Aishwarya Shindogi: ರವಿವರ್ಮನ ಕುಂಚದ ಕಲೆಗೆ ಜೀವ ತಂದ ನಟಿ ಮಾಯಾಂಗನೆ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'ರಲ್ಲಿ ನಾಗಿಣಿ ಮಾಯಾಂಗನೆ ಆಗಿ ಅಭಿನಯಿಸಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ನಟಿ ಐಶ್ವರ್ಯ ಶಿಂಧೋಗಿ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ಬಹಳಷ್ಟು ವೈರಲ್ ಆಗಿದ್ದಾರೆ.
ಇನ್‌ಸ್ಟಾಗ್ರಾಂ ಹಾಗೂ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ನಟಿ ಐಶ್ವರ್ಯಾ ಆಗಾಗ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಆದರೆ ಇತ್ತೀಚೆಗಷ್ಟೇ ಅವರು ಶೇರ್ ಮಾಡಿದ ಒಂದು ಪೋಸ್ಟ್ ಬಹಳ ಟ್ರೆಂಡಿಂಗ್ ಆಗಿದ್ದು ಬಹಳ ಪ್ರಶಂಸೆಗೆ ಕಾರಣವಾಗಿದೆ.

ರವಿವರ್ಮನ ಕಲೆಗೆ ಜೀವ ತಂದ ಐಶ್ವರ್ಯಾ
ಖ್ಯಾತ ಚಿತ್ರಕಲೆಗಾರ ರವಿವರ್ಮ ಅವರ ಕುಂಚದಲ್ಲಿ ಅದ್ಭುತವಾಗಿ ಮೂಡಿ ಬಂದ ಪದುಕೊಟ್ಟೈನ ರಾಣಿಯ ಹಾಗೆ ತಮ್ಮನ್ನು ತಾವು ಸಿಂಗರಿಸಿಕೊಂಡು ಪೋಸ್ ಕೊಟ್ಟಿರುವ ಐಶ್ವರ್ಯಾ ಅವರು ಇದೀಗ ಬಹಳ ಟ್ರೇಡಿಂಗಲ್ಲಿದ್ದಾರೆ.
ಜಾನಕಿ ಸುಬ್ಬಮ್ಮ ಬಾಯಿ ಸಾಹಿಬ್, ಪದುಕೋಟೈನ ರಾಣಿಯ ಚಿತ್ರದ ಹಾಗೆ ಅಲಂಕಾರ ಮಾಡಿಕೊಂಡ ಐಶ್ವರ್ಯಾ ಸೀರೆಯಿಂದ ಹಿಡಿದು ಆಭರಣಗಳನ್ನು ಹೆಚ್ಚು ಕಮ್ಮಿ ಅದೇ ರೀತಿ ಮ್ಯಾಚ್ ಮಾಡಿ ಅದ್ಬುತವಾಗಿ ಪೋಸ್ ಕೊಟ್ಟಿದ್ದಾರೆ. ಈ ವಿಶೇಷ ಚಿತ್ರ ಇದೀಗ ಎಲ್ಲೆಡೆ ಹಂಚಿಕೊಂಡಿದ್ದು, ಈ ರೀತಿ ನಟಿಯನ್ನು ನೋಡಿ ನೆಟ್ಟಿದರು ಸಂಭ್ರಮ ಹಾಗೂ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
ಬೆಳ್ಳಿತೆರೆಯ ಮೂಲಕ ಬಣ್ಣದ ನಂಟಿನ ಪಯಣ
ಕನ್ನಡ ಬೆಳ್ಳಿತೆರೆಯಲ್ಲಿ 'ಮಮ್ಮಿ ಸೇವಿ ಮಿ ', 'ಸಪ್ನೋ ಕಿ ರಾಣಿ', ಇತ್ಯಾದಿ ಸಿನಿಮಾಗಳಲ್ಲಿ ಕಾಣಿಸಿಕೊಂಡ ಇವರು ನಾಗಿಣಿ 2 ನಲ್ಲಿ ಮುಖ್ಯ ಪಾತ್ರ ಮಾಯಂಗನೆಯಾಗಿ ನಟಿಸುವ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಅಷ್ಟೇ ಅಲ್ಲದೆ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲೂ ಒಂದು ಪಾತ್ರವನ್ನು ಮಾಡಿ ಸೈ ಎನಿಸಿಕೊಂಡ ಇವರು ಸದ್ಯಕ್ಕೆ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು.

ಒಟ್ಟಿನಲ್ಲಿ ತಮ್ಮ ಹೊಸ ಹೊಸ ಗೆಟಪ್ ಒಂದನ್ನು ಹಂಚಿಕೊಂಡ ಇವರು ಬಹಳಷ್ಟು ಪ್ರಶಂಸೆಗೆ ಕಾರಣವಾಗಿದ್ದು ಫೋಟೋ ಹೆಚ್ಚು ಕಮ್ಮಿ ರವಿವರ್ಮ ಅವರ ಚಿತ್ರಕ್ಕೆ ಸಮನಾಗಿರುವುದು ಎಲ್ಲರಿಗೂ ಖುಷಿ ತಂದಿದೆ.


Click it and Unblock the Notifications











