ಪೋಷಕರಾಗುತ್ತಿರೋ ಸಂಭ್ರಮದಲ್ಲಿ ಕಿರುತೆರೆ ನಟ ರಕ್ಷಿತ್ ಅರಸ್ ಹಾಗೂ ಮನೋರಂಜಿತಾ ಜೈನ್!
ತಂದೆ ತಾಯಿಯಾಗುವುದು ಎಂತವರಿಗೂ ಬಹಳ ಸಂಭ್ರಮದ ವಿಚಾರ. ತಮ್ಮ ಜೀವನದಲ್ಲಿ ಹೊಸದೊಂದು ಘಟ್ಟ ಆರಂಭವಾಗುವ ಘಳಿಗೆ. ಅಂತಹದ್ದೇ ಒಂದು ಗಳಿಗೆಗೆ ನಟ ರಕ್ಷಿತ್ ಅರಸ್ ಹಾಗೂ ಮನೋರಂಜಿತಾ ಜೈನ್ ಸಾಕ್ಷಿ ಆಗುತ್ತಿದ್ದಾರೆ. ಕಳೆದ ವರ್ಷ ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಮ್ಮ ಮೊದಲನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗೆ ತಿಳಿಸಿದ್ದಾರೆ. "ಪೇರೆಂಟ್ಸ್ ಟು ಬಿ ಅಂತ ಫೋಟೋಗಳನ್ನು ಮಾಡಿದ್ದು, ಆ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.

ಅವರ ಜೀವನದ ಈ ವಿಶೇಷ ಘಟ್ಟವನ್ನು ತಿಳಿದ ಅಭಿಮಾನಿಗಳು ಪ್ರೇಕ್ಷಕರು ಬಹಳ ಖುಷಿಯಾಗಿದ್ದು ಕಾಂಪ್ಲಿಮೆಂಟ್ ಹಾಗೂ ಶುಭಾಶಯಗಳು ಈ ಮೂಲಕ ಬಹಳಷ್ಟು ಪಾಸಿಟಿವಿಟಿಯನ್ನು ನೀಡಿದ್ದಾರೆ.
ಸದ್ಯ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯ ನಟರಾದ ರಕ್ಷಿತ್ ಅರಸ್ ನೀಡಿರುವ ಸಿಹಿ ಸುದ್ದಿಯಿಂದ ಅವರ ಅಭಿಮಾನಿಗಳು ಸಕ್ಕತ್ ಖುಷಿಯಲ್ಲಿದ್ದಾರೆ. ನಮ್ಮ ಜೀವನವೆಂಬ ದಾರಿಯಲ್ಲಿ ಇನ್ನೆರಡು ಕಾಲುಗಳು ಸೇರಲಿವೆ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಒಂದು ಕೈಯಲಿ ತಮ್ಮ ಸ್ಕ್ಯಾನಿಂಗ್ ನ ಫೋಟೋಗಳನ್ನು ಹಿಡಿದಿದ್ದಾರೆ.

ಈ ಪೋಸ್ಟ್ ಮೂಲಕ ತಮ್ಮ ಜೀವನದ ಹೊಸಘಟ್ಟದ ಆರಂಭವನ್ನು ಪ್ರೇಕ್ಷಕರಿಗೆ ತಿಳಿಸಿರುವುದು ಅಷ್ಟೇ ಅಲ್ಲದೆ ಎಲ್ಲರ ಆಶೀರ್ವಾದವನ್ನು ಕೇಳಿದ್ದಾರೆ. 'ಮಹಾದೇವಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ರಕ್ಷಿತ್ ಅರಸ್ ಗೋಪಾಲ್ ಮುಂದೆ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ಅಭಿನಯಿಸಿದರು. ನಂತರ 'ಯಜಮಾನಿ' ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ನಟಿಸಿದ ಈತ 'ಮತ್ತೆ ವಸಂತ' ಧಾರಾವಾಹಿಯ ವಸಂತನಾಗಿ ಮಿಂಚಿದರು.
'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರಕ್ಷಿತ್ ಅರಸ್ ಗೋಪಾಲ್ ಸದ್ಯ 'ಕಾವೇರಿ ಕನ್ನಡ ಮೀಡಿಯಂ'ನಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಅವರು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಇವರು ಮುದ್ದು ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











