ಮೊದಲ ಸಿನಿಮಾ. ಆದರೆ, ಈ ನಟನಾ ಕ್ಷೇತ್ರದಲ್ಲಿ ಅದರಲ್ಲೂ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ನಮ್ಮೆಡೆಗೆ ಸೆಳೆಯಲು ಮತ್ತು ಒಳ್ಳೆಯ ನಟ ಎಂದು ಗುರುತಿಸಿಕೊಳ್ಳಲು ಬಹಳಷ್ಟು ವರ್ಷ ಬೇಕಾಗುತ್ತದೆ ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ.

Actor Tandav Ram talked about the difference between a movie and a serial

ನನ್ನ ಗುರಿ, ವಾರೆಂಟ್, ಒಂದು ಕಥೆ ಹೇಳಲಾ, ಅಬ್ಬಬ್ಬ ಸೇರಿದಂತೆ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ತಾಂಡವ್ ರಾಮ್ ಸಕ್ರಿಯವಾಗಿ ತಮ್ಮನ್ನು ತಾವು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು ವೀಕ್ಷಕರ ಮನ ಸೆಳೆದಿರುವ ತಾಂಡವ್ ಅವರಿಗೆ ಇದೀಗ ಬೆಳ್ಳಿತೆರೆಯಲ್ಲೇ ಒಳ್ಳೆಯ ನಟನೆಂದು ಗುರುತಿಸಿಕೊಳ್ಳುವ ಆಸೆ. ಅದೇ ಕಾರಣದಿಂದ ಹೆಚ್ಚೆಚ್ಚು ವಿಭಿನ್ನ ರೋಲ್ ಗಳಿಗಾಗಿ ಕಾಯುತ್ತಿದ್ದಾರೆ.

More from Filmibeat

English summary
Tandav Ram, who started acting through television, wants to be recognized on the big screen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X