'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದತ್ತನ ಹಳೆಯ ಲವರ್ ಎಂಟ್ರಿ; ನಟಿ ಅಮೃತ ಮೂರ್ತಿಯ ಹಿನ್ನೆಲೆಯೇನು?

By ಅನಿತಾ ಬನಾರಿ

ನಟಿ ಅಮೃತ ಮೂರ್ತಿ ಎಂದು ಹೇಳುವ ಬದಲು, 'ಕನ್ನಡತಿ' ಧಾರಾವಾಹಿಯ ಸುಚಿ ಎಂದರೆ ಎಲ್ಲರಿಗೂ ಬಹಳ ಬೇಗ ಪರಿಚಯವಾಗುತ್ತೆ. ಅಂದ ಹಾಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಧಾರಾವಾಹಿ ಆಗಿದ್ದ 'ಕನ್ನಡತಿ'ಯಲ್ಲಿ ಸುಚಿ ಪಾತ್ರದ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆದವರು ನಟಿ ಅಮೃತ ಮೂರ್ತಿ. ಈ ಧಾರಾವಾಹಿಯಲ್ಲಿ ಇವರು ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ನಾಯಕನ ತಂಗಿಯ ಪಾತ್ರದಲ್ಲಿ ಬಹಳ ಮಿಂಚಿದರು.

ಕನ್ನಡತಿ ಧಾರಾವಾಹಿಯ ನಾಯಕ ಹರ್ಷನ ನೆಚ್ಚಿನ ತಂಗಿ ಸುಚಿಯಾಗಿ ಕಾಣಿಸಿಕೊಂಡ ನಟಿ ಅಮೃತ ಮೂರ್ತಿ ತಮ್ಮ ನಟನೆಯ ಮೂಲಕ ಕನ್ನಡ ಜನಮನ ಗೆದ್ದರು. ಸದಾ ತಂಟೆ ತರಲೆಯೇ ಮಾಡಿಕೊಂಡು ಅಣ್ಣನ ಬೆನ್ನ ಹಿಂದೆ ಚೇಷ್ಟೆ ಮಾಡಿಕೊಂಡು ಓಡಾಡುತ್ತಿದ್ದ ಅಚ್ಚುಮೆಚ್ಚಿನ ತಂಗಿಯ ಪಾತ್ರ ಇದಾಗಿತ್ತು. ಧಾರಾವಾಹಿ ಕೊನೆವರೆಗೂ ಸುಚಿ ಪಾತ್ರಕ್ಕೆ ಅದರದ್ದೇ ಆದ ಮಹತ್ವವಿತ್ತು. ಅಣ್ಣನಿಗೆ ಎಲ್ಲವೂ ಒಳಿತಾಗಬೇಕೆಂದು ಬಯಸುವ ತಂಗಿ ಅಣ್ಣ ಹಾಗೂ ಅವನು ಇಷ್ಟಪಡುವ ಹುಡುಗಿಯನ್ನು ಒಂದು ಮಾಡುವ ಎಲ್ಲಾ ಮಸಲತ್ತುಗಳನ್ನು ಮಾಡುತ್ತಾ ಕಿರುತೆರೆ ಪ್ರೇಕ್ಷಕರ ಅದರಲ್ಲೂ ಕನ್ನಡತಿ ಧಾರಾವಾಹಿ ಪ್ರಿಯರ ಮನ ಗೆದ್ದಿತ್ತು ಈ ಪಾತ್ರ.

Actress Amrutha Murthy is playing Dutta Bhai s lover in Drishtibottu serial

ಈ ಧಾರಾವಾಹಿ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಒಂದರಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡರು ನಟಿ ಅಮೃತಾ ಮೂರ್ತಿ. ಆದರೆ ಕನ್ನಡತಿ ಧಾರವಾಹಿ ಕೊಟ್ಟಷ್ಟು ಪಾಪ್ಯುಲಾರಿಟಿಯನ್ನು ಆ ಪಾತ್ರ ಹಾಗೂ ಧಾರಾವಾಹಿ ಕೊಡಲಿಲ್ಲ.

ಸದ್ಯಕ್ಕೆ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಅಮೃತ. ಹೌದು, ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಚಾಕಲೇಟ್ ಹೀರೋ ವಿಜಯ್ ಸೂರ್ಯ ಅವರ ಅಭಿನಯದ 'ದೃಷ್ಟಿಬೊಟ್ಟು' ಧಾರಾವಾಹಿ ಬಹಳಷ್ಟು ಒಳ್ಳೆಯ ರೆಸ್ಪಾನ್ಸ್ ಮೂಲಕ ಸಾಗುತ್ತಿದೆ. ಇದರಲ್ಲಿ ರೌಡಿ ಬಾಯ್ ದತ್ತನ ಹಳೆಯ ಲವರ್ ಆಗಿ ಅಮೃತ ಮೂರ್ತಿ ಕಾಣಿಸಿಕೊಳ್ಳಲಿದ್ದಾರೆ.

Actress Amrutha Murthy is playing Dutta Bhai s lover in Drishtibottu serial

ಬಹಳ ವಿಭಿನ್ನ ಕಥಾ ಹಂದರವನ್ನು ಹೊಂದಿರುವ 'ದೃಷ್ಟಿಕೊಟ್ಟು' ಧಾರಾವಾಹಿ ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ, ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುತ್ತ ಮುಂದೆ ಸಾಗುತ್ತಿದೆ. ಇದರಲ್ಲಿ ದತ್ತ ಎಂಬ ನಾಯಕನ ಪಾತ್ರದಲ್ಲಿ ನಟ ವಿಜಯ್ ಸೂರ್ಯ ಅವರು ಬಹಳ ಅದ್ಭುತವಾಗಿ ನಟಿಸುತ್ತಿದ್ದಾರೆ. ಮೆಕಾನಿಕ್ ಆಗಿದ್ದ ದತ್ತ ಇದ್ಯಾಕೆ ರೌಡಿ ಬಾಯ್ ಆದ ಎಂಬ ಪ್ರಶ್ನೆಯ ಹಿಂದೆ ಬಹುದೊಡ್ಡ ಕಥೆಯೇ ಇದೆ. ಅವನ ಲವ್ ಬ್ರೇಕ್ ಅಪ್ ಕಥೆಯೇ ದತ್ತನಿಗೆ ಹೆಣ್ಣು ಮಕ್ಕಳ ಮೇಲೆ ದ್ವೇಷ ಬರಲು ಸಾಧ್ಯ ಎಂದು ಅವನೇ, ಒಂದೆರಡು ಬಾರಿ ಹೇಳಿದ್ದಾನೆ. ಸದ್ಯ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದತ್ತನ ಹಳೆಯ ಲವ್ ಸ್ಟೋರಿ ರಿವೀಲ್ ಆಗುತ್ತಿದ್ದು ನಟಿ ಅಮೃತ ಮೂರ್ತಿ ಅವರೇ ದತ್ತಾಭಾಯ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆಯ ನಟನೆಯನ್ನು ಈಗಾಗಲೇ ಕಿರುತೆರೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದು 'ದೃಷ್ಟಿಕೊಟ್ಟು' ಧಾರಾವಾಹಿಯಲ್ಲಿ ಯಾವ ರೀತಿಯ ಪಾತ್ರದಲ್ಲಿ ಈಕೆ ಮೂಡಿ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಅಂದ ಹಾಗೆ ನಟಿ ಅಮೃತ ಮೂರ್ತಿ ಅವರಿಗೆ ಮೊದಲಿನಿಂದಲೂ ನಟನೆಯಲ್ಲಿ ಬಹಳ ಆಸಕ್ತಿ ಇತ್ತಂತೆ. ಪಿಯುಸಿ ನಂತರ ಆಗಾಗ ಆಡಿಶನ್ಗಳನ್ನು ಕೊಡುತ್ತಿದ್ದ ಈಕೆ ಹತ್ತು ಹಲವಾರು ಆಡಿಶನ್‌ಗಳ ನಂತರ ಕನ್ನಡತಿ ಧಾರಾವಾಹಿಯ ಸುಚಿ ಪಾತ್ರಕ್ಕೆ ಆಯ್ಕೆಯಾದರು. ಅದಾದ ಮೇಲೆ ಆಗಾಗ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡು ವೃತ್ತಿಪರ ಫ್ಯಾಶನ್ ಡಿಸೈನರ್ ಆಗಿದ್ದಾರೆ.

ಫ್ಯಾಶನ್ ಲೋಕದಿಂದ ಹೊರಬರಲು ಇಷ್ಟವಿಲ್ಲದ ನಟಿ ಅಮೃತ ಮೂರ್ತಿ ಅವರು ನಟನೆಯನ್ನು ಕೇವಲ ಹವ್ಯಾಸವಾಗಿ ಇಡಲು ಇಚ್ಛೆ ಪಡುತ್ತಾರಂತೆ. ಧಾರಾವಾಹಿಗಳಷ್ಟೇ ಅಲ್ಲದೆ ಅಪರಾಧಿ ನಾನಲ್ಲ ಎಂಬ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ನಟಿ ಅಮೃತ ಮೂರ್ತಿ. ಸದ್ಯಕ್ಕಂತು 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿನ ಇವರ ಪಾತ್ರ ಯಾವ ರೀತಿ ಕಾಣಿಸಿಕೊಳ್ಳಲಿದೆ ಎಂಬುದೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

More from Filmibeat

English summary
Actress Amrutha Murthy is playing Dutta Bhai's lover in Drishtibottu serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X