BBK 12: 150 ಮನೆ ಬಾಡಿಗೆ, 23 ಕೇಸ್; ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಹಿನ್ನೆಲೆ ಏನು?

ಬಿಗ್‌ಬಾಸ್ ಸೀಸನ್ ಕನ್ನಡ 12 ಸೀಸನ್ ಅದ್ಧೂರಿಯಾಗಿ ಶುರುವಾಗಿದೆ. 19 ಮಂದಿ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ. ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ಈ ಬಾರಿ ದೊಡ್ಮನೆ ಆಟದಲ್ಲಿ ಭಾಗಿ ಆಗಿದ್ದಾರೆ. 100ಕ್ಕೂ ಅಧಿಕ ಸಿನಿಮಾ ಹಾಗೂ 25 ಧಾರಾವಾಹಿಗಳಲ್ಲಿ ಆಕೆ ನಟಿಸಿದ್ದಾರೆ.

ರಾಜಕೀಯರ ಹಿನ್ನೆಲೆ ಇರುವ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಶ್ವಿನಿ ಗೌಡ ಬಳಿಕ ಬಣ್ಣದಲೋಕದತ್ತ ಮುಖ ಮಾಡಿದವರು. ಬಳಿಕ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಮಂತ ಮನೆಯ ಕುಟುಂಬದಲ್ಲಿ ಆಕೆ ಬೆಳೆದವರು. ಈ ಹಿಂದೆ ರೂಪೇಶ್ ರಾಜಣ್ಣ ಬಿಗ್‌ಬಾಸ್ ಮನೆಗೆ ಹೋಗಿದ್ದರು. ಈ ಬಾರಿ ಕಲಾವಿದೆ ಹಾಗೂ ಹೋರಾಟಗಾರ್ತಿ ವಿಭಾಗದಲ್ಲಿ ದೊಡ್ಮನೆ ಒಳಗೆ ಹೋಗಬಹುದು ಎನ್ನುತ್ತಿದ್ದಾರೆ, ಬಿಗ್‌ಬಾಸ್ ಆಯೋಜಕರಿಂದ ನನಗೆ ಯಾವುದೇ ಕರೆ ಬಂದಿಲ್ಲ, ಒಂದು ಹೋಗುವುದಾದರೆ ಕನ್ನಡದ ಹೆಣ್ಣುಮಗಳು ಯಾಕೆ ಹೋಗಬಾರದು" ಎಂದು ಅಶ್ವಿನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Actress activist Ashwini Gowda s Journey from Films to Bigg Boss Kannada Season 12

ಕುಟುಂಬದ ವಿಚಾರಕ್ಕೆ ಸೋಲಬಹುದು, ಬೇರೆ ಯಾವುದಕ್ಕೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಇನ್ನುಳಿದಂತೆ ನನ್ನನ್ನು ಯಾರುನನ್ನ ಒಳಗಿರುವ ಅಶ್ವಿನಿ ಗೌಡ ಯಾರು ಎಂದು ತಿಳಿದುಕೊಳ್ಳಲು ಈ ಬಾರಿ ಬಿಗ್‌ಬಾಸ್ ಮನೆಗೆ ಬರ್ತಿದ್ದೀನಿ ಎಂದು ಅಶ್ವಿನಿ ಗೌಡ ತಮ್ಮ ವಿಟಿಯಲ್ಲಿ ಹೇಳಿಕೊಂಡಿದ್ದಾರೆ. ಕೆಚ್ಚೆದೆಯ ಹೋರಾಟಗಾರ್ತಿಯಾಗಿ ಕಿಚ್ಚಿನಿಂದ ಆಡಲು ಬಿಗ್‌ಬಾಸ್ ಆಯ್ಕೆ ಮಾಡ್ಕೊಂಡಿದ್ದೀನಿ ಎಂದು ಸುದೀಪ್ ಮುಂದೆ ವೇದಿಕೆಯಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಡಿಜಿಟಲ್ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಶ್ವಿನಿ ಗೌಡ ತಮ್ಮ ವೈಯಕ್ತಿಕ ಹಾಗೂ ಸಿನಿಮಾ, ಹೋರಾಟ ಎಲ್ಲದರ ಬಗ್ಗೆ ಮಾತನಾಡಿದ್ದರು. ತಮ್ಮ ತಾತ ಆಸ್ತಿ, ಅದನ್ನು ತಂದೆ ಮತ್ತಷ್ಟು ಅಭಿವೃದ್ಧಿಪಡಿಸಿದ್ದು ತಮ್ಮ ಕುಟುಂಬ ಎಲ್ಲದರ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದರು. ತಮ್ಮ ಮನೆಯ ಹೋಮ್‌ ಟೂರ್ ಕೂಡ ಮಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ತಮಗೆ 150 ಮನೆ ಬಾಡಿಗೆ ಬರುತ್ತದೆ, 20 ಕೇಸ್‌ಗಳು ಇವೆ ಎಂದು ಅಶ್ವಿನಿ ಗೌಡ ವಿವರಿಸಿದ್ದರು.

"ನಮ್ಮದು ಬಹಳ ದೊಡ್ಡ ಕುಟುಂಬ. ನಮ್ಮ ತಂದೆಗೆ ಮೂವರು ಮಡದಿಯರು. ನಾವೆಲ್ಲಾ ಒಟ್ಟಿಗೆ ಯಾವುದಾದರೂ ಸಮಯದಲ್ಲಿ ಸೇರಿದರೆ 500 ಜನ ಆಗ್ತೀವಿ. ನಮ್ಮ ತಂದೆ ಮುನಿಬಚ್ಚಪ್ಪ ಕೆ. ಆರ್‌ ಪುರದ ಮಾಜಿ ಚೇರ್ಮನ್. ಜಗದೀಶ್ ನಗರದ ಕಾರ್ಪೊರೇಟ್ ಸಹ ಆಗಿದ್ದವರು. ನಮ್ಮದು ರಾಜಕೀಯ ಹಿನ್ನೆಲೆಯ ಕುಟುಂಬ. ನಾನೊಬ್ಬಳೆ ಕಲಾವಿದೆಯಾಗಿ ಗುರ್ತಿಸಿಕೊಂಡಿರುವುದು" ಎಂದು ಅಶ್ವಿನಿ ಗೌಡ ಹೇಳಿದ್ದರು.

ರಾಜಕೀಯ ಹಿನ್ನೆಲೆಯಿಂದ ಬಂದವರು ಆಗಿದ್ದರೂ ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದರಿಂದ ನಾನು ಯಾವುದೇ ಪಕ್ಷದಲ್ಲಿ ಗುರ್ತಿಸಿಕೊಂಡಿಲ್ಲ ಎಂದು ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ. "ನಮ್ಮ ತಂದೆ 30, 40 ವರ್ಷಗಳ ಹಿಂದೆಯೇ ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ಲೇಔಟ್‌ಗಳನ್ನು ನಿರ್ಮಿಸಿದ್ದರು. ಸಾಕಷ್ಟು ಪ್ರಾಪರ್ಟಿ ಇತ್ತು. ಹೆಚ್‌ಎಎಲ್ ಹಾಗೂ ಬಿಮೆಲ್‌ಗೆ ಒಂದಷ್ಟು ಹೋಗಿದೆ. ಕೆಂಪೇಗೌಡ ಬಡವಣೆಯನ್ನು ತಂದೆ ನಿರ್ಮಿಸಿದ್ದರು. ಮುನಿಬಚ್ಚಪ್ಪ ಕಾಲೋನಿ ಎಂದೇ ನಮ್ಮ ಏರಿಯಾ ಹೆಸರು ಎಂದು ಅಶ್ವಿನಿ ಗೌಡ ಮಾಹಿತಿ ನೀಡಿದ್ದರು.

"ಸುಮಾರು 100-150 ಚಿಕ್ಕ ಚಿಕ್ಕ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದೀವಿ. ಪ್ರಾಪರ್ಟಿ ಇದ್ದಾಗ ಅದಕ್ಕೆ ತಕ್ಕಂತೆ ಕೇಸ್‌ಗಳು ಇರುತ್ತವೆ. ಒಂದಷ್ಟು ಸಮಸ್ಯೆಗಳಿವೆ ಅದನೆಲ್ಲಾ ಬಗೆಹರಿಸಿಕೊಳ್ಳಬೇಕು. ಅಪ್ಪ ಇದ್ದಾಗಲೇ ಒಂದಷ್ಟು ಜವಾಬ್ದಾರಿ ವಹಿಸಿದ್ದರು. ತಮ್ಮ ಚಿಕ್ಕವನು, ಹಾಗಾಗಿ ಹೆಚ್ಚು ಜವಾಬ್ದಾರಿ ಅವನಿಗೆ ವಹಿಸಿಲ್ಲ, ಹೋರಾಟದ ಕೇಸ್, ಪ್ರಾಪರ್ಟಿ ಕೇಸ್ ಸೇರಿ 22ರಿಂದ 23 ಕೇಸ್ ಇದೆ. ತಿಂಗಳ ಬಹುತೇಕ ಸಮಯದಲ್ಲಿ ಅದಕ್ಕೆ ವ್ಯಯಿಸಬೇಕು. 3 ಎಕರೆ ಜಾಗ ಇದೆ. ಇಲ್ಲೇ ನಮ್ಮ ತಂದೆಯವರ ದೇವಸ್ಥಾನದ ಕಟ್ಟಿಸ್ದಿದ್ದೀನಿ ಎಂದು ಅಶ್ವಿನಿಗೌಡ ಮಾಹಿತಿ ನೀಡಿದ್ದರು.

More from Filmibeat

English summary
Bigg Boss Kannada 12 Contestant Spotlight: Actress and Activist Ashwini Gowda
Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X