"ಜನರು ನನ್ನನ್ನು ಲವ್ ಮಾಕ್ಟೆಲ್ ಪಾತ್ರದಿಂದ ಗುರುತಿಸುವುದು ಖುಷಿ.. ಆದರೆ..."; ನಟಿ ಅಮೃತಾ ಅಯ್ಯಂಗಾರ್

By ಅನಿತಾ ಬನಾರಿ

ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಒಂದು ರೀತಿಯ ಕನಸಾದರೆ, ಮಾಡಿದ ಒಂದೆರಡು ಸಿನಿಮಾಗಳು ಒಳ್ಳೆ ಹೆಸರು ಕೊಟ್ಟಾಗ ವಿಭಿನ್ನ ಪಾತ್ರಗಳಲ್ಲೇ ನಟಿಸಬೇಕು, ಪಾತ್ರಗಳಲ್ಲಿ ಏಕತಾನತೆ ಇರಬಾರದು ಎಂಬುದೇ ಇನ್ನೊಂದು ರೀತಿಯ ಗುರಿ ಹಾಗೂ ಕನಸು.

ಹೀಗಿರುವಾಗ ಇಂದು ಸಿನಿಮಾ ಕ್ಷೇತ್ರದಲ್ಲಿ ನಟ ನಟಿಯರೆಂದು ಗುರುತಿಸಿಕೊಂಡಿರುವ ಅದೆಷ್ಟೋ ಜನರು ಒಂದೆರಡು ಸಿನಿಮಾ ಹಿಟ್ ಆದರೂ ನಂತರ ಒಳ್ಳೆಯ ಪಾತ್ರಗಳು ಸಿಗದೇ ಒದ್ದಾಡುತ್ತಿದ್ದಾರೆ.

Actress Amrutha Iyengar said she is happy when people recognize her through Love Mocktail movie

ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ ಅಮೃತಾ ಅಯ್ಯಂಗಾರ್ ಪಾತ್ರಗಳ ಏಕತಾನತೆ ಬಗ್ಗೆ ತಮ್ಮ ಅಸಹನೆಯನ್ನು ಹೊರ ಹಾಕಿದ್ದಾರೆ. "ನನ್ನ ಮುಂದಿನ ಸಿನಿಮಾ ನಟ ಶರಣ್ ಅವರೊಂದಿಗೆ. ಇದು ನನಗೆ ಲವ್ ಮಾಕ್ಟೇಲ್ ವೈಬ್ಸ್ ಅನ್ನೇ ನೀಡುತ್ತಿದೆ. ನನಗೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಲು ಬಹಳ ಇಷ್ಟ ಇದೆ. ಆದರೆ ಅಂತಹ ಪಾತ್ರಗಳು ಸಿಗುವುದು ಬಹಳ ವಿರಳ" ಎಂದಿದ್ದಾರೆ.

ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ಬಗ್ಗೆ ಮಾತನಾಡಿದವರು "ಅದೆಷ್ಟು ಬಾರಿ ಸಿನೆಮಾ ನಿರ್ದೇಶಕರು ನಮ್ಮನ್ನು ಸಂಪರ್ಕಿಸುವಾಗ ಸಂಭಾವನೆ ಒಂದೇ ಮುಖ್ಯ ಟಾಪಿಕ್ ಆಗಿರುತ್ತದೆ. ಕಥೆ ಹಾಗೂ ಪಾತ್ರದ ವೈವಿಧ್ಯತೆ ಸೆಕೆಂಡರಿ ವಿಚಾರವಾಗಿ ಉಳಿಯುತ್ತದೆ. ಒಳ್ಳೊಳ್ಳೆಯ ಪಾತ್ರಗಳಲ್ಲೇ ಗುರುತಿಸಿಕೊಳ್ಳಬೇಕು ಎಂದು ಕನಸು ಕಾಣುವ ನಟ ನಟಿಯರಿಗೆ ಇದೊಂದು ಬೇಸರದ ವಿಚಾರ. ಈ ಸಿನಿಮಾದಲ್ಲಿ ಸಂಭಾವನೆ ಇಷ್ಟು ಕೊಡುತ್ತೇವೆ ಓಕೆ. ಆದರೆ ಪಾತ್ರ ಹಾಗೂ ಕಥೆ ನಂತರ ಮಾತನಾಡೋಣ ಎಂದು ನಿರ್ದೇಶಕರು ಹೇಳುವಾಗ ಬೇಸರವಾಗುತ್ತದೆ" ಎಂದಿದ್ದಾರೆ.

"ಪಾತ್ರಗಳಾಗಿ ನಟಿಸಬೇಕೆಂದು ಕನಸು ಕಾಣುವಾಗ ಎಷ್ಟೋ ಬಾರಿ ಒಳ್ಳೆ ಸಿನಿಮಾಗಳು ಸಿಗದೇ ಕೈ ಖಾಲಿ ಮಾಡಿ ಕೂರುವ ಸಂದರ್ಭಗಳು ಸೃಷ್ಟಿಯಾಗುತ್ತವೆ. ಹಾಗಂತ ಸಂಭಾವನೆ ಅಷ್ಟನ್ನೇ ಫೋಕಸ್ ಮಾಡಿದರೆ, ವಿಭಿನ್ನ ಪಾತ್ರಗಳೇ ಸಿಗುವುದಿಲ್ಲ" ಎಂದು ಸಿನಿ ಜಗತ್ತಿನ ಕ್ರೂರ ಸತ್ಯವನ್ನು ನಟಿ ಅಮೃತ ಅಯ್ಯಂಗಾರ್ ಹೊರಹಾಕಿದ್ದಾರೆ .

Actress Amrutha Iyengar said she is happy when people recognize her through Love Mocktail movie

"ಎಷ್ಟೋ ಸಿನಿಮಾ ಕಥೆಗಳು ಪುರುಷ ಪ್ರಧಾನವಾಗಿರುತ್ತವೆ ಅಲ್ಲಲ್ಲಿ ಒಂದೆರಡು ಬಾರಿ ಹೀರೋಯಿನ್ ಬಂದು ಹೋಗುವ ಸೀಕ್ವೆನ್ಸ್ ಇರುತ್ತವೆ ಅಷ್ಟೇ, ಅಂಥ ಪಾತ್ರಗಳು ಚಾಲೆಂಜಿಂಗ್ ಆಗಿ ಇರುವುದಿಲ್ಲ. ಇಂದಿಗೂ ಜನ ನನ್ನನ್ನು ಲವ್ ಮಾಕ್ಟೆಲ್ ಪಾತ್ರದ ಮೂಲಕ ಗುರುತಿಸುವುದು ನನಗೆ ಸಂತೋಷ. ಆದರೆ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎಂಬುದು ಇತರೆ ನಟ ನಟಿಯರಂತೆ ನನ್ನದು ಒಂದು ದೊಡ್ಡ ಕನಸು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಾ ಹೇಳಿಕೊಂಡಿದ್ದಾರೆ ನಟಿ ಅಮೃತ ಅಯ್ಯಂಗಾರ್.

More from Filmibeat

English summary
Actress Amrutha Iyengar said that she likes to act in different types of roles:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X