5ನೇ ವಿವಾಹ ವಾರ್ಷಿಕೋತ್ಸವದಂದು 2ನೇ ಮಗುವಿನ ಫೋಟೋ ರಿವೀಲ್ ಮಾಡಿದ ನಟ ವಿಜಯ್ ಸೂರ್ಯ!

By ಅನಿತಾ ಬನಾರಿ

ಗುಳಿಕೆನ್ನೆಯ ನಟ ವಿಜಯ್ ಸೂರ್ಯ ಯಾರಿಗೆ ಗೊತ್ತಿಲ್ಲ ಹೇಳಿ?! 'ಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದ ಈ ಗುಳಿಕೆನ್ನೆ ನಟ ವಿಜಯ್ ಸೂರ್ಯ ಅವರು ಸದ್ಯಕ್ಕೆ ಸಂಗಮ್ ಪಾತ್ರದಲ್ಲಿ ಬ್ಯುಸಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯ ನಾಯಕ ಸಂಗಮ್ ಆಗಿ ವಿಜಯ್ ಸೂರ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಫಾಲೋವರ್ಸ್ ಇರುವ ಇವರು ಕನ್ನಡ ಧಾರಾವಾಹಿ ವೀಕ್ಷಕರ ಮನೆ ಮನ ಗೆದ್ದ ನಟ. ತಮ್ಮಂತೆ ಗುಳಿಕೆನ್ನೆ ಇರುವ ಚೈತ್ರಾ ಶ್ರೀನಿವಾಸ್ ಎಂಬುವವರನ್ನು ಮದುವೆಯಾಗಿ ಐದು ವರ್ಷಗಳಾಗಿದ್ದು, ಪತ್ನಿಗೆ ಆನಿವರ್ಸರಿ ವಿಶ್ ಹೇಳಿದ್ದಾರೆ ನಟ ವಿಜಯ್ ಸೂರ್ಯ.

Actor Vijay Suriya has revealed the photo of his second child!

ಹೌದು, ನಿನ್ನೆ (ಫೆಬ್ರವರಿ 15) ವಿಜಯ್ ಸೂರ್ಯ ಅವರ ಆ್ಯನಿವರ್ಸರಿ. ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಈ ಜೋಡಿಯ ದಾಂಪತ್ಯ ಜೀವನಕ್ಕೆ ಇದೀಗ ಐದರ ಹರೆಯ. 'ಹ್ಯಾಪಿ ಆನಿವರ್ಸರಿ ಬಾಬಾ' ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟ ವಿಜಯ್ ಸೂರ್ಯ ಹಾಕಿಕೊಂಡಿದ್ದಾರೆ. ಇದರ ಜೊತೆಗೆ ಒಂದು ಫೋಟೋವನ್ನು ಕೂಡಾ ಅವರು ಶೇರ್ ಮಾಡಿದ್ದು, ಆ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ನೀಡಿದ್ದಾರೆ.

ವಿಜಯ್ ಸೂರ್ಯ ಅವರು ತಮ್ಮ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ವಿಜಯ್ ಸೂರ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಮೊದಲನೇ ಮಗ ಸೋಹನ್ ಸೂರ್ಯಗೂ ಗುಳಿಕೆನ್ನೆ ಇರುವುದು ಇವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನು ಎರಡನೇ ಮಗು ಕಳೆದ ಜೂನ್‌ ತಿಂಗಳಲ್ಲಿ ಹುಟ್ಟಿದು, ಇದುವರೆಗೂ ಆ ಮಗುವಿನ ಫೋಟೋ ಶೇರ್ ಮಾಡಿರಲಿಲ್ಲ.

ಈಗ ತಮ್ಮ ಆನಿವರ್ಸರಿ ದಿನ ಅವರ ಕುಟುಂಬದ ಫೋಟೋ ಹಾಕಿಕೊಳ್ಳುವ ಮೂಲಕ ಎರಡನೇ ಮಗು ಕಾರ್ತಿಕೇಯ ಸೂರ್ಯನ ಫೋಟೋ ರಿವೀಲ್ ಮಾಡಿದ್ದಾರೆ. ಈ ಮೂಲಕ ಬಹಳಷ್ಟು ದಿನಗಳಿಂದ ಈ ವಿಚಾರವಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ, ಫಾಲೋವರ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ. ವಿಜಯ್ ಸೂರ್ಯ ಹಂಚಿಕೊಂಡಿರುವ ಈ ಫೋಟೋಗೆ ಕಾಂಪ್ಲಿಮೆಂಟ್‌ಗಳ ಸುರಿಮಳೆಯೇ ಸುರಿದಿದೆ.

ಅಂದ ಹಾಗೇ 'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಎಂದೇ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು 'ಉತ್ತರಾಯಣ' ಧಾರಾವಾಹಿಯ ಮೂಲಕ. ಮುಂದೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿಯೂ ನಾಯಕ ಸಿದ್ದಾರ್ಥ್ ಆಗಿ ಮೋಡಿ ಮಾಡಿದ ಈ ಗುಳಿಕೆನ್ನೆ ಹುಡುಗ ಬರೋಬ್ಬರಿ ಆರು ವರ್ಷಗಳ ಕಾಲ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು.

Actor Vijay Suriya has revealed the photo of his second child!

ಸ್ಟಾರ್ ಸುವರ್ಣ ವಾಹಿನಿಯ 'ಪ್ರೇಮಲೋಕ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸಿದ್ದ ವಿಜಯ್ ಸೂರ್ಯ ಮುಂದೆ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಆಗಿ ವಿಜಯ್ ಸೂರ್ಯ ಕಾಣಿಸಿಕೊಂಡರು . ಮುಂದೆ ತೆಲುಗಿನ 'ಕೃಷ್ಣಮ್ಮ ಕಲಿಪಿಂಡಿ ಇದ್ದರಿನಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡ ಈತ ಅಂಧನ ಪಾತ್ರಕ್ಕೆ ಜೀವ ತುಂಬಿದ್ದರು.

ಕಲರ್ಸ್ ಕನ್ನಡ ವಾಹಿನಿಯ 'ತಕಧಿಮಿತಾ ಡ್ಯಾನ್ಸಿಂಗ್ ಸ್ಟಾರ್'ನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈ ಗುಳಿಕೆನ್ನೆಯ ಹುಡುಗ ನಾಲ್ಕು ವಾರಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದರು. ಮುಂದೆ ನಾಲ್ಕನೇ ವಾರಕ್ಕೆ ಸ್ಪರ್ಧೆಯಿಂದ ಹೊರಬಿದ್ದರು. 'ಕಾಮಿಡಿ ಟಾಕೀಸ್' ಎನ್ನುವ ಹಾಸ್ಯ ಕಾರ್ಯಕ್ರಮದ ನಿರೂಪಕರಾಗಿಯೂ ಗಮನ ಸೆಳೆದಿದ್ದ ಡಿಂಪಲ್ ಕೆನ್ನೆಯ ಹುಡುಗ ಸಿನಿಮಾದಲ್ಲೂ ನಟಿಸಿದ್ದಾರೆ.

'ಕ್ರೇಜಿಲೋಕ' ಸಿನಿಮಾದಲ್ಲಿ ಅಭಯ್ ಆಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಿದ ವಿಜಯ್ ಸೂರ್ಯ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. 'ಇಷ್ಟಕಾಮ್ಯ', ' ಸ', 'ಕದ್ದುಮುಚ್ಚಿ',' ಗಾಳಿಪಟ 2' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇವರು 'ವೀರಪುತ್ರ' ಸಿನಿಮಾದಲ್ಲಿಯೂ ನಟಿಸಿದ್ದು ಅದು ತೆರೆ ಕಾಣಬೇಕಿದೆ.

More from Filmibeat

English summary
Vijay Suriya couple celebrated their fifth year wedding anniversary.Vijay Suriya shared a photo of his second son for the first time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X