ಕಾಲಿವುಡ್‌ಗೆ ಕಾಲಿಟ್ಟ ಕೊಡಗಿನ ಕುವರಿ; ಈ ನಟಿ ಬಗ್ಗೆ ನಿಮಗೇನು ಗೊತ್ತು?

By ಅನಿತಾ ಬನಾರಿ

ಇಂದಿನ ಸಿನಿ ಟ್ರೆಂಡ್ ಪ್ರತಿ ದಿನಕ್ಕೂ ಹೊಸ ಹೊಸ ರೀತಿಯಲ್ಲಿ ಬದಲಾಗುತ್ತಿರುತ್ತದೆ. ಪ್ಯಾನ್ ಇಂಡಿಯಾ ಇವತ್ತು ಬಹಳ ಟ್ರೆಂಡಿಂಗ್ ವಿಚಾರ. ಹೇಗೆ ಒಂದು ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಪ್ರೇಕ್ಷಕರಿಗೆ ಸಿಗುತ್ತದೋ ಅದೇ ರೀತಿ ನಟ, ನಟಿಯರು ಕೂಡ ಒಂದೇ ಭಾಷೆಗೆ ಸೀಮಿತವಾಗದೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ.

ಇದೀಗ ಕೊಡಗಿನ ಕುವರಿ ನಟಿ ಅಕ್ಷಿತಾ ಬೋಪಯ್ಯ ಅವರು ಕನ್ನಡ ಭಾಷೆಯಲ್ಲದೆ ತಮಿಳು ಸಿನಿ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ಹೌದು, ಈಗಾಗಲೇ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ನಟಿ ಅಕ್ಷಿತಾ ಬೋಪಣ್ಣ ಅವರು ತಮಿಳು ಸಿನಿರಂಗದಲ್ಲೂ ಹೆಸರು ಮಾಡುವಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

Actress Akshita Bopaiah is now acting in a Tamil movie after serial

'ತಮಿಳನ್‌ ಸರಸ್ವತಿ', 'ಕಣ್ಣಾನೆ ಕಣ್ಣೇ', 'ಅಳಗು' ಸೇರಿದಂತೆ ನಾಲ್ಕು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದು, ಈ ಮೂಲಕ ತಮಿಳು ಕಿರುತೆರೆ ಪ್ರೇಕ್ಷಕರ ಮನೆಗೆದ್ದಿರುವ ನಟಿ ಅಕ್ಷಿತಾ ಬೋಪಯ್ಯ ಅವರು ಇದೀಗ ಹಿರಿತೆರೆಗೂ ಸಜ್ಜಾಗುತ್ತಿದ್ದಾರೆ.

ಈ ಬಗ್ಗೆ ಸ್ವತ: ನಟಿ ಅಕ್ಷಿತಾ ಬೋಪಯ್ಯ ಅವರೇ ಮಾತನಾಡಿದ್ದು "ನಾನು ಕಳೆದ ಐದು ವರ್ಷಗಳಿಂದ ತಮಿಳು ಕಿರುತೆರೆಯಲ್ಲಿ ಬಹಳ ಬಿಜಿಯಾಗಿದ್ದೇನೆ. ಹೆಚ್ಚು ಕಮ್ಮಿ ನಾಲ್ಕೈದು ಧಾರಾವಾಹಿಗಳಲ್ಲಿ ನಟಿಸಿರುವುದರಿಂದ ಕಿರುತೆರೆ ವೀಕ್ಷಕರ ಪ್ರೀತಿಯ ಅಭಿಮಾನ ನನಗೆ ದೊರಕಿದೆ. ಇದೀಗ ಕಾಲಿವುಡ್‌ನಲ್ಲಿ ಅವಕಾಶ ಸಿಕ್ಕಿರುವುದು ಬಹಳ ಸಂತೋಷದ ವಿಚಾರ. ನನ್ನ ಪ್ರೀತಿಯ ಪ್ರೇಕ್ಷಕರು ನನ್ನ ಮೊದಲ ಸಿನಿಮಾಗೆ ಅವರ ಪ್ರೀತಿಯ ಆಶೀರ್ವಾದವನ್ನು ನೀಡುತ್ತಾರೆ ಎಂದು ನಂಬಿದ್ದೇನೆ. ಈ ಬಗ್ಗೆ ನಾನು ತುಂಬಾ ಎಕ್ಸೈಟೆಡ್ ಆಗಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

"ತಮಿಳು ಕನ್ನಡ ಅಷ್ಟೇ ಅಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರರಂಗದಿಂದಲೂ ನನಗೆ ಆಫರ್‌ಗಳು ಬರುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೌತ್ ಸ್ಟಾರ್ ಆಗಬೇಕೆಂಬುದೇ ನನ್ನ ಆಸೆ. ಈ ನನ್ನ ಕನಸಿಗೆ ತಮಿಳು ಚಿತ್ರರಂಗದಲ್ಲಿ ಸಿಕ್ಕಿರುವ ಈ ಮೊದಲ ಸಿನಿಮಾ ಅವಕಾಶವೇ ಬುನಾದಿ ಎಂದು ನಂಬಿದ್ದೇನೆ" ಎಂದಿದ್ದಾರೆ ನಟಿ ಅಕ್ಷಿತಾ ಬೋಪಯ್ಯ.

Actress Akshita Bopaiah is now acting in a Tamil movie after serial

ಕಾಲಿವುಡ್‌ನಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ನಟಿ ಅಕ್ಷಿತಾ ಬೋಪಣ್ಣ ಅವರು 'ಕರ್ನಾಟಕದ ಅಳಿಯ' ಹಾಗೂ 'ಮಿಸ್ಟರ್ ಅಂಡ್ ಮಿಸಸ್' ಎಂಬ ಎರಡು ಸಿನಿಮಾದ ನಾಯಕ ನಟಿಯಾಗಿದ್ದಾರೆ. 'ಅಂಬಿ ನಿಂಗ್‌ ವಯಸ್ಸಾಯ್ತು', 'ಐ ಲವ್‌ ಯು', 'ಬ್ರಹ್ಮಚಾರಿ', 'ಶಿವಾರ್ಜುನ', 'ತ್ರಿವಿಕ್ರಮ್‌' ಇವು ಸ್ಯಾಂಡಲ್‌ವುಡ್‌ನಲ್ಲಿ ಅಕ್ಷಿತಾ ಬೋಪಯ್ಯ ನಟಿಸಿರುವ ಸಿನಿಮಾಗಳು.

ಸದ್ಯದ ತಮಿಳು ಚಿತ್ರದ ಬಗ್ಗೆ ಮಾತನಾಡಿರುವ ನಟಿ ಅಕ್ಷಿತಾ ಬೋಪಯ್ಯ "ನನಗೆ ತಮಿಳು ಕಿರುತೆರೆಯಲ್ಲಿ ಕೆಲಸ ಮಾಡಿರುವ ಅನುಭವದಿಂದಲೇ ತಮಿಳು ಸಿನಿಮಾದಲ್ಲಿ ಅವಕಾಶ ದೊರಕಿರುವುದು. ಕನ್ನಡದ 'ಸಿದ್ಲಿಂಗು ಟು' ಸಿನಿಮಾ ನಿರ್ಮಿಸಿದ್ದ ಬ್ಯಾನರ್ ನನ್ನ ಮೊದಲ ತಮಿಳು ಚಿತ್ರವನ್ನು ನಿರ್ಮಿಸುತ್ತಿದೆ. ಕಂಟೆಂಟ್ ಬೇಸ್ಡ್ ಸಿನಿಮಾ ಇದಾಗಿರುವುದರಿಂದ ನನ್ನ ಅಭಿನಯಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೋಮ್ಲಿ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ತಮಿಳಿನ ಖ್ಯಾತ ನಟರಾಜ್ ಅಯ್ಯಪ್ಪ ಅವರು ಈ ಸಿನಿಮಾಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ನನ್ನ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡುತ್ತಿದ್ದೇನೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಇಷ್ಟು ಒಳ್ಳೆ ಸಿನಿಮಾದಲ್ಲಿ ನಟಿಸಿರುವುದಕ್ಕೆ ಖುಷಿ ಇದೆ." ಎಂದು ತಮ್ಮ ಮೊದಲ ತಮಿಳು ಚಿತ್ರದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹಂಚಿಕೊಂಡಿದ್ದಾರೆ.

More from Filmibeat

English summary
Actress Akshita Bopaiah is now acting in a Tamil movie after serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X