»   » ಬಿಗ್ ಬಾಸ್ ಮನೆಯ ಸ್ಪರ್ಧಿ ಬಗ್ಗೆ ಬಿಸಿಬಿಸಿ ಸುದ್ದಿ!

ಬಿಗ್ ಬಾಸ್ ಮನೆಯ ಸ್ಪರ್ಧಿ ಬಗ್ಗೆ ಬಿಸಿಬಿಸಿ ಸುದ್ದಿ!

By: ಯಶಸ್
Subscribe to Filmibeat Kannada

ಜೆಕೆ, ರಾಗಿಣಿ, ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್ ಬಿಗ್ ಬಾಸ್ ಗೆ ಹೋಗ್ತಿಲ್ವಂತೆ! ಚಂದನ್, ಹರಿಪ್ರಿಯಾ ಹೋಗ್ತಿದಾರಂತೆ! ಇನ್ಯಾರು ಹೋಗ್ತಿದಾರೆ ಅನ್ನೋ ಹೊಸ ಪ್ರಶ್ನೆಗೆ ಉತ್ತರ ‘ತರಂಗ ವಿಶ್ವ'..!. ಹೌದು, ಸದ್ಯಕ್ಕೆ ಸುತ್ತುತ್ತಿರುವ ಸುದ್ದಿಯ ಪ್ರಕಾರ ಸ್ಯಾಂಡಲ್ ವುಡ್‍ನಲ್ಲಿ ಕಾಮಿಡಿ ನಟರಾಗಿ ಛಾಪು ಹೊಂದಿರುವ ತರಂಗ ವಿಶ್ವ ಈ ಸಲದ ಬಿಗ್ ಬಾಸ್ ಮನೆ ಸೇರಲಿದ್ದಾರೆ. ಹೀಗಂತ ಸುದ್ದಿ ಜನರ ಬಾಯಲ್ಲಿ ಹರಿದಾಡುತ್ತಿದೆ.

ಕಳೆದ ವಾರ ಬಿಡುಗಡೆಯಾಗಿರುವ ‘ಸೆಕೆಂಡ್ ಹ್ಯಾಂಡ್ ಲವರ್' ಸೇರಿದಂತೆ 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ತರಂಗ ವಿಶ್ವ ಅಭಿನಯಿಸಿದ್ದಾರೆ. ‘ಕುಬೇರಪ್ಪ ಅಂಡ್ ಸನ್ಸ್' ಧಾರಾವಾಹಿಯಲ್ಲಿ ನಟಿಸಿದ್ದಾರೆ. ‘ಐತಲಕಡಿ' ಮತ್ತು ‘ಗುಗ್ಗು ನನ್ಮಕ್ಳು' ಸೀರಿಯಲ್ಲುಗಳನ್ನು ನಿರ್ದೇಶಿಸಿದ್ದಾರೆ. ಸುದ್ದಿ ವಾಹಿನಿಯೊಂದರಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ಉಡೀಸ್' ಎಂಬ ಹಾಸ್ಯ ಕಾರ್ಯಕ್ರಮದ ನಿರೂಪಣೆಯೂ ಇದೇ ವಿಶ್ವ ಅವರದು. [ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ]

Actor Taranga Vishwa as contestant for Bigg Boss 3 Etv Kannada Reality Show

ಸದ್ಯದಲ್ಲೇ ಹೀರೋ ಆಗಿ ಲಾಂಚ್ ಆಗಲಿದ್ದಾರೆ ಎಂದು ಸುದ್ದಿಯಾಗುತ್ತಿರುವ ಕಾಲದಲ್ಲಿ ವಿಶ್ವ ಬಿಗ್ ಬಾಸ್ ಮನೆ ಸೇರಲಿದ್ದಾರೆಯೇ? ಗೊತ್ತಿಲ್ಲ, ಅವರನ್ನೇ ಕೇಳಿದರೆ ಸುದ್ದಿಯ ಸತ್ಯ ಗೊತ್ತಾದೀತು!

ಅದೇನೇ ಇರಲಿ, ಬಿಗ್ ಬಾಸ್ ಶೋದಲ್ಲಿ ಕಾಣಿಸಿಕೊಳ್ಳುವವರು ವಿವಾದಗ್ರಸ್ಥರು ಎಂಬುದು ಎಲ್ಲರ ಊಹೆ. ಆದರೆ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ವಾದ-ವಿವಾದಕ್ಕೆ ಆಹಾರವಾಗದ ನಟ ತರಂಗ ವಿಶ್ವ ಬಿಗ್ ಬಾಸ್ ಸೇರಲಿದ್ದಾರೆ! ಅಂದರೆ ಈ ಬಾರಿಯ ಬಿಗ್ ಬಾಸ್ ಮನೆ ಕೇವಲ ವಿವಾದಾತ್ಮಕ ವ್ಯಕ್ತಿಗಳಿಂದ ತುಂಬಿಲ್ಲ, ವಿಭಿನ್ನತೆಯಿದೆ ಎನ್ನಬಹುದು.

Actor Taranga Vishwa

ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಶೋನಲ್ಲಿ ಯಾವ್ಯಾವ ಸೆಲೆಬ್ರಿಟಿಗಳಿದ್ದಾರೆ ಎಂಬ ಸತ್ಯ ಅರಿವಾಗಲು ಇನ್ನೂ ಸ್ವಲ್ಪ ಸಮಯ ಕಾಯಲೇಬೇಕು. ಸದ್ಯಕ್ಕೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ‘ತರಂಗ ವಿಶ್ವ' ಸೇರಿಕೊಂಡಿದ್ದಾರೆ. ಹೆಸರು ಬದಲಾಗಬಹುದೇ ಅಥವಾ ನಿಜವಾಗಬಹುದೇ? ಉತ್ತರ ಸಿಗುವ ದಿನ ದೂರವೇನಿಲ್ಲ ಬಿಡಿ..!
English summary
'Bigg Boss-3' Kannada will be aired in 'Colours Kannada Channel' and Kichcha Sudeep will host this Season. According to the sources, Actor Taranga Vishwa is likely to enter the reality show house as contestant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada