Aishwarya Shindhogi: ಕಿರುತೆರೆಯ ಮಾಯಾಂಗನೆ ಧಾರಾವಾಹಿಗಳಲ್ಲಿ ಫುಲ್ ಬ್ಯುಸಿ.. ಐಶ್ವರ್ಯ ಶಿಂಧೋಗಿ ಈಗ ಶಿವಗಾಮಿ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಶಾಂಭವಿ'ಯಲ್ಲಿ ಶಾಂಭವಿಯ ತಾಯಿಯಾಗಿ ನಟಿಸುತ್ತಿದ್ದಾರೆ ನಟಿ ಐಶ್ವರ್ಯ ಶಿಂಧೋಗಿ. 'ಶಾಂಭವಿ' ಧಾರಾವಾಹಿಯಲ್ಲಿ ಶಿವಗಾಮಿ ಎನ್ನುವ ಪಾತ್ರಕ್ಕೆ ಜೀವ ತುಂಬುತ್ತಿರುವ ಐಶ್ವರ್ಯ ಶಿಂಧೋಗಿ ಪವರ್‌ಫುಲ್ ಲೇಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸ್ಕೂಲ್, ಕಾಲೇಜು ಮತ್ತೆ ಹಾಸ್ಪಿಟಲ್ ನ ಚೇರ್ ಮ್ಯಾನ್ ಆಗಿರುವಂತಹ ಶಾಂಭವಿ ಯಾವತ್ತಿಗೂ ತನ್ನ ಸಂಸ್ಕೃತಿಯನ್ನು ಮರೆತಿರುವುದಿಲ್ಲ.
ತುಂಬಾ ಎಜುಕೇಟೆಡ್ ಆಗಿರುವ ಶಿವಗಾಮಿ ಉಳಿದವರಿಗೆ ಸ್ಪೂರ್ತಿದಾಯಕ ಎಂದೆನಿಸುವಂತಹ ಮಹಿಳೆ. ದಿನನಿತ್ಯದ ಜೀವನದಲ್ಲಿ ಎದುರಾಗಿರುವಂತಹ ಚಾಲೆಂಜ್‌ಗಳನ್ನು ಆಕೆ ಹೇಗೆ ಎದುರಿಸುತ್ತಾಳೆ? ಎಲ್ಲವನ್ನು ಆಕೆ ಹೇಗೆ ನಿಭಾಯಿಸುತ್ತಾಳೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಒಟ್ಟಿನಲ್ಲಿ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಐಶ್ವರ್ಯ ಅಂತೂ ಸಖತ್ ಖುಷಿಯಲ್ಲಿದ್ದಾರೆ.

ದೀಪಿಕಾ ಆಗಿಯೂ ಈಕೆ ಬ್ಯುಸಿ
'ಶಾಂಭವಿ' ಧಾರಾವಾಹಿಯ ಹೊರತಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯ. ಧಾರಾವಾಹಿಯ ಆರಂಭದಲ್ಲಿ ಸಾರಾ ಅಣ್ಣಯ್ಯ ಈ ಪಾತ್ರದಲ್ಲಿ ನಟಿಸುತ್ತಿದ್ದು ಮುಂದೆ ಅವರು ತಮ್ಮ ಪಾತ್ರಕ್ಕೆ ವಿದಾಯ ಹೇಳಿದ ಕಾರಣ ಐಶ್ವರ್ಯ ಆಕೆಯ ಜಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಯಾಂಗನೆಯಾಗಿ ಕಿರುತೆರೆಗೆ ಎಂಟ್ರಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'ರಲ್ಲಿ ಮಾಯಾಂಗನೆ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ತಂಗಿ ಐಶ್ವರ್ಯ ಆಗಿ ಅಭಿನಯಿಸಿದ್ದರು. ಇವೆರಡೂ ಧಾರಾವಾಹಿಗಳಲ್ಲಿ ಈಕೆಗೆ ದೊರಕಿದ್ದು ಖಳನಾಯಕಿ ಪಾತ್ರ!
ರಿಯಾಲಿಟಿ ಶೋ ವಿನಲ್ಲೂ ಭಾಗಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್ಸ್' ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡ ಐಶ್ವರ್ಯ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದೀಗ 'ನಮ್ಮ ಲಚ್ಚಿ' ಜೊತೆಗೆ 'ಶಾಂಭವಿ' ಧಾರಾವಾಹಿಯಲ್ಲಿಯೂ ನಟಿಸುತ್ತಿರುವ ಈಕೆ 'ಸಿಂಹಾದ್ರಿ' ಸಿನಿಮಾದಲ್ಲಿ ಬಾಲನಟಿಯಾಗಿಯೂ ಮೋಡಿ ಮಾಡಿರುವ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಸಿನಿಮಾಗಳಲ್ಲಿಯೂ ನಟನೆ
'ಜಾಕ್ಸನ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಿದ ಐಶ್ವರ್ಯ ಮುಂದೆ 'ಸಪ್ನೋ ಕಿ ರಾಣಿ', 'ರಣತಂತ್ರ', 'ಮಮ್ಮಿ: ಸೇವ್ ಮಿ', 'ಚಿನ್ನಾರಿ' ಮತ್ತು 'ಸಂಯುಕ್ತ 2' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











