'ಡೆವಿಲ್' ಸಿನಿಮಾದ ಚಿತ್ರೀಕರಣ ಶುರುವಾದರೆ ಮಾತ್ರ ಹಬ್ಬನೇ" ಎಂದ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ

By ಅನಿತಾ ಬನಾರಿ

ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಚಿತ್ರೀಕರಣ ನಿಂತಿದೆ. ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಇದೀಗ ನಟ ದರ್ಶನ್ ಅರೆಸ್ಟ್ ಆಗಿದ್ದು, ಅವರ ಎಲ್ಲ ಸಿನಿಮಾಗಳ ಚಿತ್ರೀಕರಣ ನಿಂತಿದೆ. ಅದರಲ್ಲಿ 'ಡೆವಿಲ್' ಸಿನಿಮಾ ಕೂಡ ಒಂದು.

ಅಂದಹಾಗೆ ಮಿಲನ ಪ್ರಕಾಶ್ ಅವರು ನಿರ್ದೇಶಿಸುತ್ತಿದ್ದ ಚಿತ್ರಕ್ಕೆ ನಟ ದರ್ಶನ್ ಹೀರೋ. ಆದರೆ, ನಟ ವಿನಯ್ ಗೌಡ ವಿಲನ್ ಪಾತ್ರ ನಿಭಾಯಿಸುತ್ತಿದ್ದರು. ಅಷ್ಟರಲ್ಲಿ ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ ಕೂಡ ಭಾಗಿಯಾಗಿದ್ದಾರೆಂದು ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು.

Bigg boss vinay gowda about devila movie

ರೇಣುಕಾ ಸ್ವಾಮಿ ಪ್ರಕರಣ ದಾಖಲಾಗುತ್ತಿದ್ದಂತೆ ಮೈಸೂರಿನಲ್ಲಿದ್ದ ದರ್ಶನ್ ಅವರನ್ನು ಅರೆಸ್ಟ್ ಮಾಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಡೆವಿಲ್ ಚಿತ್ರದ ಚಿತ್ರಿಕರಣ ನಿಂತಿದ್ದು ಈ ಬಗ್ಗೆ ನಟ ವಿನಯ್ ಗೌಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

"ದರ್ಶನ್ ಅವರ ಅಭಿನಯದ ಡೆವಿಲ್ ಚಿತ್ರದಲ್ಲಿ ನನಗೆ ವಿಲನ್ ಪಾತ್ರ ದೊರಕಿದೆ. ಈ ಬಗ್ಗೆ ನನಗೆ ಬಹಳ ಸಂತೋಷವಿದೆ. ಬಿಗ್ ಬಾಸ್ ನಂತರ ನನಗೆ ಹಲವಾರು ಒಳ್ಳೆಯ ಅವಕಾಶಗಳು ಬಂದಿತ್ತು. ಅದರಲ್ಲಿ ಈ ಚಿತ್ರ ಕೂಡ ಒಂದು. ಒಂದು ವಿಲನ್ ಪಾತ್ರವಿದೆ ಬನ್ನಿ ಎಂದು ಹೇಳಿದಾಗ ನಾನು ಆ ಪಾತ್ರದ ತೂಕ ನೋಡಿ ಒಪ್ಪಿಕೊಂಡೆ. ನಂತರವೇ ಅದು ಡೆವಿಲ್ ಚಿತ್ರಕ್ಕೆ ಎಂಬ ವಿಚಾರ ನನಗೆ ತಿಳಿದಿದ್ದು. ನನ್ನ ಪಾತ್ರಕ್ಕೆ ಈಗಾಗಲೇ ನಾಲ್ಕು ದಿನಗಳ ಚಿತ್ರೀಕರಣ ನಡೆದಿದೆ. ದರ್ಶನ್ ಅವರೊಂದಿಗೆ ಫೈಟಿಂಗ್ ಸೀನ್ ಸೇರಿ ಇನ್ನು ಹದಿನಾರು ದಿನಗಳ ಚಿತ್ರೀಕರಣ ಬಾಕಿ ಇದೆ. ಅಷ್ಟರಲ್ಲೇ ಹೀಗೆಲ್ಲ ಆಗೋಯ್ತು"ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟ ವಿನಯ್ ಗೌಡ.

"ಡೆವಿಲ್ ಚಿತ್ರದ ಕಥೆ ಬಹಳ ಚೆನ್ನಾಗಿದೆ ನನ್ನ ಪಾತ್ರವು ನನಗೆ ಬಹಳ ಸಂತೋಷ ಕೊಟ್ಟಿದೆ. ಎಲ್ಲವೂ ಸರಿಯಾಗಿ, ಚಿತ್ರೀಕರಣ ಮುಂದುವರೆದರೆ ಅದೃಷ್ಟದ ಹಬ್ಬ. ಇಲ್ಲವಾದರೆ ದೊಡ್ಡ ಲಾಸ್" ಎಂದು ಮಾತನಾಡುವಾಗ ಹಂಚಿಕೊಂಡಿದ್ದಾರೆ ನಟ ವಿನಯ್ ಗೌಡ.

Bigg boss vinay gowda about devila movie

ಇನ್ನು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ನಟ ವಿನಯ್ ಗೌಡ, "ಈಗಾಗಲೇ ಏನೆಲ್ಲ ನಡೆದಿದೆ ಎಂಬುದು ಇಡೀ ಕರ್ನಾಟಕದ ಜನತೆಗೆ ತಿಳಿದಿರುವ ವಿಚಾರ. ಕಾನೂನಿನ ಕೈಯಲ್ಲೇ ಎಲ್ಲವೂ ನಿಂತಿದೆ. ಆದರೆ ಸೋಶಿಯಲ್ ಮೀಡಿಯಾ ಬಳಕೆ ಮಾಡುವವರು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ತಮ್ಮ ತಮ್ಮ ತಂದೆ ತಾಯಿಗೆ ಹುಟ್ಟಿದವರು. ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಾ ಖಡಕ್ ಆಗಿ ಉತ್ತರಿಸಿದ್ದಾರೆ ನಟ ವಿನಯ್ ಗೌಡ.

ಅಂದ ಹಾಗೆ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ದರ್ಶನ ಅವರನ್ನು ಒಮ್ಮೆ ಎಷ್ಟೇ ಭೇಟಿಯಾದ ನಟ ವಿನಯ್ ಗೌಡ ಅವರು ಈ ಚಿತ್ರದ ಬಗ್ಗೆ ಬಹಳಷ್ಟು ಕನಸುಗಳನ್ನು ಹೊಂದಿದ್ದಾರೆ ಅಂತೆ. ಚಿತ್ರದ ಚಿತ್ರೀಕರಣ ಯಾವ ರೀತಿ ಮುಂದುವರೆಯಲಿದೆ ಹಾಗೂ ಇದರ ಅಂತಿಮ ಫಲಿತಾಂಶ ಏನು ಎಂಬುದನ್ನು ಸದ್ಯಕ್ಕಂತೂ ಕುತೂಹಲ.

More from Filmibeat

English summary
Actor Vinay Gowda said that he was happy to play the villain in Devil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X