ಬಿಗ್‌ಬಾಸ್ ಬಳಿಕ 'ಬಾಯ್ಸ್ Vs ಗರ್ಲ್ಸ್' ಅಂತಿರೋ ನಟಿ ಐಶ್ವರ್ಯಾ ಶಿಂಧೋಗಿ

By ಅನಿತಾ ಬನಾರಿ

ಬಿಗ್ ಬಾಸ್ ನಂತರ ಹೊಸ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು. ಹೌದು, ಬಿಗ್ ಬಾಸ್ ಸೀಸನ್ 11 ಇನ್ನೇನು ಫಿನಾಲೆ ದಿನದೆಡೆಗೆ ಸಾಗುತ್ತಿದೆ. ಅಷ್ಟರಲ್ಲೇ ಹೊಸ ರಿಯಾಲಿಟಿ ಶೋ ಒಂದು ಆರಂಭವಾಗುವುದಾಗಿ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಕೂಡ ಬಿಟ್ಟಿದೆ. ಮಾತ್ರವಲ್ಲ ಸ್ಪರ್ಧಿಗಳ ಹೆಸರನ್ನು ಕೂಡಾ ಅನೌನ್ಸ್ ಮಾಡಲಾಗಿದೆ.

ಬಿಗ್ ಬಾಸ್ ಸೀಸನ್ 11ರಲ್ಲಿ ಯಾವೆಲ್ಲಾ ಸ್ಪರ್ಧಿಗಳಿದ್ದರು ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ. ಒಂದಷ್ಟು ಜನ ಕ್ರಮೇಣ ಸೀಸನ್ ಇಂದ ಎಲಿಮಿನೇಟ್ ಆಗಿ ಇದೀಗ ಫಿನಾಲೆಗೆ ಕೆಲವೇ ಜನ ದೊಡ್ಡ ಮನೆಯಲ್ಲಿದ್ದಾರೆ.

Actress Aishwarya Shindhogi in a new reality show Boys Vs Girls

ಹೀಗಿರುವಾಗಲೇ ಬಿಗ್ ಬಾಸ್ ಹನ್ನೊಂದರ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ಹೊಸ ರಿಯಾಲಿಟಿ ಶೋ ಬರಲಿದೆ ಎಂಬುದು ಈಗಾಗಲೇ ವಾಹಿನಿ ವೀಕ್ಷಕರಿಗೆ ತಿಳಿದಿರುವ ವಿಚಾರ. 'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ಈ ಹೊಸ ರಿಯಾಲಿಟಿ ಶೋ ನಲ್ಲಿ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಐಶ್ವರ್ಯಾ ಶಿಂಧೋಗಿ ಕಾಣಿಸಿಕೊಳ್ಳಲಿದ್ದಾರೆ.

'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ರಿಯಾಲಿಟಿ ಶೋ ನ ಪ್ರೊಮೋ ಈಗಾಗಲೇ ಬಿಡುಗಡೆಯಾಗಿದ್ದು ಫೆಬ್ರವರಿ 1ರಿಂದ ಈ ಹೊಸ ರಿಯಾಲಿಟಿ ಶೋ ತೆರೆ ಮುಂದೆ ಬರಲಿದೆ. ಈ ಶೋ ನ ಪ್ರೊಮೋ ದಲ್ಲಿ ನಟಿ ಐಶ್ವರ್ಯಾ ಶಿಂಧೋಗಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ನಟಿ ಐಶ್ವರ್ಯಾ ಶಿಂಧೋಗಿ 'ನಾಗಿಣಿ 2' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ಬಿಗ್ ಬಾಸ್ ಸೀಸನ್ ಹನ್ನೊಂದಕ್ಕೆ ಬಂದ ನಂತರ ಕನ್ನಡ ಜನಮನ ಗೆದ್ದಿದ್ದಲ್ಲದೆ ಕರ್ನಾಟಕದ ಮನೆಮಗಳು ಎಂದೆನಿಸಿಕೊಂಡರು. ಬಿಗ್ ಮನೆಯಲ್ಲಿ ಇವರ ಆಟ ನಡೆ ನುಡಿ ಜೊತೆಗೆ ಇವರ ಡ್ರೆಸ್ಸಿಂಗ್ ಸೆನ್ಸ್ ಬಹಳಷ್ಟು ಗಮನ ಸೆಳೆದಿತ್ತು.

ಅಸಲಿಗೆ ಬಾಲ ನಟಿಯಾಗಿ ನಟನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಐಶ್ವರ್ಯ ಶಿಂಧೋಗಿ 2004ರ ಸಿಂಹಾದ್ರಿ ಸಿನಿಮಾದಲ್ಲಿ ಮೊದಲು ನಟಿಸಿದ್ದು. 2015ರ ನಂತರ "ಜಾಕ್ಸನ್", 'ರಣತಂತ್ರ', 'ಸಪ್ನೋಂಕಿ ರಾಣಿ', 'ಮಮ್ಮಿ ಸೇವ್ ಮಿ', 'ಮಟಾಷ್' ಮುಂತಾದ ಸಿನಿಮಾಗಳಲ್ಲಿ ನಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು.

ನಟನೆ ಅಷ್ಟೇ ಮಹಿಳಾ ಸಬಲೀಕರಣದ ಕುರಿತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ ನಟಿ ಐಶ್ವರ್ಯಾ ಶಿಂಧೋಗಿ. 'ನಾಗಿಣಿ 2' ಧಾರಾವಾಹಿ ಮೂಲಕ ಕಿರುತೆರೆ ಜನರ ಮನ ಗೆದ್ದ ಇವರು ಬಿಗ್ ಬಾಸ್ ಸೀಸನ್ 11ರಲ್ಲಿ ಬರೋಬ್ಬರಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು.

ಇದೀಗ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಹೊಸ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಶಿಂಧೋಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗಂತೂ ಬಹಳ ಸಂತೋಷ ತಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಐಶ್ವರ್ಯ ಶಿಂಧೋಗಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಆಗಾಗ ತಮ್ಮ ವೃತ್ತಿ ಬದುಕಿನ ಬಗೆಗಿನ ಬಹಳಷ್ಟು ಅಪ್ ಡೇಟ್‌ಗಳನ್ನು ನೀಡುತ್ತಿರುತ್ತಾರೆ.

'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ವಿಭಿನ್ನ ರಿಯಾಲಿಟಿ ಶೋ ಅನ್ನು ನಟಿ ನಿರೂಪಕಿ ಅನುಪಮಾ ಗೌಡ ಅವರು ನಿರೂಪಿಸಲಿದ್ದಾರೆ. ಜಿಗರ್ ಇರೋ ಹುಡುಗ ಹುಡುಗಿಯರ ಜಿದ್ದಾಜಿದ್ದಿ ಎಂಬ ಸಬ್ ಟೈಟಲ್‌ನ ಈ ಶೋ ಯಾವ ರೀತಿ ಜನಮನ ರಂಜಿಸಲಿದೆ, ಹಾಗೂ ನಟಿ ಐಶ್ವರ್ಯ ಶಿಂಧೋಗಿ ಸೇರಿದಂತೆ ಇತರ ಸ್ಪರ್ಧಿಗಳು ಯಾವೆಲ್ಲ ರೀತಿಯಲ್ಲಿ ಜನರ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Actress Aishwarya Shindhogi in a new reality show Boys Vs Girls;
Read more about: actress reality show tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X