'ಜೊತೆ ಜೊತೆಯಲಿ', 'ಕಿಸ್' ಖ್ಯಾತಿಯ ವಿರಾಟ್: ದುನಿಯಾ ಸೂರಿ ಜೊತೆ ಸಿನಿಮಾ ಮಾಡೋ ಕನಸು ನನಸು!
ಸ್ಯಾಂಡಲ್‌ವುಡ್‌ನ ಭರವಸೆಯ ನಟರಲ್ಲಿ ವಿರಾಟ್ ಕೂಡ ಒಬ್ಬರು. ಕಿರುತೆರೆಯಲ್ಲೇ ತನ್ನ ಖ್ಯಾತಿಯನ್ನು ಹಬ್ಬಿಸಿ ಹಿರಿತೆರೆಗೆ ಬಂದವರು ವಿರಾಟ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ವಿರಾಟ್ ಇಂದು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಜೊತೆ ಜೊತೆಯಲಿ' ಸೀರಿಯಲ್ ನಲ್ಲಿ ಶಾಲಿನಿಯ ಪ್ರೀತಿ ಬಯಸುವ ಅಭಯ್ ಆಗಿದ್ದ ವಿರಾಟ್, ಎಪಿ ಅರ್ಜುನ್ ಅವರ 'ಕಿಸ್' ಸಿನಿಮಾದ ಮೂಲಕ ಫೇಮಸ್ ಆಗಿ ಬೆಳ್ಳಿತೆರೆಯಲ್ಲೂ ಸೈ ಎನಿಸಿಕೊಂಡರು. ಅಂತಹ ವಿರಾಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಿದ್ದಾರೆ.

ಹೌದು, ದುನಿಯಾ ಸೂರಿಯವರ ಸಿನಿಮಾಗೆ ಹೀರೋ ಆಗುವ ಅವಕಾಶವನ್ನು ನಟ ಪಡೆದುಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ಜಯಣ್ಣ ಅವರು ಸೂರಿ & ವಿರಾಟ್ ಕಾಂಬಿನೇಷನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಕಂಪ್ಲಿಟ್ ಕಮರ್ಷಿಯಲ್ ಸಿನಿಮಾವಾಗಿದ್ದು, ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆಯಂತೆ.
ದುನಿಯಾ ಸೂರಿ ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ಆರಂಭಿಸಿದ್ದು, ಅದು ಮುಕ್ತಾಯವಾಗಿ ಬಿಡುಗಡೆಯಾದ ನಂತರ ಹೊಸ ಸಿನಿಮಾ ಆರಂಭವಾಗಲಿದೆ. ವೃತ್ತಿ ಜೀವನದ ಆರಂಭದಲ್ಲೇ ದುನಿಯಾ ಸೂರಿಯವರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿರುವುದು ವಿರಾಟ್‌ಗೆ ವರದಾನದಂತಾಗಿದೆ.

ನನ್ನ ಅಚ್ಚುಮೆಚ್ಚಿನ ಸೂರಿ ಅವರ ಜತೆ ಕೆಲಸ ಮಾಡಬೇಕೆನ್ನುವುದು ನನ್ನ ಕನಸಾಗಿತ್ತು. ಅದೀಗ ನನಸಾಗುತ್ತಿದೆ ಎಂದಿದ್ದಾರೆ ವಿರಾಟ್. ಇನ್ನು ವಿರಾಟ್ ಒಬ್ಬ ಪ್ರತಿಭಾವಂತ ನಟ. ಆತನೊಳಗೆ ಒಂದು ಫೈರ್ ಇದೆಎಂದ ದುನಿಯಾ ಸೂರಿಯವರು ಕೂಡ ನಟನನ್ನು ಹೊಗಳಿದ್ದಾರೆ. ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ವಿರಾಟ್ ದಿನಕರ್ ತೂಗುದೀಪ ಅವರ 'ರಾಯಲ್' ಸಿನಿಮಾದಲ್ಲೂ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











