ಹುಟ್ಟುಹಬ್ಬದ ಸಂಭ್ರಮದಲ್ಲಿ ವೈಶಾಖ ಅಲಿಯಾಸ್ ಐಶ್ವರ್ಯ ಸಾಲಿಮಠ..!
ರಾಮಾಚಾರಿ ಧಾರಾವಾಹಿಯ ನಟಿ ಐಶ್ವರ್ಯ ಸಾಲಿಮಠ ಅವರ ಹುಟ್ಟು ಹಬ್ಬದ ಹಿನ್ನೆಲೆ ನಟಿ ಮೌನ ಗುಡ್ಡೆ ಮನೆ ಸೇರಿದಂತೆ ಹಲವು ಕಲಾವಿದರು ವಿಷ್ ಮಾಡಿ, ಶುಭ ಹಾರೈಸಿದ್ದಾರೆ. ಐಶ್ವರ್ಯ ಅವರು ಹಲವು ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿಯೂ ನಟಿಸಿದ್ದ ಐಶ್ವರ್ಯ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾಸಿಟಿವ್ ಜೊತೆಗೆ ನೆಗೆಟಿವ್ ರೋಲ್ ಗಳನ್ನು ಮಾಡುವ ನಟಿ, ಹೆಚ್ಚಾಗಿ ವಿಲನ್ ಲುಕ್ ನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಅತ್ತಿಗೆ ಪಾತ್ರ ಮಾಡುತ್ತಿದ್ದಾರೆ.

ಧಾರಾವಾಡದ ನಟಿ ಐಶ್ವರ್ಯ ಸಾಲಿಮಠ..!
ರಾಮಾಚಾರಿ ಧಾರಾವಾಹಿಯಲ್ಲಿ ರಾಮಚಾರಿಯ ಅಣ್ಣನ ಹೆಂಡತಿ ವೈಶಾಖ ಪಾತ್ರದಲ್ಲಿ ಇವರು ನಟಿಸಿದ್ದರು. ಇಲ್ಲಿಯೂ ಕೂಡ ಐಶ್ವರ್ಯ ಅವರದ್ದು ವಿಲನ್ ಪಾತ್ರವಾಗಿತ್ತು. ಇನ್ನೂ ಐಶ್ವರ್ಯಾ ಸಾಲಿಮಠ ಮೂಲತಃ ಧಾರಾವಾಡದವರು. ನಟನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ಕಾರಣ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ.
ಮಹಾಸತಿ ಧಾರಾವಾಹಿ ಮೂಲಕ ನಟಿ ಐಶ್ವರ್ಯ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಸರಯೂ, ಸೇವಂತಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ನಟಿ ಐಶ್ವರ್ಯ ಅವರು ಬಣ್ಣ ಹಚ್ಚಿದ್ದಾರೆ. ಬಳಿಕ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ತಂಗಿ ತನು ಆಗಿ ವಿಲನ್ ಪಾತ್ರದಲ್ಲಿ ನಟಿಸಿದರು. ಜೇನುಗೂಡು ಧಾರಾವಾಹಿಯಲ್ಲಿ ಸುಮಿಯ ಪಾತ್ರ ನಿರ್ವಹಿಸಿದ್ದರು.

ಐಶ್ವರ್ಯ ಅವರ ವ್ಯೆಯಕ್ತಿಕ ಬದುಕು..!
ಉತ್ತರ ಕರ್ನಾಟಕದ ಐಶ್ವರ್ಯಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದ್ದಾರೆ. ಮಾಡ್ರನ್ ಡ್ರೆಸ್ ಗಳಿಗೂ ಪೋಸ್ ಕೊಟ್ಟಿರುವ ಐಶ್ವರ್ಯಾ, ಟ್ರೆಡಿಷನಲ್ ಡ್ರೆಸ್ ಗೂ ಸೈ ಎನ್ನುತ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ವೆರೈಟಿ ವೆರೈಟಿ ಫೋಟೋಗಳು ಕಣ್ಣಿಗೆ ಬೀಳುತ್ತವೆ.
ಎಲ್ಲಾ ಡ್ರೆಸ್ ನಲ್ಲೂ ಮುದ್ದು ಮುದ್ದಾಗಿ ಕಾಣುತ್ತಾರೆ. ಐಶ್ವರ್ಯಾ ಸಾಲಿಮಠ ಅವರಿಗೆ 111 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್ ಇದ್ದಾರೆ. 2022 ರಲ್ಲಿ ನಟ ವಿನಯ್ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಹುಡುಗ ವಿನಯ್ ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದು, ಬಳಿಕ ಮನೆಯವರ ಒಪ್ಪಿಗೆಯೊಂದಿಗೆ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು.

ಬಣ್ಣದ ಲೋಕದ ಪತಿ-ಪತ್ನಿ..!
ನಟ ವಿನಯ್ ಅವರು ಮಹಾದೇವಿ ಧಾರಾವಾಹಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಮಹಾಸತಿ ಧಾರಾವಾಹಿಯಲ್ಲೂ ಅದ್ಭುತವಾಗಿ ನಟಿಸಿದ್ದರು. ಗಂಡ ಹೆಂಡತಿ ಇಬ್ಬರು ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಐಶ್ವರ್ಯ ಅವರು ಪರಭಾಷೆಯಲ್ಲೂ ನಟಿಸಿದ್ದಾರೆ.
ತಮಿಳಿನ ರಾಜ್ ಟಿವಿಯಲ್ಲಿ ನಟಿ ಐಶ್ವರ್ಯ ಅವರು ಅನಂತಿ ಎಂಬ ಧಾರಾವಾಹಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಇನ್ನು ಪತಿ ಹಾಗೂ ಐಶ್ವರ್ಯ ಇಬ್ಬರೂ ಒಂದೇ ಫೀಲ್ಡ್ ನಲ್ಲಿದ್ದು, ಇಬ್ಬರಿಗೂ ಕಾಮನ್ ಗೆಳೆಯರಿದ್ದಾರೆ. ಆಗಾಗ ಪ್ರವಾಸಗಳನ್ನು ಮಾಡುತ್ತಿರುತ್ತಾರೆ.

ಹ್ಯಾಪಿ ಬರ್ತ ಡೇ ಐಶೂ..!
ಇನ್ನು ಇಂದು ಹುಟ್ಟುಹಬ್ಬವಾಗಿರುವುದರಿಂದ ಪತಿ ಹಾಗೂ ದೀರ್ಘಕಾಲದ ಸ್ನೇಹಿತರ ಜೊತೆಗೆ ಬರ್ತಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಕೇಕ್ ಕಟ್ ಮಾಡಿ ಪಾರ್ಟಿ ಮಾಡಿರುವ ಐಶ್ವರ್ಯ ಅವರು ಪತಿಗೆ ಲಿಪ್ ಕಿಸ್ ಕೊಟ್ಟಿದ್ದಾರೆ.
ಈ ವೀಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಕಳೆದ ವೀಕೆಂಡ್ ನಲ್ಲೇ ದಂಪತಿಗಳಿಬ್ಬರೂ ಕೇರಳದ ವಯನಾಡು ನಲ್ಲಿ ಎಂಜಾಯ್ ಮಾಡಿದ್ದಾರೆ. ಪ್ರವಾಸದ ವೇಳೆ ತೆಗೆಸಿಕೊಂಡ ಫೋಟೋಗಳನ್ನು ಕೂಡ ಐಶ್ವರ್ಯ ಅವರು ಶೇರ್ ಮಾಡಿದ್ದಾರೆ.


Click it and Unblock the Notifications











