ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿರೋ ಈ ಹೊಸ ಪ್ರತಿಭೆ ಯಾರು ಗೊತ್ತೇ?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಟಿಫನ್ ರೂಮ್' ಧಾರಾವಾಹಿಯಲ್ಲಿ ಸ್ಕಂದ ಎಂಬ ಪಾತ್ರದಲ್ಲಿ ನಟ ವಚನ್ ಹೊಸಮಠ ಕಾಣಿಸಿಕೊಳ್ಳುತ್ತಿದ್ದಾರೆ. 'ಲಕ್ಷ್ಮಿ ಟಿಫನ್ ರೂಮ್' ಇತ್ತೀಚೆಗಷ್ಟೇ ಶುರುವಾದ ಧಾರಾವಾಹಿ ಆದರೂ ಒಂದು ತಿಂಗಳಿನಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದಿದೆ.

ಇದರಲ್ಲಿ 7ನೇ ಕ್ಲಾಸ್ ಪಾಸ್ ಆಗಿರುವ ಸ್ಕಂದ ಎಂಬ ಮುಗ್ಧ ಹುಡುಗನ ರೋಲ್ ಮಾಡುತ್ತಿರುವ ನಟ ವಚನ್ ಹೊಸಮಠ ಅವರು ಮೊದಲ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Actor Vachan Hosamath has entered the television with the dream of becoming a movie hero

ವಚನ್‌ಗೆ ಚಿಕ್ಕಂದಿನಿಂದಲೂ ನಟನಾಗಬೇಕು ಎಂಬ ಆಸೆ ಇತ್ತಂತೆ. ಅವರ ತಂದೆ ತಾಯಿಯು ಅಷ್ಟೇ, ಅವರ ಯಾವ ಆಸೆ ಕನಸುಗಳಿಗೂ ಬೇಡ ಎನ್ನಲಿಲ್ಲ. ಆದರೆ, ಮೊದಲು ಓದು ಮುಗಿಸು ನಂತರ ಏನು ಬೇಕಾದರೂ ಮಾಡುವ ಎಂಬ ಸ್ವಾತಂತ್ರ್ಯವನ್ನು ಕೊಟ್ಟರು. ಈ ವಿಚಾರವಾಗಿ ವಚನ್ ಅವರು ಹೆತ್ತವರಿಗೆ ಚಿರ ಋಣಿಯಾಗಿದ್ದಾರೆ.

ವಚನ್ ಹೊಸಮಠ್ ಅವರ ಮುಖ್ಯ ಗುರಿ ಇರುವುದು ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದು. ಮೊದಲ ಅವಕಾಶದಲ್ಲೇ ವಚನ್ ಅವರಿಗೆ ಹೀರೋ ಪಾತ್ರ ಕೊಟ್ಟಿರುವ ನಿರ್ಮಾಣ ಸಂಸ್ಥೆ ಬಗ್ಗೆ ಅವರಿಗೆ ಹೆಮ್ಮೆಯಿದೆ.

ಇಂಜಿನಿಯರಿಂಗ್ ಮುಗಿಸಿಕೊಂಡಿರುವ ನಟ ವಚನ್ ಹೊಸಮಠ ವೃತ್ತಿಯಾಗಿ ಆಯ್ಕೆ ಮಾಡಿರುವುದು ನಟನೆಯನ್ನು‌. ಇದೀಗ 'ಲಕ್ಷ್ಮಿ ಟಿಫನ್ ರೂಮ್'ನಲ್ಲಿ ಚೆನ್ನಾಗಿ ಮಿಂಚುತ್ತಿರುವ ಇವರು ಮುಂದೆ ಸಿನಿಮಾಗೆ ಹೋಗಬೇಕೆಂಬ ದೊಡ್ಡ ಕನಸು ಹೊತ್ತಿದ್ದಾರೆ. ನೋಡಲು ಹ್ಯಾಂಡ್ಸಮ್ ಆಗಿರುವ ಇವರಿಗೆ ಈಗಾಗಲೇ ತೆಲುಗು ಚಿತ್ರರಂಗದಿಂದ ಬಹಳಷ್ಟು ಆಫರ್‌ಗಳು ಬರುತ್ತಿವೆಯಂತೆ.

Actor Vachan Hosamath has entered the television with the dream of becoming a movie hero

ಭಾಷೆ ಬಾರದಿದ್ದರೂ ಪರವಾಗಿಲ್ಲ ಬನ್ನಿ ಎಂದು ಕರೆಯುತ್ತಿದ್ದಾರಂತೆ ಟಾಲಿವುಡ್‌ ನಿರ್ದೇಶಕರು. ಧಾರಾವಾಹಿ ಆರಂಭವಾಗಿ ಒಂದೇ ತಿಂಗಳಿಗೆ ಈ ರೀತಿ ದೊಡ್ಡ ದೊಡ್ಡ ಆಫರ್ ಬರುತ್ತಿರುವುದು ಸಂಭ್ರಮದ ವಿಚಾರವೇ ಆದರೂ ಧಾರಾವಾಹಿಯನ್ನು ಈ ರೀತಿ ಅರ್ಧಕ್ಕೆ ನಿಲ್ಲಿಸಿ ಹೋಗಲು ನಟ ವಚನ್‌ಗೆ ಮನಸ್ಸಿಲ್ಲ.

ಕನ್ನಡ ಹಿರಿತೆರೆಯ ರಾಕಿಂಗ್ ಸ್ಟಾರ್ ಯಶ್ ಅವರಂತೆ ಬಹಳ ಕ್ಲಿಯರ್ ಗೋಲ್ ಇಟ್ಟುಕೊಂಡಿರುವ ನಟ ವಚನ್ ಹಿರೇಮಠ ಅವರಿಗೆ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಎಂದರೆ ಬಹಳ ಅಚ್ಚುಮೆಚ್ಚು.

ಚಿಕ್ಕಂದಿನಲ್ಲಿ ಪ್ರತಿಯೊಬ್ಬರು ಹತ್ತಾರು ಕನಸುಗಳನ್ನು ಕಾಣುತ್ತಿರುತ್ತಾರೆ. ದೊಡ್ಡವರಾದಂತೆ ಕನಸುಗಳು ಆಗಾಗ ಬದಲಾಗುತ್ತದೆ. ಆದರೆ ನಟ ವಚನ್ ಹೊಸ ಮಟ್ಟಿಗೆ ಚಿಕ್ಕಂದಿನಿಂದಲೂ ತಮ್ಮ ಕನಸುಗಳ ಬಗ್ಗೆ ಹೆಚ್ಚಿನ ಕ್ಲಾರಿಟಿ ಇತ್ತು ಎಂದು ಕಾಣುತ್ತದೆ. ಹಾಗಾಗಿಯೇ ಇಂಜಿನಿಯರಿಂಗ್ ಮುಗಿಸಿದ ಇವರು, ನವರಸ ನಟನಾ ಶಾಲೆಯಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.

ಇನ್ನು ವಚನ್ ಅವರಿಗೆ ರಂಗಭೂಮಿಯ ನಂಟು ಚೆನ್ನಾಗಿಯೇ ಇದೆ. ಮೂಲತಃ ದಾವಣಗೆರೆ ಅವರಾದ ಇವರು 'ಮಿಸ್ಟರ್ ದಾವಣಗೆರೆ' ಎಂಬ ಬಿರುದು ಪಡೆದುಕೊಂಡಿದ್ದಾರೆ. ಮಾಡೆಲಿಂಗ್ ಕೂಡ ಮಾಡುವ ವಚನ್ ಹಿರೇಮಠ ತಮ್ಮೆಡೆಗೆ ಬರುತ್ತಿರುವ ದೊಡ್ಡ ದೊಡ್ಡ ಆಫರ್‌ಗಳ ವಿಚಾರವಾಗಿ ಕೂಲಂಕುಶವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಜೀವನ ಕೊಡುತ್ತಿರುವ ಅವಕಾಶಗಳಿಗೆ ಚಿರಋಣಿ ಎಂದಿದ್ದಾರೆ.

More from Filmibeat

English summary
Lakshmi Tiffin Room Vachan has a childhood dream of becoming an actor:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X