ಉದ್ಯಮಿಯಾಗಿದ್ದರೂ ಕಿರುತೆರೆಯಲ್ಲಿ ಫೇಮಸ್; ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳೋ ಈ ನಟಿ ಯಾರು?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'. ಈ ಧಾರಾವಾಹಿಯಲ್ಲಿ ರೋಹಿಣಿಯಾಗಿ ನಟಿಸುವ ಮೂಲಕ ಮತ್ತೆ ಕಿರುತೆರೆಯಲ್ಲಿ ನಟಿ ನಯನಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅತ್ತಿಗೆ ಮಾನ್ಸಿಯಾಗಿ ನಯನಾ ಅಭಿನಯಿಸಿದ್ದರು.

'ಜೊತೆಜೊತೆಯಲಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ನಯನಾ ಇದೀಗ ರೋಹಿಣಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ನಟನೆಯ ಜೊತೆಗೆ ಉದ್ಯಮಿಯಾಗಿಯೂ ನಟಿ ನಯನಾ ಗುರುತಿಸಿಕೊಂಡಿದ್ದಾರೆ. ಹೌದು, ಇತ್ತೀಚೆಗಷ್ಟೇ ಬ್ಯುಸಿನೆಸ್ ಲೋಕಕ್ಕೆ ಪಾದಾರ್ಪಣೆ ಮಾಡಿರುವ ನಯನಾ ತಮ್ಮದೇ ಆದ ವಸ್ತ್ರದ ಮಳಿಗೆಯನ್ನು ತೆಗೆದಿದ್ದಾರೆ.

Actres Nayana in aase serial

'ಧವಳಂ ಸ್ಟುಡಿಯೋ' ಹೆಸರಿನ ಈ ಅಂಗಡಿಯಲ್ಲಿ ನಾನಾ ನಮೂನೆಯ ಸಾರಿಗಳು ಸಿಗುತ್ತವೆ. ಬ್ಯುಸಿನೆಸ್ ನಡುವೆ ನಟನೆಯತ್ತ ಮರಳಿದ್ದು, ನಯನಾ ವೆಂಕಟೇಶ್ ಎರಡನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ಅಂದ ಹಾಗೇ ನಯನಾ ಅವರು ಯಾವತ್ತಿಗೂ ನಟಿಯಾಗಬೇಕು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡವರಲ್ಲ.

ಬದಲಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ನಯನಾ ಮುಂದೆ ಎರಡು ವರ್ಷಗಳ ಕಾಲ ‌ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದ್ದರು. "ಚಿಕ್ಕಮ್ಮ" ಧಾರಾವಾಹಿಯ ಮೂಲಕ ಆಕಸ್ಮಿಕವಾಗಿ ನಟನೆಗೆ ಪಾದಾರ್ಪಣೆ ಮಾಡಿದ ಈಕೆ ಮುಂದೆ 'ಗಾಳಿಪಟ', 'ಪುಟ್ಟಗೌರಿ ಮದುವೆ', 'ವಸುದೈವ ಕುಟುಂಬ', 'ಕನಕ', 'ಕರ್ಪೂರದ ಗೊಂಬೆ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

Actres Nayana in aase serial

ಮುಂದೆ 'ವಾರಸ್ದಾರ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಂಡ ನಯನಾ ಮತ್ತೆ 'ಮನೆದೇವ್ರು', 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮದುವೆ, ಮಗನ ಲಾಲನೆ ಪಾಲನೆಯ ಸಲುವಾಗಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಯನಾ ನಂತರ 'ಇಂತಿ ನಿಮ್ಮ ಆಶಾ' ಧಾರಾವಾಹಿಯ ದಿಶಾಳಾಗಿ ಕಿರುತೆರೆಗೆ ಮರಳಿದರು.

ಬರೋಬ್ಬರು ಎರಡು ವರ್ಷಗಳ ಕಾಲ ನಟನೆಯಿಂದ ದೂರವಿದ್ದ ಆಕೆ ನಂತರ 'ಇಂತಿ ನಿಮ್ಮ ಆಶಾ' ಆಗಿ ಕಿರುತೆರೆಗೆ ಮರಳಿ, ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಜೀ ಕನ್ನಡ ವಾಹಿನಿಯ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿಯೂ ಮಾನ್ಸಿ ಆಗಿ ನಟಿಸಿದ ಈಕೆ ಇದೀಗ ರೋಹಿಣಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

More from Filmibeat

English summary
Actres Nayana is charming on television as Rohini in Aase serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X