twitter
    For Quick Alerts
    ALLOW NOTIFICATIONS  
    For Daily Alerts

    'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಕಿರು ತೆರೆಗೆ ಮರಳಿದ ಮಾಜಿ ಸಚಿವೆ ಉಮಾಶ್ರೀ

    |

    ರಾಜಕೀಯದಿಂದ ಮಾಜಿ ಸಚಿವೆ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಇತ್ತೀಚೆಗೆಷ್ಟೇ ಹಿರಿಯ ನಟಿ ಉಮಾಶ್ರೀ ಅಭಿನಯಿಸಿದ 'ರತ್ನನ್ ಪ್ರಪಂಚ' ಒಟಿಟಿಯಲ್ಲಿ ಪ್ರದರ್ಶನ ಕಂಡಿದೆ. ಬಹಳ ದಿನಗಳ ವರೆಗೂ ಉಮಾಶ್ರೀ ರಾಜಕೀಯದಲ್ಲೇ ಸಕ್ರಿಯರಾಗಿದ್ದರು. ಹೀಗಾಗಿ ನಟನೆಯಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಈಗ ಮತ್ತೆ ನಟನೆಯೆಡೆಗೆ ನಿಧಾನವಾಗಿ ಉಮಾಶ್ರೀ ಮರಳುತ್ತಿದ್ದಾರೆ.

    'ರತ್ನನ್ ಪ್ರಪಂಚ' ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಹಿರಿಯ ನಟಿ ಉಮಾಶ್ರೀ ಫುಲ್ ಖುಷಿಯಾಗಿದ್ದಾರೆ. ತಮ್ಮ ಮೂವರು ಹೆಣ್ಣು ಮಕ್ಕಳೊಂದಿಗೆ ಟ್ರ್ಯಾಕ್ಟರ್ ಏರಿ ಊರಲ್ಲಿ ಒಂದು ಸುತ್ತು ಹಾಕಿ ಬಂದಿದ್ದಾರೆ. ಹಾಗಂತ ಇದು ರಿಯಲ್ ಲೈಫ್‌ನಲ್ಲಿ ಅಲ್ಲ. ಉಮಾಶ್ರೀ ನಟಿಸುತ್ತಿರುವ 'ಪುಟ್ಟಕ್ಕನ ಮಕ್ಕಳು' ಹೊಚ್ಚ ಹೊಸ ಧಾರಾವಾಹಿಯ ಗೆಟಪ್ ಇದು.

    ಕಿರುತೆರೆಗೆ ಮರಳಿದ ಮಾಜಿ ಸಚಿವೆ ಉಮಾಶ್ರೀ

    ಕಿರುತೆರೆಗೆ ಮರಳಿದ ಮಾಜಿ ಸಚಿವೆ ಉಮಾಶ್ರೀ

    'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಮೂಲಕ ಮಾಜಿ ಸಚಿವೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಿರುತೆರೆಗೆ ಮರಳಿದ್ದಾರೆ. ಯಾವುದೇ ಪಾತ್ರವನ್ನೂ ತುಂಬಾ ಲೀಲಾಜಾಲಾವಾಗಿ ನಟಿಸಬಲ್ಲ ಕಲಾವಿದೆ ಉಮಾಶ್ರೀ. ಈ ಧಾರಾವಾಹಿಯಲ್ಲೂ ಅಷ್ಟೇ ಲೀಲಾಜಾಲವಾದ ಅಭಿನಯ ವೀಕ್ಷಕರಿಗೆ ಮಜಾ ನೀಡಲಿದೆ. ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಮೂರು ಹೆಣ್ಣು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ.

    ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಯಾವಾಗ?

    ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಯಾವಾಗ?

    ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕರ್ನಾಟಕದ ನಂಬರ್ 1 ವಾಹಿನಿ ಜೀ ಕನ್ನಡ 'ಪುಟ್ಟಕ್ಕನ ಮಕ್ಕಳು' ಎಂಬ ವಿನೂತನ ಮೆಗಾ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಇದು ಡಿಸೆಂಬರ್ 13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಮಂಡ್ಯ ಜಿಲ್ಲೆ ದೇವಿಪುರ ಅನ್ನೋ ಗ್ರಾಮದಲ್ಲಿ ನಡೆಯುವ ಕತೆ ಈ ಧಾರಾವಾಹಿಯ ಹಿನ್ನೆಲೆ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಆಕೆಯನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ ಆಸರೆಯಾಗಿ ನಿಲ್ಲುತ್ತಾರೆ. ಅವರೇ ಆಕೆಯ ಬದುಕು. ಪುಟ್ಟಕ್ಕ ಮೆಸ್ ನಡೆಸಿ ಮಕ್ಕಳನ್ನು ಸಾಕುತ್ತಾಳೆ. ಅದೇ ಮಕ್ಕಳು ತಾಯಿ ಘನತೆಯನ್ನು ಹೇಗೆ ಹೆಚ್ಚಿಸುತ್ತಾರೆ ಎನ್ನುವುದೇ ಧಾರಾವಾಹಿಯ ತಿರುಳು.

    ಈ ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ

    ಈ ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ

    ಪುಟ್ಟಕ್ಕ ಇರುವ ಪಕ್ಕದೂರಿನಲ್ಲಿ ಬಡ್ಡಿ ವಸೂಲಿ ಮಾಡುವ ನಾಯಕ ಕಂಠಿ ಇರುತ್ತಾನೆ. ನಾಯಕನ ಅಮ್ಮನ ಹೆಸರು ಬಡ್ಡಿ ಬಂಗಾರ. ಕಿರುತೆರೆಯಲ್ಲೂ ಈ ಬಡ್ಡಿ ಬಂಗಾರಮ್ಮನನ್ನು ಕಂಡರೆ ಸುತ್ತಲಿನ ಹತ್ತೂರಿನ ಜನಕ್ಕೂ ಭಯ. ಈಗ ಪುಟ್ಟಕ್ಕನ ಮಗಳು ಸ್ನೇಹ ಬಾಳಲ್ಲಿ ಕಂಠಿ ಪ್ರವೇಶಿಸಿದ್ರೆ, ಏನಾಗುತ್ತೆ ಅನ್ನುವುದು ಟ್ವಿಸ್ಟ್. ಹೀಗೆ ಟ್ವಿಸ್ಟ್ ಅಂಡ್ ಟರ್ನ್ ಹೊಂದಿರುವ ಧಾರಾವಾಹಿಯಲ್ಲಿ ಉಮಾಶ್ರೀ ಜೊತೆ ದ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದ ಹೊಸಪೇಟೆ, ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್, ಹಾಗೇ ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ನಟಿಸಿದ್ದಾರೆ.

    'ಜೊತೆ ಜೊತೆಯಲಿ' ಆರೂರು ಜಗದೀಶ್ ನಿರ್ದೇಶನ

    'ಜೊತೆ ಜೊತೆಯಲಿ' ಆರೂರು ಜಗದೀಶ್ ನಿರ್ದೇಶನ

    'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಟೈಟಲ್ ಸಾಂಗ್ ಈಗಾಗಲೇ ಜನಮೆಚ್ಚುಗೆ ಗಳಿಸಿದೆ. ಹರ್ಷ ಪ್ರಿಯ ಸಾಹಿತ್ಯಕ್ಕೆ, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಪಂಚಮ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು 'ಜೊತೆ ಜೊತೆಯಲಿ' ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಒಟ್ನಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕನ್ನಡಿಗರ ಮನೆಗೆ ತೆರಳಿ ಮನರಂಜನೆ ನೀಡಲು ಸಜ್ಜಾಗಿದೆ.

    English summary
    Actor Umashree back to tv serial Puttakkana Makkalu in Zee Kannada. After Rathnan Prapancha she will be seen in zee Kannada serial Puttakkana Makkalu.
    Wednesday, December 8, 2021, 8:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X