Drustibottu: ಅಂಬಿಕಾ ಮತ್ತೆ ವಾಪಸ್ ಬಂದ್ರು; ದೃಷ್ಟಿ ಇನ್ಮುಂದೆ ದತ್ತನ ಹೆಂಡತಿಯೇ

By ಎಸ್ ಸುಮಂತ್

ದೃಷ್ಟಿ ತಾನೂ ಯಾವುದೇ ತಪ್ಪು ಮಾಡದೇ ಇದ್ದರು, ಈಗ ಮನೆಯವರ ಮುಂದೆಲ್ಲಾ ತಪ್ಪಿತಸ್ಥೆಯಾಗಿ ನಿಂತಿದ್ದಾಳೆ. ಶರಾವತಿ ಯಾವುದೋ ದ್ವೇಷ ತೀರಿಸಿಕೊಳ್ಳಲು ಹೋಗಿ, ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಿದ್ದಾಳೆ. ದೃಷ್ಟಿ ಮನಸ್ಸಲ್ಲಿ ದತ್ತನ ಬಗ್ಗೆ ಕೂಡ ಪ್ರೀತಿ ಇತ್ತು ನಿಜ. ಆದರೆ ಆ ಪ್ರೀತಿಯನ್ನ ದೃಷ್ಟಿಯ ತಾಯಿ ಚೆನ್ನಮ್ಮನಿಗೂ ಗೊತ್ತಿತ್ತು. ಆದರೂ ಆ ಪ್ರೀತಿಯನ್ನ ತನ್ನೊಳಗೆ ಮುಚ್ಚಿಟ್ಟುಕೊಂಡಳು.

ಪಾಟೀಲ್ ಮನೆಗೆ ತೀರಾ ಬೇಕಾದವಳಾಗಿದ್ದಳು. ಅಂದರೆ ದತ್ತನ ಫೇವರಿಟ್, ಅಬ್ಬಕ್ಕ ತಾಯಿಗೂ ತುಂಬಾ ಇಷ್ಟವಾದವಳಾಗಿದ್ದಳು. ಆದರೆ ಇದೇ ಶರಾವತಿಗೆ ದೃಷ್ಟಿಯ ಮೇಲೆ ಹೊಟ್ಟೆಕಿಚ್ಚು ಸೃಷ್ಟಿಯಾಗಿ, ಏನೋ ಮಾಡಲು ಹೋಗಿ ಕಡೆಗೆ ಅವಳನ್ನೇ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುವಂತಾಯ್ತು.

Actress Ambika Re entry to Colors kannada serial Drustibottu

ದತ್ತನ ಮದುವೆ ಬಳಿಕ ಬ್ರೇಕ್

ಇತ್ತೀಚೆಗೆ ದತ್ತನ ಮದುವೆ ಆಯ್ತು. ಮದುವೆಯ ಬಳಿಕ ಮನೆ ಬಿಟ್ಟು ಹೋಗುವ ಸೀನ್ ಇತ್ತು. ಬೇಸರ ಮಾಡಿಕೊಂಡು ಹೋದ ಅಬ್ಬಕ್ಕ ಅಲಿಯಾಸ್ ಅಂಬಿಕಾ ಬಹಳ ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಅಬ್ಬಕ್ಕ ವಾಪಸ್ ಆಗಿದ್ದಾರೆ. ಮನೆಯ ಯಜಮಾನ್ತಿ, ದತ್ತನ ಪಾಲಿನ ದೇವರು ಈ ಅಬ್ಬಕ್ಕ. ದತ್ತ ಯಾರ ಮಾತನ್ನು ಬೇಕಾದರೂ ತೆಗೆದು ಹಾಕುವುದಿಲ್ಲ. ಈಗ ಅಬ್ಬಕ್ಕನ ನಿರ್ಧಾರವನ್ನು.

ದೃಷ್ಟಿ ಹೋಗ್ತಾಳೆಂದು ಖುಷಿ

ಬಹಳ ದಿನಗಳ ಬಳಿಕ ಅಮ್ಮ ಮನೆಗೆ ಬಂದಿದ್ದನ್ನು ಕಂಡು ಶರಾವತಿ ಖುಷಿ ಪಟ್ಟಿದ್ದಾಳೆ. ಯಾಕಂದ್ರೆ ದತ್ತನಿಗೆ ಇಷ್ಟವಿಲ್ಲದ ಮದುವೆ ಇದು ಎಂದುಕೊಂಡಿದ್ದಾಳೆ. ಹೀಗಾಗಿ ಅಮ್ಮ ದತ್ತನ ನೆಮ್ಮದಿಗೋಸ್ಕರ ದೃಷ್ಟಿಯನ್ನ ಹೊರಗೆ ಕಳುಹಿಸುತ್ತಾಳೆ ಎಂಬ ನಂಬಿಕೆ. ಅಬ್ಬಕ್ಕ ನೋಡಿದ ಹುಡುಗಿಯನ್ನ ದತ್ತ ಕಣ್ಮುಚ್ಚಿಕೊಂಡು ಒಪ್ಪಿದ್ದ. ಆದರೆ ಶರಾವತಿಯ ಆಟದಿಂದ ಎಲ್ಲವೂ ಉಲ್ಟಾ ಆಗಿತ್ತು. ಈಗ ಶರಾವತಿ ದೊಡ್ಡ ನಿರೀಕ್ಷೆಯಲ್ಲಿದ್ದಾಳೆ. ಅಮ್ಮನಿಂದ ದೊಡ್ಡ ನಿರ್ಧಾರ ಹೊರ ಬೀಳಲಿದೆ ಎಂದು ಎದುರು ನೋಡುತ್ತಿದ್ದಾಳೆ.

Actress Ambika Re entry to Colors kannada serial Drustibottu

ಅಬ್ಬಕ್ಕನ ನಡೆಗೆ ದೃಷ್ಟಿ ಕಂಗಾಲು

ಇನ್ನು ಮೊದಲಿನಿಂದಾನೂ ದೃಷ್ಟಿ ಈ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಎಲ್ಲರಿಗೂ ಕಾಫಿ, ಟೀ, ಊಟ, ತಿಂಡಿ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಳು. ಹಾಗೆಲ್ಲಾ ತುಂಬಾ ಖುಷಿಪಟ್ಟು ಕುಡಿಯುತ್ತಿದ್ದ ಅಬ್ಬಕ್ಕ, ಈಗ ದೃಷ್ಟಿ ಕಾಫಿ ಕೊಡಲು ಹೋದರೆ ಬೇಡ ಎನ್ನುತ್ತಿದ್ದಾಳೆ. ಇದು ಶರಾವತಿಗೆ ಇನ್ನಷ್ಟು ಪುಷ್ಠಿ ನೀಡುವಂತೆ ಆಗಿದೆ. ಅಬ್ಬಕ್ಕನ ನಡೆಗೆ ದೃಷ್ಟಿ ಒಂದು ಕ್ಷಣ ಕಂಗಲಾಗಿದ್ದಾಳೆ. ಅಬ್ಬಕ್ಕ ಅಮ್ಮನವರು ಯಾಕೆ ಹೀಗೆ ನಡೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಅವಳಿಗೆ.

ದತ್ತನ ಮದುವೆ ಬಗ್ಗೆ ಅಬ್ಬಕ್ಕ ನಿರ್ಧಾರ

ಮನೆಯಲ್ಲಿ ಎಲ್ಲರನ್ನು ಕರೆದು ಅಬ್ಬಕ್ಕ ಒಂದು ಗಟ್ಟಿ ನಿರ್ಧಾರವನ್ನು ಹೇಳುವ ತೀರ್ಮಾನ ಮಾಡಿದಳು. ಯಾರೂ ಕೂಡ ನಿರೀಕ್ಷೆಯನ್ನೇ ಮಾಡದಂತ ಉತ್ತರ ಅದು. ದತ್ತ ಹಾಗೂ ದೃಷ್ಟಿಯ ಮದುವೆಯನ್ನು ಅಧಿಕೃತ ಮಾಡಲು ತೀರ್ಮಾನಿಸಲಾಗಿದೆ. ಈಗ ದೃಷ್ಟಿ ಬರೀ ದೃಷ್ಟಿಯಲ್ಲ. ದೃಷ್ಟಿ ದತ್ತ ಪಾಟೀಲ್. ಸಮಾಜದ ಮುಂದೆ ಇಬ್ಬರ ಮದುವೆಯನ್ನು ತಿಳಿಸಲು ಸೂಚಿಸಲಾಗಿದೆ. ಹುಬ್ಬಳ್ಳಿ ಮಂದಿಯನ್ನು ಕರೆದು, ಊಟ ಹಾಕಿಸಿ, ಗಂಡ ಹೆಂಡತಿಯನ್ನು ಪರಿಚಯ ಮಾಡಿಕೊಡಲು ಅಬ್ಬಕ್ಕ ನಿರ್ಧಾರ ಮಾಡಿದ್ದಾರೆ. ಇದು ಶರಾವತಿ ಹಾಗೂ ತಂಗಿಯರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದತ್ತ ಕೂಡ ಶಾಕ್ ಆಗಿದ್ದಾರೆ.

More from Filmibeat

English summary
Drustibottu serial today episode. Here is the details about Ambika returs back;
Read more about: serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X