twitter
    For Quick Alerts
    ALLOW NOTIFICATIONS  
    For Daily Alerts

    ಶ್ಯಾಮನಾಗಿ ಮತ್ತೆ ಬಂದ ಪಲ್ಲಿ ವಿಕ್ರಂ ಸೂರಿಯ ಜರ್ನಿ

    By ಪ್ರಿಯಾ ದೊರೆ
    |

    'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದವರು ಕೂಡ ಮತ್ತೆ ಬಣ್ಣ ಹಚ್ಚಿದ್ದಾರೆ. ಯಾಕೆಂದರೆ, 'ಮಾಯಾಮೃಗ' ಧಾರಾವಾಹಿಯಲ್ಲಿ ಇದ್ದ ಪಾತ್ರಗಳ ಜೊತೆಗೆ ಮುಂದಿನ ಪೀಳಿಗೆಯನ್ನೂ ಈ ಧಾರಾವಾಹಿಯ ಕಥೆಯಲ್ಲಿ ಹೊಂದಿಕೊಂಡಿರುವುದು.

    ಮಂಜು ಭಾಷಿಣಿ, ವೀಣಾ ಸುಂದರ್‌, ಮಾಳವಿಕಾ, ಲಕ್ಷ್ಮೀ ಚಂದ್ರಶೇಖರ್‌, ಜಯಶ್ರೀ, ವಿಕ್ರಮ್‌ ಸೂರಿ, ಎಂಡಿ ಪಲ್ಲವಿ, ನಾಗೇಂದ್ರ ಷಾ ಸೇರಿದಂತೆ ಹಲವು ಪಾತ್ರಗಳು ತಮ್ಮ ಜರ್ನಿಯನ್ನು 'ಮತ್ತೆ ಮಾಯಾಮೃಗ'ದ ಮೂಲಕ ಮುಂದುವರಿಸಿದ್ದಾರೆ.

    ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!

    ಇದೀಗ ನಾವು ಹೇಳುವುದಕ್ಕೆ ಹೊರಟಿರುವುದು 'ಮತ್ತೆ ಮಾಯಾಮೃಗ'ದಲ್ಲಿ ಪುನಃ ಬಣ್ಣ ಹಚ್ಚಿರುವ ವಿಕ್ರಮ್‌ ಸೂರಿ ಅವರ ಬಗ್ಗೆ. 'ಮಾಯಾಮೃಗ' ಧಾರಾವಾಹಿಯಲ್ಲಿ ವಿಕ್ರಮ್‌ ಸೂರಿ ಅವರು ಶ್ಯಾಮ್‌ ಪಾತ್ರವನ್ನು ನಿಭಾಯಿಸಿದ್ದರು. ಈಗ ಅದನ್ನೇ ಮುಂದುವರಿಸಿದ್ದಾರೆ.

    ಶಾಸ್ತ್ರಿಗಳ ಮಗ ಶ್ಯಾಮ್‌ ಪಾತ್ರ

    ಶಾಸ್ತ್ರಿಗಳ ಮಗ ಶ್ಯಾಮ್‌ ಪಾತ್ರ

    'ಮಾಯಾಮೃಗ' ಧಾರಾವಾಹಿಯಲ್ಲಿ ಶಾಸ್ತ್ರಿಗಳ ಮಗನ ಪಾತ್ರದಲ್ಲಿ ವಿಕ್ರಮ್‌ ಸೂರಿ ನಟಿಸಿದ್ದಾರೆ. ತಂದೆಯ ವಿರುದ್ಧ ನಡೆದ ಶ್ಯಾಮ್‌ ಪ್ರೀತಿಸಿ ಮದುವೆಯಾಗಿದ್ದ. ಹಾಗಾಗಿ ಮನೆಯಿಂದ ದೂರ ಉಳಿದಿದ್ದ. ಈಗ ಮತ್ತೆ ಮಾಯಾಮೃಗ ಶುರುವಾಗಿದ್ದು, ಇದರಲ್ಲಿ ಶ್ಯಾಮ್‌ ತನ್ನ ತಂದೆ ತಾಯಿಯನ್ನು ಜೊತೆಗೆ ಬದುಕಲು ಬಯಸಿದ್ದಾನೆ. ಆದರೆ, ಶಾಸ್ತ್ರಿಗಳು ತೀರ್ಥಯಾತ್ರೆಗೆ ಹೊರಟಿದ್ದು, ಈಗ ಶ್ಯಾಮ್‌ ತಾಯಿ ಕಮಲಮ್ಮನ ಜವಾಬ್ದಾರಿ ತನ್ನ ಹೆಗಲ ಮೇಲೆ ಬಿದ್ದಿದೆ.

    ಹಲವು ಚಿತ್ರಗಳಲ್ಲಿ ನಟನೆ

    ಹಲವು ಚಿತ್ರಗಳಲ್ಲಿ ನಟನೆ

    ಬಾಲನಟನಾಗಿ ಬಣ್ಣದ ಲೋಕಕ್ಕೆ ಬಂದ ವಿಕ್ರಮ್‌ ಸೂರಿ, 'ಲವ-ಕುಶ' ಚಿತ್ರದಲ್ಲಿ ನಟಿಸಿದ್ದರು. ವಿಕ್ರಮ್ ಮೂಲತಃ ಕಲಾವಿದರ ಕುಟುಂಬದ ಹುಡುಗ. ಅವರ ತಂದೆ ಸಂಜಯ್ ಸೂರಿ ಪ್ರತಿಷ್ಠಿತ ಗುಬ್ಬಿ ಕಂಪನಿ ಕಲಾವಿದರಾಗಿದ್ದರು. ಪ್ರಕಾಶ್ ರೈ ಅಭಿನಯಿಸಿದ್ದ 'ಬಿಸಿಲು ಕುದುರೆ' ಧಾರಾವಾಹಿಯಲ್ಲಿ ವಿಕ್ರಮ್ ಬಾಲ ಕಲಾವಿದನಾಗಿ ಅಭಿನಯಿಸಿದ್ದರು. ಕೊಟ್ರೇಶಿ ಕನಸು, ಚಿನ್ನಾರಿ ಮುತ್ತ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬಳಿಕ 2008 ಮತ್ತೆ ಬಂದ ಗಣೇಶ, 2009 www.ಭಯ.ಕಾಂ, 2011ಚಿನ್ನದ ತಾಳಿ, 2011 ಕೂರ್ಮಾವತಾರಾ, 2012‌ ಜೀವನ ಜೋಕ್-ಆಲಿ, 2016 ಝೂಮ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

    ಸಹ ಕಲಾವಿದೆಯನ್ನೇ ವರಿಸಿದ ವಿಕ್ರಮ್

    ಸಹ ಕಲಾವಿದೆಯನ್ನೇ ವರಿಸಿದ ವಿಕ್ರಮ್

    ಇನ್ನು ಈ ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ 'ಪಾಪ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ' ಕಾಮಿಡಿ ಸೀರಿಯಲ್ ಮೂಲಕ ಮನೆಮಾತಾದ ನಟ ವಿಕ್ರಮ್ ಸೂರಿ. 'ಸಿಲ್ಲಿ ಲಲ್ಲಿ' ಧಾರಾವಾಹಿಯ ಪಲ್ಲಿ ಪಾತ್ರ ಬಹಳ ಜನಪ್ರಿಯವಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ನಮಿತಾ ರಾವ್ ಬಳಿಕ ಸೂರಿ ಅವರ ಬಾಳ ಸಂಗಾತಿಯಾದರು. ವಿಕ್ರಮ್ ಅವರ ಬಾಳ ಸಂಗಾತಿ ನಮಿತಾ ಅವರೂ ಅಷ್ಟೇ ಕಿರುತೆರೆಯಲ್ಲಿ ಚಿರಪರಿಚಿತರು. 'ಗೋಧೂಳಿ', 'ಬಿದಿಗೆ ಚಂದ್ರಮ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಸಿಲ್ಲಿ ಲಲ್ಲಿ' ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಇವರಿಬ್ಬರದು ಅನುರೂಪ ದಾಂಪತ್ಯ. 2017 ರಲ್ಲಿ ವಿಕ್ರಮ್‌ ಸೂರಿ ಅವರು ನಿರ್ದೇಶನಕ್ಕೆ ಕೈ ಹಾಕಿದರು.

    ನಿರ್ದೇಶನಕ್ಕೂ ಇಳಿದ ವಿಕ್ರಮ್

    ನಿರ್ದೇಶನಕ್ಕೂ ಇಳಿದ ವಿಕ್ರಮ್

    2017 'ನಾವು ಎಳೆಯರು ಗೆಳೆಯರು' ಎಂಬ ಸಿನಿಮಾನ್ನು ವಿಕ್ರಮ್‌ ಸೂರಿ ನಿರ್ದೇಶನ ಮಾಡಿದರು. ಬಳಿಕ 2020ರಲ್ಲಿ 'ಚೌಕಾಬಾರ' ನಿರ್ದೇಶಿಸಿದರು. ಈ ಚಿತ್ರದಲ್ಲಿ ವಿಕ್ರಮ್‌ ಸೂರಿ ಅವರ ಪತ್ನಿ ನಮಿತಾ ರಾವ್‌ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಶೂಟಿಂಗ್‌ ಮುಗಿದಿದ್ದು, ಕಾರಣಾಂತರಗಳಿಂದ ರಿಲೀಸ್‌ ಆಗುವುದು ತಡವಾಗುತ್ತಿದೆ. ದಂಪತಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಸದ್ಯ ವಿಕ್ರಮ್‌ ಸೂರಿ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

    English summary
    Kannada Smalla screen Actor Vikram Soori Personal life and other details. Now He is woking in Mathe Mayamruga Serial. Know more.
    Saturday, January 28, 2023, 15:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X