ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ

Recommended Video

ಹೊಸ ಪ್ರಾಜೆಕ್ಟ್ ಶುರು ಮಾಡಿದ ವಿಜಯ್ ಸೂರ್ಯ | FILMIBEAT KANNADA

ಕಿರುತೆರೆಯ ಖ್ಯಾತ ನಟ ವಿಜಯ್ ಸೂರ್ಯ ಇತ್ತೀಚಿಗಷ್ಟೆ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬರುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ರು. 'ಅಗ್ನಿಸಾಕ್ಷಿ'ಯಲ್ಲಿ ಸಿದ್ದಾರ್ಥ್ ಪಾತ್ರದ ಮೂಲಕ ಮನೆಮಾತಾಗಿದ್ದ ವಿಜಯ್ ಇನ್ಮುಂದೆ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು, ಅದರಲ್ಲೂ ಮಹಿಳಾ ಅಭಿಮಾನಿಗಳಿಗೆ ಬಾರಿ ನಿರಾಸೆಯಾಗಿತ್ತು.

ವಿಜಯ್ ಇನ್ಮುಂದೆ ಕಾಣಸಿಗುವುದಿಲ್ಲ ಎನ್ನುವ ಬೇಸರ ಒಂದೆಡೆ ಆದ್ರೆ, ಇನ್ಮುಂದೆ ವಿಜಯ್ ಏನ್ಮಾಡ್ತಾರೆ ಎನ್ನುವ ಪ್ರಶ್ನೆ ಕೂಡ ಕಾಡುತ್ತಿತ್ತು. ಆದ್ರೀಗ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು, ವಿಜಯ್ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಹಾಗಂತ ಮತ್ತೆ 'ಅಗ್ನಿಸಾಕ್ಷಿ'ಗೆ ವಾಪಸ್ ಆಗ್ತಾರೆ ಅಂತ ಅಂದ್ಕೋಬೇಡಿ. ವಿಜಯ್ ಹೊಸ ಧಾರಾವಾಹಿಯ ಮೂಲಕ ಮತ್ತೆ ಪ್ರತೀದಿನ ಅಭಿಮಾನಿಗಳ ಮುಂದೆ ಹಾಜರಾಗುತ್ತಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೊನೆಕೊಂಡಿದೆ. ಆಸ್ಟ್ರೇಲಿಯಾ ಹೋಗುವುದಾಗಿ ಹೇಳಿ ವಿಜಯ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಆದ್ರೀಗ ವಿಭಿನ್ನ ಧಾರಾವಾಹಿಯ ಮೂಲಕ ಬರ್ತಿದ್ದಾರೆ. ಆದ್ರೆ ಚಾನೆಲ್ ಮಾತ್ರ ಬದಲಾಗಿದೆ. ಹಾಗಾದ್ರೆ ಯಾವ ಧಾರಾವಾಹಿ? ವಿಜಯ್ ಪಾತ್ರ ಹೇಗಿರಲಿದೆ? ಮುಂದೆ ಓದಿ..

'ಪ್ರೇಮಲೋಕ' ಧಾರಾವಾಹಿಯಲ್ಲಿ ವಿಜಯ್ ಸೂರ್ಯ

'ಪ್ರೇಮಲೋಕ' ಧಾರಾವಾಹಿಯಲ್ಲಿ ವಿಜಯ್ ಸೂರ್ಯ

ವಿಜಯ್ ಸೂರ್ಯ ಇನ್ಮುಂದೆ 'ಪ್ರೇಮಲೋಕ' ಎನ್ನುವ ಹೊಸ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಲವರ್ ಬಾಯ್ ಆಗಿ ಕಿರುತೆರೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆದ್ರೆ ಬೇರೆ ಚಾನೆಲ್ ನಲ್ಲಿ 'ಪ್ರೇಮಲೋಕ' ಧಾರಾವಾಹಿ ಪ್ರಸಾರವಾಗಲಿದೆ. ಸಾಕಷ್ಟು ಧಾರಾವಾಹಿಗಳಿಗೆ ಆಫರ್ ಬಂದರು ವಿಜಯ್ ಇದೆ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಣ ವಿಜಯ್ ಗೆ ತುಂಬಾ ಇಷ್ಟವಾಗಿದೆಯಂತೆ.

ಹಿಂದಿ ಧಾರಾವಾಹಿಯ ರೀಮೇಕ್

ಹಿಂದಿ ಧಾರಾವಾಹಿಯ ರೀಮೇಕ್

'ಪ್ರೇಮಲೋಕ' ಹಿಂದಿ ಧಾರಾವಾಹಿಯ ರೀಮೇಕ್. ಹಿಂದಿಯ ಜನಪ್ರಿಯ ಧಾರಾವಾಹಿಯಾದ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ರೀಮೇಕ್. ಈ ಧಾರಾವಾಹಿಯ ಅನುರಾಗ್ ಪಾತ್ರ ತುಂಬನೆ ಖ್ಯಾತಿಗಳಿಸಿದೆ. ಅನುರಾಗ್ ಪಾತ್ರದಲ್ಲಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗೆ ಸಹಿ ಮಾಡಿದ ನಂತರ ಹಿಂದಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ಒಂದಿಷ್ಟು ಭಾಗಗಳನ್ನು ವೀಕ್ಷಿಸಿದ್ದಾರಂತೆ.

ಅಗ್ನಿಸಾಕ್ಷಿ ಧಾರಾವಾಹಿಯ ನಿರ್ದೇಶಕ

ಅಗ್ನಿಸಾಕ್ಷಿ ಧಾರಾವಾಹಿಯ ನಿರ್ದೇಶಕ

ವಿಶೇಷ ಅಂದ್ರೆ ಈ ಧಾರಾವಾಹಿಗೆ 'ಅಗ್ನಿಸಾಕ್ಷಿ' ಧಾರಾವಾಹಿಯ ನಿರ್ದೇಶಕ ಮೈಸೂರ್ ಮಂಜು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ 30 ಎಪಿಸೋಡ್ ಗಳಿಗೆ ಮೈಸೂರ್ ಮಂಜು ನಿರ್ದೇಶ ಮಾಡಲಿದ್ದಾರಂತೆ. ವಿಶೇಷ ಅಂದ್ರೆ ಈಗಾಗಲೆ ಪ್ರೋಮೊ ಶೂಟ್ ಆಗಿದೆಯಂತೆ. ಸಧ್ಯದಲ್ಲೇ ಪ್ರೋಮೊ ರಿಲೀಸ್ ಆಗಲಿದ್ದು, ಧಾರಾವಾಹಿ ಕೂಡ ಸಧ್ಯದಲ್ಲೇ ಪ್ರಸಾರವಾಗಲಿದೆ.

ಸಿನಿಮಾಗಳಲ್ಲೂ ವಿಜಯ್ ಮಿಂಚಿಂಗ್

ಸಿನಿಮಾಗಳಲ್ಲೂ ವಿಜಯ್ ಮಿಂಚಿಂಗ್

ವಿಜಯ್ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತ ಬರೋಬ್ಬರಿ ಐದು ವರ್ಷಗಳಾಗಿತ್ತು. ಐದು ವರ್ಷದ ಅಗ್ರಿಮೆಂಟ್ ಮುಗಿಸಿ ಧಾರಾವಾಹಿಯಿಂದ ಹೊರಬಂದ ವಿಜಯ್ ಏನ್ಮಾಡ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಆದ್ರೀಗ ಅದಕ್ಕೆ ಉತ್ತರ ಸಿಕ್ಕಿದೆ. ವಿಜಯ್ ಕೇವಲ ಧಾರಾವಾಹಿಯಲ್ಲಿ ಮಾತ್ರ ಕಾಣಿಸಿಕೊಳ್ಳದೆ ಸಿನಿಮಾಗಳಲ್ಲು ಮಿಂಚುತ್ತಿದ್ದಾರೆ. ಸದ್ಯ 'ಲಕ್ನೋ ಟು ಮುಂಬೈ' ಚಿತ್ರದಲ್ಲಿ ವಿಜಯ್ ಅಭಿನಯಿಸುತ್ತಿದ್ದಾರೆ.

More from Filmibeat

English summary
Agnisakshi fame actor vijay surya after exit Agnisakshi serial already signed new project. Vijay new serial title 'Premaloka' it will telecast shortly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X