ತೆಲುಗು ಕಿರುತೆರೆಯಲ್ಲಿ ಕನ್ನಡ ನಟಿಯದ್ದೇ ದರ್ಬಾರ್; ಪಕ್ಕದ ರಾಜ್ಯಕ್ಕೆ ಜಿಗಿದ ಮತ್ತೊಬ್ಬ ನಟಿ
ಕನ್ನಡ ಕಿರುತೆರೆಯಂತೆಯೇ ತೆಲುಗು ಕಿರುತೆರೆಯಲ್ಲಿ ಹಲವಾರು ಇಂಟರೆಸ್ಟಿಂಗ್ ಧಾರಾವಾಹಿಗಳಿವೆ. ಅಲ್ಲದೆ ಕನ್ನಡ ಹಾಗೂ ತೆಲುಗು ಭಾಷೆ ಬಹಳಷ್ಟು ಸಾಮ್ಯತೆಯನ್ನು ಹೊಂದಿದೆ. ಈ ಕಾರಣದಿಂದಲೂ ಏನೋ ಅದೆಷ್ಟೋ ಕನ್ನಡ ನಟ ನಟಿಯರು ತೆಲುಗು ಮಿಂಚುತ್ತಿದ್ದಾರೆ.
ಹೌದು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಅದೆಷ್ಟೋ ನಟಿಯರಿಗೆ ತೆಲುಗು ಕಿರುತೆರೆ ಕೈಬೀಸಿ ಕರೆಯುತ್ತಿದೆ. ನಟಿಯರಾದ ರಶ್ಮಿ ಪ್ರಭಾಕರ್, ಅಂಕಿತ ಅಮರ್, ಪವಿತ್ರ, ಜಯಶ್ರೀ, ಜ್ಯೋತಿ ರೈ ಮುಂತಾದವರು ತೆಲುಗು ಕಿರುತೆರೆ ವೀಕ್ಷಕರ ಮನ ಗೆದ್ದಿರುವುದಂತೂ ನಿಜ.

ಇದೀಗ ಈ ಲಿಸ್ಟ್‌ಗೆ ಮತ್ತೊಬ್ಬ ನಟಿ ಸೇರಿರುವುದು ವಿಶೇಷ! ಹೌದು ಅಪ್ಪಟ ಕನ್ನಡತಿ ನಟಿ ಅಕ್ಷತಾ ದೇಶಪಾಂಡೆ ತೆಲುಗು ಕಿರುತೆರೆಗೆ ಕಾಲಿಡುತ್ತಿದ್ದಾರೆ. 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಕೃತಿಯಾಗಿ ನಟಿಸಿದ್ದ ಅಕ್ಷತಾ ದೇಶಪಾಂಡೆ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಚೆಲುವೆ. 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.
ಧಾರಾವಾಹಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಕಂ ಬ್ಯಾಕ್ ಬಗ್ಗೆ ಸಂತಸದ ವಿಚಾರವನ್ನು ನಟಿ ಅಕ್ಷತಾ ದೇಶಪಾಂಡೆ ಹಂಚಿಕೊಂಡಿದ್ದಾರೆ . ಇದೀಗ ತೆಲುಗು ಧಾರಾವಾಹಿ ಒಂದರಲ್ಲಿ ಮತ್ತೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ನಿನ್ನು ಕೋರಿ' ಎಂಬ ತೆಲುಗು ಧಾರಾವಾಹಿಯಲ್ಲಿ ನಟಿ ಅಕ್ಷತಾ ದೇಶಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. 'ನಿನ್ನು ಕೋರಿ' ಧಾರಾವಾಹಿಗೆ ಬಹಳಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುವ ನಟಿ ಅಕ್ಷತಾ ದೇಶಪಾಂಡೆ ತಮ್ಮ ತೆಲುಗು ಭಾಷೆಯನ್ನು ಕಲಿತಿದ್ದಾರೆಂದು ಕೇಳಿಬಂದಿದೆ.

ಈ ಧಾರಾವಾಹಿಯಲ್ಲಿ ಚಂದ್ರಕಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಅಕ್ಷತಾ ದೇಶಪಾಂಡೆ, ತೆಲುಗು ಪ್ರೇಕ್ಷಕರಿಗೆ ಇಷ್ಟ ಆಗುತ್ತಾರಾ ಎಂಬುದನ್ನು ನೋಡಬೇಕಿದೆ. 'ನಿನ್ನು ಕೋರಿ' ಧಾರವಾಹಿಯಲ್ಲಿ ಚಂದ್ರಕಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಇವರು ಈಗಾಗಲೇ ಪ್ರೊಮೋ ಮೂಲಕ ಬಹಳಷ್ಟು ಸದ್ದು ಮಾಡಿದ್ದಾರೆ. ಅಪ್ಪನೇ ಸರ್ವಸ್ವ ಎನ್ನುವ ಚಂದ್ರಕಲಾ ಗೆ ತಂದೆಯೇ ಇಲ್ಲ. ಆದರೆ ಸದಾ ತಂದೆಯ ಹೆಸರನ್ನು ಉಳಿಸುವ ಛಲ ಆಕೆಗೆ.
ಯಾರು ಏನು ಎಂದು ನೋಡದೆ ತಪ್ಪು ಮಾಡಿದವರನ್ನು ದಭಾಯಿಸಿಕೊಂಡಿರುವ ಈಕೆಯ ಈ ಸ್ವಭಾವ ದೊಡ್ಡಪ್ಪನಿಗೆ ಯಾಕೋ ಹಿಡಿಸುವುದಿಲ್ಲ. ಹೆಣ್ಣು ಮಕ್ಕಳು ನಯ ನಾಜೂಕಿನಿಂದ ಇರಬೇಕು ಬದಲಾಗಿ ಗಂಡಸರಿಗೆ ಸರಿ ಸಮಾನವಾಗಿರಬಾರದು ಎಂಬ ಮನಸ್ಥಿತಿಯ ದೊಡ್ಡಪ್ಪನ ಆಶ್ರಯದಲ್ಲಿರುವ ಚಂದ್ರಕಾಲ ಹೇಗೆ ತನ್ನ ಜೀವನವನ್ನು ಸಾಗಿಸುತ್ತಾಳೆ ಎಂಬುದು ಈ ಧಾರವಾಹಿಯ ಕಥಾಹಂದರವಾಗಿದೆ.
ಕನ್ನಡದ ಜೊತೆಗೆ ತೆಲುಗು ಕಿರತೆರೆಯಲ್ಲಿ ನಟನಾ ಕಂಪನ್ನು ಪಸರಿಸಲು ಸಿದ್ಧರಾಗಿರುವ ಅಕ್ಷತಾ ದೇಶಪಾಂಡೆ ಈಗಾಗಲೇ ತಮಿಳು ಕಿರುತೆರೆಯಲ್ಲಿ ನಟಿಸಿದ್ದಾಗಿದೆ. ಹೌದು, ತಮಿಳಿನ 'ಅನಾಮಿಕ' ಎನ್ನುವ ಧಾರಾವಾಹಿಯಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದು ಅಲ್ಲಿ ವೀಕ್ಷಕರ ಮನ ಸೆಳೆಯುತ್ತಾರಾ ಎಂದು ನೋಡಬೇಕಾಗಿದೆ.


Click it and Unblock the Notifications











