ಸಮನ್ವಿ ಮಾಡಿದ್ದ ಕೊನೆಯ ವೀಡಿಯೋ ಶೇರ್ ಮಾಡಿಕೊಂಡ ತಾಯಿ ಅಮೃತಾ!

ತನ್ನ 6 ವರ್ಷದ ಮಗಳನ್ನು ಕಳೆದುಕೊಂಡಿರೋ ದುಃಖದಲ್ಲಿರೋ ತಾಯಿ ಅಮೃತಾ ಮಗಳ ನೆನಪಲ್ಲೇ ದಿನ ಸಾಗಿಸುತ್ತಿದ್ದಾರೆ. ರಿಯಾಲಿಟಿ ಶೊ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದ್ದ ಸಮನ್ವಿ ಸಾವು ಇಡೀ ಕರ್ನಾಟಕ ಜನತೆಗೆ ಶಾಕ್ ಉಂಟು ಮಾಡಿತ್ತು. ಟಿವಿ ಪರದೆ ಮೇಲೆ ಅಷ್ಟೊಂದು ನಕ್ಕು, ನಗಿಸುತ್ತಿದ್ದ ಸಮನ್ವಿ ಇಂದು ನಮ್ಮ ಜೊತೆಗಿಲ್ಲ.

ಕುಟುಂಬ ಸದಸ್ಯರಿಗೆ ಈ ನೋವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ತಾಯಿ ಅಮೃತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಮನ್ವಿಯ ಲಾಸ್ಟ್ ರೀಲ್ಸ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಧಾರಾವಾಹಿ ಮತ್ತು ಸಿನಿಮಾಗಳ ಜನಪ್ರಿಯ ನಟಿ ಅಮೃತಾ ನಾಯ್ಡು ಮತ್ತು ಅವರ ಪುತ್ರಿ ಸಮನ್ವಿ ಜನವರಿ 13ರಂದು ಶಾಪಿಂಗ್ ಮುಗಿಸಿಕೊಂಡು ಹಿಂದಿರುಗಿ ಬರುವಾಗ ಕನಕಪುರ ರಸ್ತೆ ಮಾರ್ಗದಲ್ಲಿರುವ ಕೊಣನಕುಂಟೆ ಬಳಿ ರಸ್ತೆ ಬಳಿ ಅಪಘಾತವಾಗಿ ಮೃತಪಟ್ಟಿದ್ದಾರೆ. ಅಮೃತಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.

ಮಗಳು ಆರು ವರ್ಷದ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟ ಸುದ್ದಿ ಭಾರೀ ನೋವುಂಟು ಮಾಡಿತ್ತು. ಇದೇ ನೋವಿನಲ್ಲಿ ಇರುವ ತಾಯಿ ಅಮೃತಾ ಮಗಳು ಸಮನ್ವಿ ಮಾಡಿದ್ದ ರೀಲ್ಸ್ ಒಂದನ್ನು ಇಂದು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಮುಂದೆ ನೋಡಿ.

ಸಮನ್ವಿ ಕೊನೆಯ ರೀಲ್ಸ್ ಶೇರ್ ಮಾಡಿದ ತಾಯಿ ಅಮೃತಾ

ಸಮನ್ವಿ ಕೊನೆಯ ರೀಲ್ಸ್ ಶೇರ್ ಮಾಡಿದ ತಾಯಿ ಅಮೃತಾ

ಈ ರೀಲ್ಸ್ ಆಕ್ಸಿಡೆಂಟ್ ಆದ ದಿನವೇ ಅಂದರೇ ಶಾಪಿಂಗ್‌ಗೆ ಎಂದು ತೆರಳುವ ಮುನ್ನ ಮನೆಯಲ್ಲಿ ಮಾಡಿರೋ ರೀಲ್ಸ್. ಈ ರೀಲ್ಸ್ ಮಾಡಿ ತಾಯಿ ಅಮೃತಾ ಮತ್ತು ಸಮನ್ವಿ ಶಾಪಿಂಗ್‌ಗೆ ಎಂದು ತೆರಳಿದ್ದರು. ಆದರೆ ದುರದೃಷ್ಟಕರವಾಗಿ ಹೋದ ಸಮನ್ವಿ ಮತ್ತೆ ಮನೆಗೆ ಬಂದಿದ್ದು ಹೆಣವಾಗಿ. ಸದ್ಯ ಅಮೃತಾ ಅವರು ಶೇರ್ ಮಾಡಿಕೊಂಡಿರುವ ಈ ರೀಲ್ಸ್‌ನಲ್ಲಿ ಮಗಳು ಸಮನ್ವಿ ಅಮ್ಮನಿಗೆ ಐ ಲವ್‌ ಯೂ ಎಂದು ಅಮ್ಮ ಅಮೃತಾಗೆ ಮುತ್ತಿಕ್ಕುವುದನ್ನು ನೋಡಿದರೇ ಮನಸ್ಸು ಭಾರವಾಗುತ್ತೆ. ಕಣ್ಣ ಮುಂದೆಯೇ ಹೀಗೆ ಖುಷಿ ಆಗಿದ್ದ ಮಗುವನ್ನು ಕಳೆದುಕೊಂಡಿರೋದು ಕುಟುಂಬದವರಿಗೆ ಇನ್ನೆಷ್ಟು ನೋವು ತಂದಿರಲ್ಲಾ ಹೇಳಿ.

ಅಮೃತಾಗೆ ಧೈರ್ಯ ತುಂಬುತ್ತಿರುವ ಅಭಿಮಾನಿಗಳು

ಇನ್ನು ಈ ವಿಡಿಯೋಗೆ ತಾಯಿ ಅಮೃತಾ "ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು, ನನ್ನನ್ನು ನಾನು ಲವ್ ಮಾಡಿಕೊಳ್ಳುತ್ತೀನಿ" ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋಗೆ ಹಲವರು ಕಮೆಂಟ್ ಮಾಡುತ್ತಿದ್ದು ತಾಯಿ ಅಮೃತಾಗೆ ಧೈರ್ಯ ತುಂಬುತ್ತಿದ್ದಾರೆ. ಮಗಳು ಮತ್ತೆ ಹುಟ್ಟಿ ಬರುತ್ತಾಳೆ ಎಂದು ಸಮಾಧಾನ ಮಾಡುತ್ತಿದ್ದಾರೆ. ಈ ವೀಡಿಯೋ ಸಾಕಷ್ಟು ವೀವ್ಸ್ ಕೂಡ ಕಂಡಿದ್ದು, ಹಲವರು ಇದನ್ನು ತಮ್ಮ ತಮ್ಮ ವಾಲ್‌ಗಳಲ್ಲಿ ಪೋಸ್ಟ್‌ ಮಾಡಿಕೊಳ್ಳುತ್ತಿದ್ದಾರೆ.

ಮತ್ತೆ ಹುಟ್ಟಿ ಬರುತ್ತಾಳಾ ಸಮನ್ವಿ ?

ಮತ್ತೆ ಹುಟ್ಟಿ ಬರುತ್ತಾಳಾ ಸಮನ್ವಿ ?

ಇನ್ನು ಈ ಹಿಂದೆ ತಾಯಿ ಅಮೃತಾ ಜನರ ಬಳಿಯಲ್ಲಿ ಒಂದು ಮನವಿಯನ್ನು ಕೂಡ ಮಾಡಿಕೊಂಡಿದ್ದರು. ಅದರಲ್ಲಿ ಅವರು "ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ ನಾಲ್ಕು ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾರೂ, ನನ್ನ ಕಂದಮ್ಮನನ್ನು ಆ ಭಗವಂತ ಮರಳಿ ಕಳಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ, ನನ್ನ ಸಮನ್ವಿಯ ಪುನಃ ಬರುವಿಕೆಗೆ ಸಹಾಯ ಮಾಡಿ, ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಅವಳು ಮರಳಿ ಬರಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ. ಆಗಷ್ಟೇ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ" ಎಂದು ಬರೆದುಕೊಂಡಿದ್ದರು.

ಈ ಘಟನೆಯಿಂದ ಹೊರಬರಲಾಗದೇ ಕುಟುಂಬಸ್ತರ ಗೋಳಾಟ

ಈ ಘಟನೆಯಿಂದ ಹೊರಬರಲಾಗದೇ ಕುಟುಂಬಸ್ತರ ಗೋಳಾಟ

ಕೋಣನಕುಂಟೆಯ ವಾಜರಹಳ್ಳಿಯ ಬಳಿ ಪುತ್ರಿ ಸಮನ್ವಿ ಜೊತೆಗೆ ಅಮೃತಾ ನಾಯ್ಡು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದಳು. ಅಮೃತಾಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ.

More from Filmibeat

English summary
Actress Amrutha Naidu shares her late daughters last reels
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X