twitter
    For Quick Alerts
    ALLOW NOTIFICATIONS  
    For Daily Alerts

    Mahanayaka Serial: 'ಮಹಾನಾಯಕ' ಧಾರಾವಾಹಿಗೆ ಬೆದರಿಕೆ ಹಾಕಿದಾಗ ಬೆನ್ನೆಲುಬಾಗಿ ನಿಂತಿದ್ದ ಯಶ್!

    By ಅಪೂರ್ವ ಗೌಡ
    |

    ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ಹುಟ್ಟಿದರು. ಅಂಬೇಡ್ಕರ್ ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು.

    ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೆ ಅವರ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆಯುತ್ತಾರೆ. ಸ್ವತಂತ್ರ ಭಾರತದಲ್ಲಿ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ 'ಭಾರತ ರತ್ನ' ನೀಡಿ ಪುರಸ್ಕರಿಸಲಾಗಿದೆ.

    Tv Serial: ಕುಟುಂಬವೇ ಇಲ್ಲ ಅಂತಿರೋ 'ರಾಧಿಕಾ'ಗೆ ಸ್ವಾರ್ಥಿಗಳ ಬಗ್ಗೆ ಅರಿವೇ ಇಲ್ಲ!Tv Serial: ಕುಟುಂಬವೇ ಇಲ್ಲ ಅಂತಿರೋ 'ರಾಧಿಕಾ'ಗೆ ಸ್ವಾರ್ಥಿಗಳ ಬಗ್ಗೆ ಅರಿವೇ ಇಲ್ಲ!

    ಇವರ ಜೀವನದ ಕಥೆ ಧಾರಾವಾಹಿ ರೂಪದಲ್ಲಿ ಶನಿವಾರ ಹಾಗೂ ಭಾನುವಾರ ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್‌ಗೆ 'ಮಹಾ ನಾಯಕ' ಎಂದು ಹೆಸರಿಡಲಾಗಿದೆ. ಜನಪ್ರಿಯ ಧಾರಾವಾಹಿ ವೀಕ್ಷಕರು ಪ್ರತಿನಿತ್ಯ ವೀಕ್ಷಿಸಲು ಒತ್ತಾಯಿಸಿದ್ದರಿಂದ ದೈನಂದಿನ ಧಾರಾವಾಹಿಯಾಗಿ ಪರಿವರ್ತಿಸಲಾಗಲಿದೆ.

    Actor Yash Supported To Telecast Mahanayaka Serial

    ಈಗ ಇದು ವಾರಾಂತ್ಯದ ಬದಲಿಗೆ ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. 2020ರ ಜುಲೈನಲ್ಲಿ ಕನ್ನಡ ಕಿರುತೆರೆಯಲ್ಲಿ 'ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್' ಧಾರಾವಾಹಿ ಪ್ರಾರಂಭವಾಗಿತ್ತು. ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ವೀಕ್ಷಿಸಿದ್ದೇ ಅಲ್ಲದೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಸೂಪರ್ ಹಿಟ್ ಆಯಿತು. ಪುಟ್ಟ ಭೀಮರಾವ್ ಅಭಿನಯಕ್ಕೆ ವೀಕ್ಷಕರು ಮಾರು ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಧಾರಾವಾಹಿಯ ಬ್ಯಾನರ್ ಹಾಗೂ ಕಟೌಟ್ ನಿರ್ಮಿಸಿ ಉತ್ತೇಜಿಸಲಾಯ್ತು.

    Actor Yash Supported To Telecast Mahanayaka Serial

    ಆದರೆ 'ಮಹಾನಾಯಕ' ಧಾರಾವಾಹಿ ಪ್ರಸಾರ ಆಗುತ್ತಲೆ, ನಿಲ್ಲಿಸುವಂತೆ ಬೆದರಿಕೆ ಕರೆ ಬಂದಾಗ ಪ್ರಸಾರ ಮಾಡಲು ಧೈರ್ಯ ತುಂಬಿದ್ದು ಕನ್ನಡದ ಈ ಸ್ಟಾರ್ ನಟ. ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಧಾರಾವಾಹಿಯ ಪೋಸ್ಟರ್‌ಗಳು ಮಾರುಕಟ್ಟೆಗೆ ಬಂದಿವೆ. ಈ ಧಾರಾವಾಹಿ ಪ್ರಸಾರ ಆರಂಭ ಆದಾಗ, ಪ್ರಸಾರ ಮಾಡದಂತೆ ಜೀ ವಾಹಿನಿಗೆ ಧಮ್ಕಿ ಹಾಕಲಾಗಿತ್ತು. ಆಗ 'ರಾಕಿಂಗ್ ಸ್ಟಾರ್' ಯಶ್ ರಾಘವೇಂದ್ರ ಹುಣಸೂರುಗೆ ಫೋನ್ ಮಾಡಿ ನಾನು ಇದ್ದೇನೆ. ಪ್ರಸಾರ ಮಾಡಿ ಎಂದು ಬೆಂಬಲ ನೀಡಿದ್ದರು. ಈ ಮಾತನ್ನು ಕಾರ್ಯಕ್ರಮ ಒಂದರಲ್ಲಿ ತಿಳಿಸಿದ್ದರು. ಹಾಗಾಗಿ ಇಂದಿಗೂ ಈ 'ಮಹಾನಾಯಕ' ಧಾರಾವಾಹಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    English summary
    Actor Yash Supported To Telecast Mahanayaka Serial
    Sunday, March 20, 2022, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X