"ನಮ್ಮ ಲಚ್ಚಿ ಸೆಟ್‌ನಲ್ಲಿ ನನ್ನ ಕೊನೆಯ ದಿನ"; ಧಾರಾವಾಹಿಗೆ ವಿದಾಯ ಹೇಳಿದ ನಟಿ ಐಶ್ವರ್ಯಾ ಸಿಂಧೋಗಿ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿ ಮುಕ್ತಾಯಗೊಂಡಿರುವುದು ಇದೀಗ ಎಲ್ಲರಿಗೂ ತಿಳಿದ ವಿಚಾರ. ಈ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡ ನಟಿ ಐಶ್ವರ್ಯಾ ಸಿಂಧೋಗಿ ಈ ಸುಂದರ ಪಯಣದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಈ ವಿಚಾರವಾಗಿ ವಿಡಿಯೋವೊಂದನ್ನು ಕೂಡಾ ಐಶ್ವರ್ಯಾ ಸಿಂಧೋಗಿ ಶೇರ್ ಮಾಡಿಕೊಂಡಿದ್ದಾರೆ.
ಹೌದು, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿರುವ ಈಕೆ, ಕೊನೆಯ ದಿನದ ಶೂಟಿಂಗ್‌ನ ಕೆಲ ತುಣುಕುಗಳನ್ನು ಹಾಕಿದ್ದಾರೆ. "ನಮ್ಮ ಲಚ್ಚಿ ಸೆಟ್‌ನಲ್ಲಿ ನನ್ನ ಕೊನೆಯ ದಿನ. ಭಾವನೆಗಳು ಉಕ್ಕಿ ಹರಿಯುತ್ತಿದ್ದವು. ನಾನು ದೀಪಿಕಾಳಾಗಿ ನನ್ನ ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದೆ. ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ" ಎಂದು ನಟಿ ಐಶ್ವರ್ಯಾ ಸಿಂಧೋಗಿ ಬರೆದುಕೊಂಡಿದ್ದಾರೆ.

ಜೊತೆಗೆ ಧಾರಾವಾಹಿಯ ತಮ್ಮ ಸಹ ಕಲಾವಿದರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ, ಸ್ಟಾರ್ ಸುವರ್ಣ ವಾಹಿನಿಗೆ ಹಾಗೆಯೇ ತಂತ್ರಜ್ಞಾನ ಕಲಾವಿದರಿಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ನಟಿ ಐಶ್ವರ್ಯ ಸಿಂಧೋಗಿ ಹೇಳಿದ್ದಾರೆ.
ನಟಿ ಐಶ್ವರ್ಯಾ ಸಿಂಧೋಗಿ, ಸಂಗಮ್ ಹೆಂಡತಿ ದೀಪಿಕಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಖಳನಾಯಕಿಯಾಗಿ ಕಾಣಿಸಿಕೊಂಡ ಆಕೆ ಆ ಪಾತ್ರದ ಮೂಲಕ ಬಹಳಷ್ಟು ಹೆಸರು ಮಾಡಿದರು. ಅಸಲಿಗೆ, ಈ ಧಾರಾವಾಹಿ ಆರಂಭವಾದಾಗ ನಟಿ ಸಾರಾ ಅವರು ದೀಪಿಕಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಕಾರಣಾಂತರಗಳಿಂದ ಆಕೆ ಧಾರಾವಾಹಿಯಿಂದ ಹೊರ ನಡೆದ ಮೇಲೆ ಐಶ್ವರ್ಯಾ ಸಿಂಧೋಗಿಯವರು ಈ ಪಾತ್ರವನ್ನು ಕೈಗೆತ್ತಿಕೊಂಡರು. ಕೆಲವೇ ಸಮಯದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮತ್ತೆ ಜನರ ಮನ ಗೆದ್ದು ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದರು.

ಖಳನಾಯಕಿ ಪಾತ್ರವಾದರೂ ಕಿರುತೆರೆ ಪ್ರೇಕ್ಷಕರಿಂದ ಬಹಳಷ್ಟು ಪ್ರೀತಿಯನ್ನು ಪಡೆದ ನಟಿ ಈಕೆ. ತಾವು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ 'ನಮ್ಮ ಲಚ್ಚಿ' ಸೀರಿಯಲ್ ಸೆಟ್‌ನ ತಮ್ಮ ಕೊನೆ ದಿನದ ಗಳಿಗೆಗಳನ್ನು ಸೆರೆ ಹಿಡಿದಿದ್ದಾರೆ. ವಿಡಿಯೋ ಬಹಳ ಭಾವನಾತ್ಮಕವಾಗಿದೆ ಎಂದು ಪ್ರೇಕ್ಷಕರು ಹಾಗೂ ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.
ಬಹಳಷ್ಟು ಧಾರಾವಾಹಿಗಳಲ್ಲಿ ಈಗಾಗಲೇ ನಟಿಸಿರುವ ನಟಿ ಐಶ್ವರ್ಯಾ ಸಿಂಧೋಗಿ ಅವರು, ಬಹಳಷ್ಟು ಜನಪ್ರಿಯತೆ ಪಡೆದರು. ಮುಂದೆ ಯಾವ ಧಾರಾವಾಹಿಯನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬುದು ಪ್ರೇಕ್ಷಕರ ಹಾಗೂ ಅಭಿಮಾನಿಗಳ ಕುತೂಹಲವಾಗಿದೆ.


Click it and Unblock the Notifications











