ಅಮ್ಮನನ್ನು ಕಳೆದುಕೊಂಡ ನೋವು ಮಾಸಿಲ್ಲ: ಫೋಟೊಗಳನ್ನು ಶೇರ್ ಮಾಡಿ ನಟಿ ಐಶ್ವರ್ಯಾ ಬಸ್ಪುರೆ ಹೇಳಿದ್ದೇನು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಜಗದೀಶ್ವರಿ ಮಗಳು ದೀಪಿಕಾ ಆಗಿ ಅಭಿನಯಿಸುತ್ತಿರುವ ಐಶ್ವರ್ಯಾ ಬಸ್ಪುರೆ ಅವರ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ನಿಧನರಾದರು. ತನ್ನ ತಾಯಿಯ ಸಾವಿನ ಸುದ್ದಿಯನ್ನು ನಟಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು‌.

ಹೌದು, ಸೋಶಿಯಲ್ ಮೀಡಿಯಾದಲ್ಲಿ ತಾಯಿಯೊಂದಿಗಿನ ಸರಣಿ ಫೋಟೊಗಳನ್ನು ಹಂಚಿಕೊಂಡಿದ್ದಲ್ಲದೆ, "ಈಗಾಗಲೇ 7 ದಿನಗಳು? ನೀವು ಇನ್ನು ಮುಂದೆ ನಮ್ಮ ಸುತ್ತಲೂ ಇಲ್ಲ ಎಂಬ ಅಂಶವನ್ನು ಅರಗಿಸಿಕೊಳ್ಳುವುದು ಇನ್ನೂ ತುಂಬಾ ಕಷ್ಟ ಅಮ್ಮಾ. ನಾನು ಪ್ರತಿದಿನ ಬೆಳಿಗ್ಗೆ ಎದ್ದೇಳುತ್ತೇನೆ. ಇದೆಲ್ಲವೂ ಕೇವಲ ದುಃಸ್ವಪ್ನವಲ್ಲ ನಿಜವೆಂದು ಅರಿವಾಗಿದೆ. ಇಷ್ಟೆಲ್ಲಾ ಕಷ್ಟಗಳ ಹೊರತಾಗಿಯೂ ನನ್ನ ಜನ್ಮದಿನಕ್ಕಾಗಿ ಜೀವಂತವಾಗಿ ಉಳಿದಿದ್ದಿರಿ'' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Actress Aishwarya Baspure gets emotional after she lost her mother recently

ಕೃಷಿ ಸಹಾಯಕ ನಿರ್ದೇಶಕರಾಗಿದ್ದ ಐಶ್ವರ್ಯಾ ಅಮ್ಮ

ಹಲವರು ಸಾಂತ್ವನ ನೀಡಲು ನೆನಪುಗಳನ್ನು ಹಂಚಿಕೊಳ್ಳಲು ಕರೆ ಮಾಡುತ್ತಿರುವುದಕ್ಕೆ ನಟಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲರಂತೆ ತಾಯಿಯನ್ನು ತನ್ನ ಸಂತೋಷ ಮತ್ತು ಸ್ಫೂರ್ತಿ ಎನ್ನುವ ಐಶ್ವರ್ಯಾ ಎರಡು ಮಕ್ಕಳಿದ್ದರೂ 30 ವರ್ಷಗಳಿಗೂ ಹೆಚ್ಚು ಕಾಲ ಕೃಷಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವುದನ್ನು ನೆನೆದು ಹೆಮ್ಮೆ ಪಡುತ್ತಾರೆ.ಅಲ್ಲದೆ ಅವರಂತಾಗಲು ಸಾಧ್ಯವಾಗದಿದ್ದರೂ ಅದರಲ್ಲಿ ಕನಿಷ್ಠ 10% ವನ್ನು ತಲುಪಿ ತಾಯಿಗೆ ಇನ್ನಷ್ಟು ಹೆಮ್ಮೆಯನ್ನು ತಂದುಕೊಡುತ್ತೇನೆ ಎಂದರು.

ಅಮ್ಮನ ಕುರಿತ ನೆನಪು ಹಂಚಿಕೊಂಡ ಐಶ್ವರ್ಯಾ

ನೆನಪುಗಳನ್ನು ಹಂಚಿಕೊಂಡ ಐಶ್ವರ್ಯಾ "ನಾನು ನೆಲೆಗೊಳ್ಳುವವರೆಗೂ ನನ್ನನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಹಿಂತಿರುಗಿ ಬರುವುದು ಅಸಾಧ್ಯ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಯಾವಾಗಲೂ ನನ್ನ ರಕ್ಷಕ ದೇವದೂತನಾಗಿರುತ್ತಾನೆ. ದೇವರು ನನ್ನಿಂದ ಎಲ್ಲವನ್ನೂ ನಿನ್ನ ರೂಪದಲ್ಲಿ ತೆಗೆದುಕೊಂಡಿದ್ದಾನೆ. ಆದರೆ ಅವನು ನಿನ್ನನ್ನು ಮಾತನಾಡಲು ಬಿಡಬೇಕೆಂದು ನಾನು ಬಯಸುತ್ತೇನೆ" ಎಂದಿದ್ದರು.

Actress Aishwarya Baspure gets emotional after she lost her mother recently

"ಖಿನ್ನತೆಗೆ ಒಳಗಾಗದೆ ಅಮ್ಮನನ್ನು ಪ್ರೀತಿಸುತ್ತೇನೆ"

ಇದರ ಜೊತೆಗೆ "ನಿನ್ನ ಮತ್ತು ಅಪ್ಪನ ಬಾಂಧವ್ಯದಿಂದಾಗಿ ಪ್ರೀತಿ ಎಂದರೇನು ಎಂಬುದು ನನಗೆ ಸರಿಯಾಗಿ ತಿಳಿದಿದೆ. ನಾನು ಖಿನ್ನತೆಗೆ ಒಳಗಾಗದೆ ನಿನ್ನನ್ನು ಇನ್ನಷ್ಟು ಪ್ರೀತಿಸುತ್ತೇನೆ" ಎಂಬ ಆಶಾವಾದವನ್ನು ಹೊರಹಾಕಿದ್ದಾರೆ. ತಾಯಿ ನಿಧನದ ಸುದ್ದಿಯನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಆತ್ಮೀಯರಿಂದ ಸತತವಾಗಿ ಸಂತಾಪ ವ್ಯಕ್ತವಾಗುತ್ತಿದೆ.

More from Filmibeat

English summary
Actress Aishwarya Baspure gets emotional after she lost her mother recently. She said that she does not get depressed that she is no more because loves her more,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X