ಕಿರುತೆರೆಯಿಂದ ದೂರಾಗಿದ್ದ ನಟಿ ಅಭಿನಯ ಮತ್ತೆ ಕಂಬ್ಯಾಕ್

By ಪ್ರಿಯಾ ದೊರೆ

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಟಿ ಅಭಿನಯಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಜೈಲು ಪಾಲಾಗುವ ಆತಂಕದಲ್ಲಿ ನಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ನಟಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಿಂದಲೂ ದೂರಾಗಿದ್ದರು. ಇದೀಗ ಮತ್ತೆ ನಟಿ ಕಂಬ್ಯಾಕ್ ಆಗುವ ಸುಳಿವು ಸಿಗುತ್ತಿದೆ.

ನಟಿ ಅಭಿನಯ ಅವರು ಹುಟ್ಟಿದ್ದು 1971 ರಲ್ಲಿ. ಇವರು ಕನ್ನಡದ ಹೆಸರಾಂತ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್ ಅವರ 'ಅನುಭವ' ಚಿತ್ರದಲ್ಲಿ ಅಭಿನಯ ಲೀಡ್ ರೋಲ್‌ನಲ್ಲಿ ನಟಿಸಿದರು. ಈ ಚಿತ್ರದಲ್ಲಿನ 'ಹೋದೆಯಾ ದೂರ ಓ ಜೊತೆಗಾರ' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

Actress Abhinaya makes a comeback on social media

ಚಿತ್ರದಲ್ಲಿ ಕಾಶಿನಾಥ್ ಅವರ ಜೊತೆಗೆ ಅಭಿನಯ ಅವರು ರೊಮ್ಯಾಂಟಿಕ್ ಆಗಿ ನಟಿಸಿದ್ದರು. ಈ ಸಿನಿಮಾಗಾಗಿ ಅಭಿನಯ ಅವರಿಗೆ ಸ್ಟೇಟ್ ಅವಾರ್ಡ್ ಕೂಡ ಬಂದಿತ್ತು. ಇದಾದ ಬಳಿಕ 1980 ಮತ್ತು 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು.

'ಅನುಭವ' ಸಿನಿಮಾ ಬಳಿಕ ಅಭಿನಯ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. 'ಕಿಂದರಿ ಜೋಗಿ', 'ಗಜಪತಿ ಗರ್ವಭಂಗ', 'ಊರ್ವಶಿ ಕಲ್ಯಾಣ', 'ಅಪ್ಪ ನಂಜಪ್ಪ ಮಗ ಗುಂಜಪ್ಪ', 'ಕೊಲ್ಲೂರು ಕಾಳ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ 'ವಠಾರ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದರು. 'ಡ್ರೈವರ್ ಡುಮ್ಮಣ್ಣ', 'ಬದುಕು', 'ಕಂಡಕ್ಟರ್ ಕರಿಯಪ್ಪ' ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿದ್ದರು.

Actress Abhinaya makes a comeback on social media

ಸಣ್ಣಪುಟ್ಟ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಅಭಿನಯ ಅವರು, ಪೋಷಕ ಪಾತ್ರಗಳಷ್ಟೇ ಅವರು ತೃಪ್ತಿ ಪಡಬೇಕಾಯಿತು. ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಅಭಿನಯ ಅವರ ಅದೃಷ್ಟ ಬದಲಾಯಿತು. ಕಿರುತೆರೆಯಲ್ಲಿ ತಾರೆಯಾಗಿ ಮಿಂಚಿ ಮೋಡಿ ಮಾಡಿದರು. ಧಾರಾವಾಹಿಗಳಲ್ಲಿ ಇಂದಿಗೂ ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಛಾಯಾಗ್ರಾಹಕ ಉಮಾಕಾಂತ್ ಎಂಬುವರನ್ನು ಮದುವೆಯಾದರು. ಆಪ್ತರು ಮತ್ತು ಪರಿಚಿತರಿಗಷ್ಟೇ ಅಭಿನಯ ಅವರು ತಮ್ಮ ಮದುವೆ ಆಮಂತ್ರಣವನ್ನು ಕಳುಹಿಸಿದ್ದರು. ತೀರಾ ಖಾಸಗಿಯಾಗಿ ನಡೆದಂತಹ ಮದುವೆ ಇದಾಗಿತ್ತು. ಧರ್ಮಸ್ಥಳದಲ್ಲಿ ಸಿಂಪಲ್ ಆಗಿ ಸಪ್ತಪದಿ ತುಳಿದ ಅಭಿನಯ ಅವರು ಮತ್ತೆ ಬಣ್ಣದ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಭಿನಯ ಅವರಿಗೆ ನಟಿಸುವ ಆಸೆ ಇದ್ದರೂ ಕೂಡ ಆಫರ್‌ಗಳು ಕೂಡ ಕಡಿಮೆಯಾದವು.

Actress Abhinaya makes a comeback on social media

ಏಳು ವರ್ಷಗಳ ಬಳಿಕ ಮತ್ತೆ ಅಭಿನಯ ಅವರು ಸಿನಿಮಾ ಒಂದರ ಮೂಲಕ ಕಮ್ ಬ್ಯಾಕ್ ಮಾಡಿದರು. 'ಕ್ರಷ್' ಎಂಬ ಚಿತ್ರಕ್ಕೆ ಅಭಿನಯ ಅವರು ಮತ್ತೆ ಬಣ್ಣ ಹಚ್ಚಿದರು. ಮತ್ತೆ ಅಭಿನಯ ಅವರು ಸಿನಿಮಾ ಬಳಿಕ ಕಿರುತೆರೆಗೂ ಎಂಟ್ರಿ ಕೊಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್ ಕಲ್ಯಾಣ' ಎಂಬ ಧಾರಾವಾಹಿಯಲ್ಲಿ ಮಿಂಚಿದರು. ಈ ಧಾರಾವಾಹಿಯಲ್ಲಿ ಅಭಿನಯ ಅವರು ಕೌಸಲ್ಯ ಪಾತ್ರವನ್ನು ನಿರ್ವಹಿಸಿದರು.

ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಬಂದ ಕಾರಣ ಇದ್ದಕ್ಕಿದ್ದ ಹಾಗೆಯೇ ಕಿರುತೆರೆಯಿಂದಲೂ ಮಾಯವಾದರು. .

ನಟಿ ಅಭಿನಯ ಅವರಿಗೆ ಎರಡು ವರ್ಷದ ಜೈಲು ಶಿಕ್ಷೆಯನ್ನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅಭಿನಯ, ಅವರ ಕುಟುಂಬದವರು ಅವರ ಮನೆಯ ಸೊಸೆ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿತ್ತು. ಈ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನಲಾಗಿತ್ತು.

ಇದೀಗ ಅಭಿನಯ ಅವರು ಪುನಃ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಹಾಗೂ ಇಂದು ಇನ್ ಸ್ಟಾಗ್ರಾಂ ಪೇಜ್‌ ನಲ್ಲಿ ಒಂದೊಂದು ರೀಲ್ಸ್‌ ಅನ್ನು ಅಪ್‌ ಲೋಡ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಭಿನಯ ಅವರು ಪುನಃ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿಗೆ ಮರಳಿ ಬರಲಿ ಎಂದು ಬಯಸಿದ್ದಾರೆ.

More from Filmibeat

English summary
Actress Abhinaya makes a comeback on social media. Recently Actress has been sentenced to two years in jail in a 20-year-old dowry harassment case. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X